ನವದೆಹಲಿ: ಆ್ಯಪಲ್ ತನ್ನ ಆನ್‌ಲೈನ್ ಸ್ಟೋರ್ನ ಪ್ರಬಲ ಪ್ರದರ್ಶನದಿಂದಾಗಿ ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದಲ್ಲಿ ತನ್ನ ವ್ಯವಹಾರ ದ್ವಿಗುಣ ಮಾಡಿಕೊಂಡಿದೆ. ಟೆಕ್ ದೈತ್ಯವು ತನ್ನ ಉತ್ತಮ ಬೆಳವಣಿಗೆ ಪಥ ಮುಂದುವರಿಸುತ್ತಿದೆ ಎಂದು ಸಿಇಒ ಟಿಮ್ ಕುಕ್ ಹೇಳಿದ್ದಾರೆ.
ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಆ್ಯಪಲ್ 2020ರ ಡಿಸೆಂಬರ್ 26ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಜಾಗತಿಕವಾಗಿ 111.4 ಬಿಲಿಯನ್ ಡಾಲರ್ ಆದಾಯ ದಾಖಲಿಸಿದೆ. ಇದು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 21ರಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಟ್ಟದ ತ್ರೈಮಾಸಿಕದ ಆದಾಯ ಶೇ 64ರಷ್ಟು ಏರಿಕೆಯಾಗಿದೆ.
ಇದನ್ನೂ ಓದಿ: ಮೋದಿ ಸರ್ಕಾರದಿಂದ 18 ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ: ಬಜೆಟ್ನಲ್ಲಿ ಪ್ರೈವೇಟೈಸೇಷನ್ ನೀತಿ ಘೋಷಣೆ!
"... ನೀವು ಭಾರತವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ನಾವು ಕಳೆದ ತ್ರೈಮಾಸಿಕದಲ್ಲಿ ನಮ್ಮ ವ್ಯವಹಾರವನ್ನು ದ್ವಿಗುಣಗೊಳಿಸಿದ್ದೇವೆ. ಆದರೆ, ನಮ್ಮ ಸಂಪೂರ್ಣ ವ್ಯವಹಾರದ ಮಟ್ಟವು ಲಭ್ಯವಿರುವ ಅವಕಾಶದ ಗಾತ್ರಕ್ಕೆ ಹೋಲಿಸಿದರೆ ಇನ್ನೂ ಕಡಿಮೆಯಾಗಿದೆ" ಎಂದು ಕುಕ್ ತಿಳಿಸಿದ್ದಾರೆ.
ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸ್ಯಾಮ್‌ಸಂಗ್ ಮತ್ತು ಒನ್‌ಪ್ಲಸ್‌ನಂತಹ ಪ್ರತಿಸ್ಪರ್ಧಿ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಆಕ್ರಮಣಕಾರಿಯಾಗಿ ವಿಸ್ತರಿಸಿಕೊಳ್ಳುತ್ತಿವೆ.
ಭಾರತದಲ್ಲಿ ನಮ್ಮ ಪಾಲು ಸಾಕಷ್ಟು ಕಡಿಮೆಯಾಗಿದೆ. ಆದರೆ, ಇದು ವರ್ಷದ ಹಿಂದಿನ ತ್ರೈಮಾಸಿಕದಿಂದ ಸುಧಾರಣಡೆ ಕಂಡಿದೆ. ನಮ್ಮ ವ್ಯವಹಾರವು ಆ ಅವಧಿಯಲ್ಲಿ ಸರಿಸುಮಾರು ದ್ವಿಗುಣಗೊಂಡಿದೆ. ಹೀಗಾಗಿ, ಈ ಪಥದ ಬಗ್ಗೆ ನಮಗೆ ತುಂಬಾ ಉತ್ತಮ ವಿಶ್ವಾಸವಿದೆ ಎಂದರು.