ನವದೆಹಲಿ : ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನಾವು ಈ ಹಿಂದೆಂದೂ ಎದುರಿಸದಂತಹ ಪ್ರಮಾಣದಷ್ಟು ಬಿಕ್ಕಟ್ಟನ್ನು ಈಗ ಎದುರಿಸುತ್ತಿದ್ದೇವೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದರು. ಲಾಕ್‌ಡೌನ್ ಅವಧಿಯು ನೌಕರರ ವೈಯಕ್ತಿಕ ಮತ್ತು ವೃತ್ತಿಪರ ಜೀವನ ವಿಧಾನವನ್ನು ಅರಿಯಲು ಉಪಯುಕ್ತ. ಭವಿಷ್ಯದ ಮತ್ತು ಕೊರೊನಾ ಬಳಿಕದ ಪ್ರಪಂಚಕ್ಕೆ ಸೇವೆ ಸಲ್ಲಿಸಲು ಸಿದ್ಧರಾಗುವಂತೆ ತಮ್ಮ ಎರಡು ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ "ರೀಬೂಟ್, ರೀಇನ್ವೆಂಟ್ ಮತ್ತು ರೀನೈಟ್ ಮಾಡಲು ಸಮಯವನ್ನು" ಹೇಗೆ ಬಳಸಬೇಕೆಂಬುದನ್ನು ಪುನರುಚ್ಚರಿಸಿದ್ದಾರೆ. ಹೊಸ ಆಲೋಚನೆಗಳು ಮತ್ತು ಆವಿಷ್ಕಾರಗಳೊಂದಿಗೆ ಬರಲು ಲಭ್ಯವಿರುವ ಸಮಯವನ್ನು ಬಳಸಬೇಕು. ಬಿಕ್ಕಟ್ಟಿನ ಲಾಭವನ್ನು ಪಡೆದುಕೊಳ್ಳುವುದು "ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಕಾಣುವುದು ಮತ್ತು ಬಿಕ್ಕಟ್ಟು ಕಳೆದ ನಂತರ ಮಹತ್ವಾಕಾಂಕ್ಷೆಗಳನ್ನು ಬೆಳೆಸುವುದು ನಮ್ಮ ಮುಂದೆ ಇರುವ ಆಯ್ಕೆ" ಎಂದಿದ್ದಾರೆ.
"ನಾವು ಹಿಂದೆಂದೂ ಎದುರಿಸದ ಪ್ರಮಾಣದಷ್ಟು ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ನಾವೆಲ್ಲರೂ ನಮ್ಮ ಕುಟುಂಬಗಳ ಬಗ್ಗೆ, ನಮ್ಮ ವ್ಯವಹಾರದ ಬಗ್ಗೆ, ನಮ್ಮ ಆರ್ಥಿಕತೆಯ ಬಗ್ಗೆ ಮತ್ತು ನಮ್ಮ ದೇಶದ ಬಗ್ಗೆಯೂ ಚಿಂತಿಸುತ್ತಿದ್ದೇವೆ. ನಾವೆಲ್ಲರೂ ಮುಂದೆ ಸಾಗಲು ಏನು ಮಾಡುತ್ತಿದ್ದೇವೆ. ನಮ್ಮನ್ನು ತೂಡಗಿಸಲು ಬಿಡದೆ ಅನಿಶ್ಚಿತತೆಯಿಂದ ಬದುಕೋದು ಕಲಿಯುತ್ತಿದ್ದೇವೆ" ಎಂದರು.
"ರೀಬೂಟ್, ರೀಇನ್ವೆಂಟ್ ಮತ್ತು ರೀನೈಟ್" ಪಾಲಿಸಿಯನ್ನು ನಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ತಂದು ಕೊಳ್ಳಬೇಕಿದೆ. ಮನೆಯಲ್ಲಿಯೇ ಇದ್ದು ನಮ್ಮ ಪರಿಸರದ ಮೇಲಿನ ಹೊರೆ ತಗ್ಗಿಸಿದ್ದೇವೆ. ನಾವು ಎಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದೇವೆ ಎಂಬುದು ತಿಳಿಯುತ್ತಿದೆ. ಈ ಲಾಕ್‌ಡೌನ್ ದಿನಗಳಲ್ಲಿ ಮುಂಬೈ ಎಷ್ಟು ಸುಂದರವಾಗಿ ಕಾಣಿಸುತ್ತಿದೆ. ಸ್ಕೈಸ್ ಬ್ಲೂಯರ್, ಗಾಳಿಯೊಂದಿಗೆ ಸ್ವಚ್ಛಂದವಾಗಿದೆ ಮತ್ತು ಬೀದಿಗಳಲ್ಲಿ ಕಸವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.