ನವದೆಹಲಿ: ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಕ್ರಿಯರಾಗಿರುತ್ತಾರೆ. ಟ್ವಿಟರ್‌ನಲ್ಲಿ ವೈರಲ್ ವಿಡಿಯೋಗಳಿಗೆ ಬಹು ಬೇಗನೆ ಪ್ರತಿಕ್ರಿಯಿಸುತ್ತಾರೆ. ಅವರು ಹಂಚಿಕೊಳ್ಳುವ ವಿಡಿಯೋಗಳು ಸಹ ಅಷ್ಟೇ ವೇಗವಾಗಿ ವೈರಲ್ ಆಗುತ್ತವೆ. ಈಗ ಧರ್ಮಸ್ಥಳದಲ್ಲಿನ ಒಂದು ವಿಡಿಯೋ ಅನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಮನ ಗೆದ್ದಿದೆ.
ಆನಂದ್ ಮಹೀಂದ್ರಾ ಅವರು ಎತ್ತಿನ ಬಂಡಿಯ ವಿಡಿಯೋ ಅನ್ನು ಪೋಸ್ಟ್ ಮಾಡಿದ್ದಾರೆ. ಎತ್ತೊಂದು ಕಾರಿನ ಕ್ಯಾಬಿನ್ ಹೊಂದಿರುವ ಗಾಡಿಯನ್ನು ಧರ್ಮಸ್ಥಳದ ರಸ್ತೆಯಲ್ಲಿ ಎಳೆದೊಯ್ಯುತ್ತಿದೆ.
-
I don’t think @elonmusk & Tesla can match the low cost of this renewable energy-fuelled car. Not sure about the emissions level, though, if you take methane into account... pic.twitter.com/C7QzbEOGys
— anand mahindra (@anandmahindra) December 23, 2020 " class="align-text-top noRightClick twitterSection" data="
">I don’t think @elonmusk & Tesla can match the low cost of this renewable energy-fuelled car. Not sure about the emissions level, though, if you take methane into account... pic.twitter.com/C7QzbEOGys
— anand mahindra (@anandmahindra) December 23, 2020I don’t think @elonmusk & Tesla can match the low cost of this renewable energy-fuelled car. Not sure about the emissions level, though, if you take methane into account... pic.twitter.com/C7QzbEOGys
— anand mahindra (@anandmahindra) December 23, 2020
ಮಹೀಂದ್ರಾ ತಮ್ಮ ಟ್ವೀಟ್‌ನಲ್ಲಿ, ಎಲೋನ್ ಮಸ್ಕ್ ಮತ್ತು ಟೆಸ್ಲಾ ಈ ನವೀಕರಿಸಬಹುದಾದ ಇಂಧನ ಕಾರನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು ನಾನು ಭಾವಿಸುವುದಿಲ್ಲ. ಹೊಗೆ ಹೊರಸೂಸುವಿಕೆಯ ಮಟ್ಟದ ಬಗ್ಗೆ ಖಚಿತವಾಗಿಲ್ಲ. ಆದರೂ, ನೀವು ಮೀಥೇನ್ ಅನ್ನು ಗಣನೆಗೆ ತೆಗೆದುಕೊಂಡರೆ ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಲಸಿಕೆ ವಿತರಣೆಗೆ ಭಾರತ ಸನ್ನದ್ಧ, ಸೋಂಕಿತರೂ ತೆಗೆದುಕೊಳ್ಳಬೇಕು: ಭಾರತ್ ಬಯೋಟೆಕ್ ಅಧ್ಯಕ್ಷ
ಜಗತ್ತಿನಾದ್ಯಂತ ವಾಯುಮಾಲಿನ್ಯದ ಬಗೆಗಿನ ಕಾಳಜಿ ಹೆಚ್ಚಾಗುತ್ತಿದೆ ಎಲೆಕ್ಟ್ರಿಕ್ ಕಾರುಗಳತ್ತ ಕಂಪನಿಗಳು ವಾಲುತ್ತಿವೆ. ಈ ವ್ಯಾಮೋಹದಲ್ಲಿ ಮುಂಚೂಣಿಯಲ್ಲಿರುವ ಎಲೋನ್ ಮಾಸ್ಕ್ ಸಾರಥ್ಯದ ಟೆಸ್ಲಾ ಕಂಪನಿಯು ವಿಶ್ವದಲ್ಲೇ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಟೆಸ್ಲಾ ಕಾರುಗಳು ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ. ಇದೀಗ ಟೆಸ್ಲಾ ನೂತನ ಲೂಸಿಡ್ ಏರ್ ಸೆಡಾನ್ ಕಾರು ಬಿಡುಗಡೆ ಮಾಡುತ್ತಿದೆ. ಇದರ ದರವು ಅತ್ಯಧಿಕವಾಗಿ ಇರಲಿದೆ ಎನ್ನಲಾಗುತ್ತಿದೆ. ಹೀಗಾಗಿ, ಆನಂದ್ ಮಹೀಂದ್ರಾ ಅವರು ನವೀಕರಿಸಬಹುದಾದ ಇಂಧನ ಕಾರನ್ನು ಕಡಿಮೆ ವೆಚ್ಚದಲ್ಲಿ ಹೀಗೂ ತಯಾರಿಸಬಹುದು ಎಂಬುದನ್ನು ಈ ವಿಡಿಯೋ ಮೂಲಕ ಹೇಳಿದ್ದಾರೆ.