ETV Bharat / business

ಮಾರ್ಚ್​ನಲ್ಲಿ ಬಜಾಜ್ ಆಟೋ ಮಾರಾಟ ಶೇ 52ರಷ್ಟು ಬೆಳವಣಿಗೆ: ಆದ್ರೂ ಮೈನಸ್​ನಿಂದ ಮೇಲೆದ್ದಿಲ್ಲ!

ಕಳೆದ ತಿಂಗಳು ಕಂಪನಿಯ ಒಟ್ಟು ದೇಶೀಯ ಮಾರಾಟವು 1,98,551 ಯುನಿಟ್ ಆಗಿದ್ದರೆ, ಹಿಂದಿನ ವರ್ಷದ ಅವಧಿಯಲ್ಲಿ ಇದು 1,16,541 ಯುನಿಟ್ ಆಗಿತ್ತು ಎಂದು ಬಜಾಜ್ ಆಟೋ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

Bajaj Auto
Bajaj Auto
author img

By

Published : Apr 2, 2021, 4:46 PM IST

ನವದೆಹಲಿ: ಮಾರ್ಚ್‌ನಲ್ಲಿ ಒಟ್ಟಾರೆ ವಾಹನಗಳ ಮಾರಾಟ 3,69,448 ಯುನಿಟ್‌ಗಳಷ್ಟು ಆಗಿದೆ ಎಂದು ಬಜಾಜ್ ಆಟೋ ತಿಳಿಸಿದೆ.

ಕೋವಿಡ್​-19 ನೇತೃತ್ವದ ಅಡೆತಡೆಗಳ ನಡುವೆ ಪುಣೆ ಮೂಲದ ಕಂಪನಿಯು 2020ರ ಮಾರ್ಚ್‌ನಲ್ಲಿ 2,42,575 ಯುನಿಟ್‌ಗಳನ್ನು ರವಾನಿಸಿದೆ.

ಕಳೆದ ತಿಂಗಳು ಕಂಪನಿಯ ಒಟ್ಟು ದೇಶೀಯ ಮಾರಾಟವು 1,98,551 ಯುನಿಟ್ ಆಗಿದ್ದರೆ, ಹಿಂದಿನ ವರ್ಷದ ಅವಧಿಯಲ್ಲಿ ಇದು 1,16,541 ಯುನಿಟ್ ಆಗಿತ್ತು ಎಂದು ಬಜಾಜ್ ಆಟೋ ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಬಜಾಜ್ ಆಟೋ ಒಟ್ಟು ದ್ವಿಚಕ್ರ ವಾಹನ ಮಾರಾಟ ಕಳೆದ ತಿಂಗಳು 3,30,133 ಯುನಿಟ್ ಆಗಿತ್ತು. ಇದು 2020ರ ಮಾರ್ಚ್​ನಲ್ಲಿ 2,10,976 ಯೂನಿಟ್​ಗಳನ್ನು ಪೂರೈಸಿತ್ತು.

ಒಟ್ಟಾರೆ ವಾಣಿಜ್ಯ ವಾಹನಗಳ ಮಾರಾಟ ಮಾರ್ಚ್‌ನಲ್ಲಿ 39,315 ಯುನಿಟ್‌ಗಳಷ್ಟಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 31,599 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ತಿಂಗಳು ತನ್ನ ಒಟ್ಟು ರಫ್ತು 1,70,897 ಯುನಿಟ್ ಆಗಿದೆ. ಇದು 2020ರ ಮಾರ್ಚ್​ನಲ್ಲಿ 1,26,034 ಯುನಿಟ್‌ಗಳಿತ್ತು ಎಂದು ಬಜಾಜ್ ಆಟೋ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಚಿಂಗಾರಿ ಆ್ಯಪ್​ಗೆ ಸಲ್ಮಾನ್‌ ಖಾನ್‌ ಬ್ರಾಂಡ್ ಅಂಬಾಸಿಡರ್

2020-21ರ ಹಣಕಾಸು ವರ್ಷದಲ್ಲಿ ಕಂಪನಿಯು 39,72,914 ಯುನಿಟ್‌ಗಳ ಮಾರಾಟದ ವರದಿ ಮಾಡಿದೆ. ಇದು 2019-20ರಲ್ಲಿ 46,15,212 ಯುನಿಟ್‌ಗಳಿಂದ ಶೇ 14ರಷ್ಟು ಕಡಿಮೆಯಾಗಿದೆ.

2019-20ರ ಹಣಕಾಸು ವರ್ಷದಲ್ಲಿನ 24,44,107 ಯುನಿಟ್‌ಗಳಿಗೆ ಹೋಲಿಸಿದರೆ ಕಳೆದ ಹಣಕಾಸು ವರ್ಷದಲ್ಲಿ ದೇಶೀಯ ಮಾರಾಟವು ಶೇ 21ರಷ್ಟು ಕುಸಿದು 19,18,667 ಯೂನಿಟ್​ಗಳಿಗೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.