ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ನ 50,000 ಕೋಟಿ ರೂ. ದ್ರವ್ಯತೆ ಸೌಲಭ್ಯದಡಿ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ (ಎಸ್‌ಐಐ) 500 ಕೋಟಿ ರೂ. ಮಂಜೂರು ಮಾಡಿದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಎಂಬ ಹೆಗ್ಗಳಿಕೆ ಪಡೆದಿದೆ.
ಎಸ್‌ಐಐ ಕೋವಿಶೀಲ್ಡ್ ಲಸಿಕೆ ತಯಾರಿಸುತ್ತಿದ್ದು, ಇದು ಕೊರೊನಾ ಸೋಂಕಿಗೆ ಭಾರತದಲ್ಲಿ ಅನುಮೋದಿಸಲಾದ ಮೂರು ಲಸಿಕೆಗಳಲ್ಲಿ ಒಂದಾಗಿದೆ. ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸ್ವದೇಶಿ ಭಾರತ್ ಬಯೋಟೆಕ್‌ಗೆ ಕ್ರೆಡಿಟ್ ಲೈನ್ ಅನ್ನು ಮಂಜೂರು ಮಾಡಿದೆ. ಆದರೆ, ಫಾರ್ಮಾ ಕಂಪನಿಗೆ ವಿತರಿಸಿದ ಮೊತ್ತವು ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಬ್ಯಾಂಕ್ ಆಫ್ ಬರೋಡಾ ಇಂದು ಸೀರಮ್ ಸಂಸ್ಥೆಗೆ 500 ಕೋಟಿ ರೂ. ಮಂಜೂರು ಮಾಡಿದೆ ಈ ಬಗ್ಗೆ ತಿಳಿದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರದ ಸುದ್ದಿಗೋಷ್ಠಿಯಲ್ಲಿ ಕೋವಿಡ್ -19 ಸಂಬಂಧಿತ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು 50,000 ರೂ. ಸಾಲ ನೀಡುವ ಕಾರ್ಯಕ್ರಮವನ್ನು ಘೋಷಿಸಿದರು. ಈ ದ್ರವ್ಯತೆ ಸೌಲಭ್ಯದಡಿಯಲ್ಲಿ ಬ್ಯಾಂಕ್ಗಳು ಆರೋಗ್ಯ ಕ್ಷೇತ್ರದ ಕಂಪನಿಗಳಿಗೆ ಸಾಲ ನೀಡಲು ಸಾಧ್ಯವಾಗಲಿದೆ. ಅದು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರವು ಅನುಮತಿಸಿದ ನಂತರ ಬೇಡಿಕೆ ಹೆಚ್ಚಾದಂತೆ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದಿದ್ದರು.