ನವದೆಹಲಿ: ಪಾಕಿಸ್ತಾನದ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಏರ್ ಇಂಡಿಯಾ ಬಗ್ಗೆ ಅನಿರೀಕ್ಷಿತ ಪ್ರಶಂಸೆ ವ್ಯಕ್ತ ಪಡಿಸಿದೆ.
ಏರ್ ಇಂಡಿಯಾ ಭಾರತದಿಂದ ಫ್ರಾಂಕ್‌ಫರ್ಟ್‌ಗೆ ಪರಿಹಾರ ಸಾಮಗ್ರಿಗಳೊಂದಿಗೆ ವಿಶೇಷ ವಿಮಾನಗಳ ಸೇವೆ ಒದಗಿಸುತ್ತಿತ್ತು. ಕೊರೊನಾ ವೈರಸ್ ವಿಶ್ವದಾದ್ಯಂತ ವ್ಯಾಪಿಸಿ ಸಾವಿರಾರು ಜನರನ್ನು ಬಲಿತೆಗೆದುಕೊಂಡು ವಿಮಾನಗಳ ಹಾರಾಟವನ್ನೇ ದುರ್ಬಲಗೊಳಿಸಿದೆ. ಇಂತಹ ವಿಷಮ ಸ್ಥಿತಿಯ ನಡುವೆಯೂ ಏರ್ ಇಂಡಿಯಾ, ಯುರೋಪಿಯನ್ ಪ್ರಜೆಗಳನ್ನು ಸ್ಥಳಾಂತರಿಸುವಲ್ಲಿ ಯಶಕಂಡಿದೆ.
ಪಾಕಿಸ್ತಾನ ಎಟಿಸಿ ಯುರೋಪ್ಗೆ ನಮ್ಮ ವಿಶೇಷ ವಿಮಾನ ಕಾರ್ಯಾಚರಣೆಯನ್ನು ಶ್ಲಾಘಿಸುತ್ತಿರುವುದನ್ನು ಕೇಳಿದಾಗ ನನಗೆ ಮತ್ತು ಇಡೀ ಏರ್ ಇಂಡಿಯಾ ಸಿಬ್ಬಂದಿಗೆ ಬಹಳ ಹೆಮ್ಮೆಯ ಕ್ಷಣವಾಗಿದೆ ಎಂದು ವಿಶೇಷ ವಿಮಾನಗಳ ಹಿರಿಯ ಕ್ಯಾಪ್ಟನ್ ಎಎನ್‌ಐಗೆ ತಿಳಿಸಿದೆ.
ನಾವು ಪಾಕಿಸ್ತಾನದ ವಿಮಾನ ಮಾಹಿತಿ ವ್ಯಾಪ್ತಿ ಒಳಗೆ (ಎಫ್‌ಐಆರ್) ಪ್ರವೇಶಿಸುತ್ತಿದ್ದಂತೆ, ಪಾಕ್ನ ವಾಯು ಸಂಚಾರ ನಿಯಂತ್ರಕರು (ಎಟಿಸಿ) ನಮಗೆ 'ಅಸ್ಸಲಾಮ್ ಅಲೈಕುಮ್!' ಫ್ರಾಂಕ್‌ಫರ್ಟ್‌ಗೆ ಸಾಗುತ್ತಿರುವ ಏರ್ ಇಂಡಿಯಾ ಪರಿಹಾರ ವಿಮಾನಗಳನ್ನು ಕರಾಚಿಯ ನಿಯಂತ್ರಣ ಕಚೇರಿ ಸ್ವಾಗತಿಸುತ್ತದೆ ಎಂದಿದ್ದಾರೆ ಎಂದು ಎಟಿಸಿ ಹೇಳಿಕೆಯನ್ನು ಉಲ್ಲೇಖಿಸಿದ್ದು ಗಮನಾರ್ಹವಾಗಿದೆ.
ನೀವು ಫ್ರಾಂಕ್‌ಫರ್ಟ್‌ಗೆ ಪರಿಹಾರ ವಿಮಾನಗಳನ್ನು ನಿರ್ವಹಿಸುತ್ತಿದ್ದೀರಾ ಎಂಬುದನ್ನು ದೃಢೀಕರಿಸಿ ಎಂದು ಪಾಕ್ ಎಟಿಸಿ ಕೇಳಿತು. ನಿರ್ಗಮನ ಸ್ಥಳಕ್ಕೆ ನಿಮ್ಮನ್ನು ನೇರವಾಗಿ ತೆರವುಗೊಳಿಸಲಾಗಿದೆ ಕೆಬೂಡ್ ವಿನಂತಿಯಂತೆ ಕೆಬುಡ್ (ನಿರ್ಗಮನ) ದಾಟಿದೆ ಎಂದು ಎಟಿಸಿಯಿಂದ ಪ್ರತಿಕ್ರಿಯೆ ಬಂತ್ತು. ಏರ್ ಇಂಡಿಯಾ ಕ್ಯಾಪ್ಟನ್ "ನೇರ ಕೆಬುಡ್ ಅನ್ನು ತೆರವುಗೊಳಿಸಲಾಗಿದೆ, ಧನ್ಯವಾದಗಳು" ಎಂದು ಪ್ರತ್ಯುತ್ತರ ನೀಡಿದರು.
ಸದಾ ಭಾರತದ ವಿರುದ್ಧ ವಿಷಕಾರುವ ಪಾಕಿಸ್ತಾನ ಈ ಸಂದರ್ಭದಲ್ಲಿ ಏರ್ ಇಂಡಿಯಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿತು. ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನೀವು ವಿಮಾನಗಳನ್ನು ನಿರ್ವಹಿಸುತ್ತಿದ್ದೀರಿ ಎಂದು ನಾವು ಹೆಮ್ಮೆ ಪಡುತ್ತೇವೆ. ಒಳ್ಳೆಯದಾಗಲಿ!" ಎಂದು ಅದು ಹಾರೈಸಿತು. "ತುಂಬಾ ಧನ್ಯವಾದಗಳು" ಎಂದು ಭಾರತದ ರಾಷ್ಟ್ರೀಯ ವಾಹಕದ ಕ್ಯಾಪ್ಟನ್ ಪ್ರತಿಕ್ರಿಯಿಸಿದರು.