ETV Bharat / business

ಆನಂದ್​ ಮಹೀಂದ್ರಾರ ಬಾಲ್ಯದ ಆ 'ನಂಬಿಕೆ' ಸುಳ್ಳಾಗಿಸಿದ ಭಾರತೀಯ ಎಂಜಿನಿಯರ್ಸ್‌!

author img

By

Published : Mar 16, 2021, 4:00 PM IST

ಜಮ್ಮು ಕಾಶ್ಮೀರದಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಕೈಗೊಂಡ ಪ್ರಯತ್ನವನ್ನು ಆನಂದ್ ಮಹೀಂದ್ರಾ ಪ್ರಶಂಸಿಸಿದ್ದು, ಸೇತುವೆಯ ಕಮಾನಿನ ಕೆಳಭಾಗದ ನಿರ್ಮಾಣದ ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಅಂತಹ ಸಾಹಸಮಯ ದಾಖಲೆ ಮಾಡುಲಾಗುತ್ತಿದೆ. ನಮ್ಮ ಎಂಜಿನಿಯರ್‌ಗಳ ಎಲ್ಲಾ ಸ್ಟೋರಿಗಳನ್ನು ಸೆರೆಹಿಡಿಯೋಣ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

Anand Mahindra
Anand Mahindra

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕ್ಕಲ್ ಹಾಗೂ ಕೌರಿ ನಡುವೆ ಪ್ರಗತಿಯ ಹಂತದಲ್ಲಿರುವ ಚೆನಾಬ್​ ರೈಲ್ವೆ ಸೇತುವೆಯು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ನಡೆಯುತ್ತಿರುವ ಎಂಜಿನಿಯರ್ ಕೌಶಲ್ಯವನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ.

ಇಲ್ಲಿನ ಚೆನಾಬ್ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಕೈಗೊಂಡ ಪ್ರಯತ್ನವನ್ನು ಆನಂದ್ ಮಹೀಂದ್ರಾ ಪ್ರಶಂಸಿಸಿದ್ದು, ಸೇತುವೆಯ ಕಮಾನಿನ ಕೆಳಭಾಗದ ನಿರ್ಮಾಣದ ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಇಂದಿನ ಮಕ್ಕಳು ಇಂತಹ ಎಂಜಿನಿಯರ್‌ಗಳ ಕಥೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

  • In my schooldays, saw a U.S documentary “It couldn’t be done” about all their construction marvels such as the Golden
    Gate Bridge. I was sad that we didn’t record such feats in India. Let’s capture all such stories of our engineers so that today’s kids have their very own heroes https://t.co/w48SEX1WSl

    — anand mahindra (@anandmahindra) March 16, 2021 " class="align-text-top noRightClick twitterSection" data=" ">

In my schooldays, saw a U.S documentary “It couldn’t be done” about all their construction marvels such as the Golden
Gate Bridge. I was sad that we didn’t record such feats in India. Let’s capture all such stories of our engineers so that today’s kids have their very own heroes https://t.co/w48SEX1WSl

— anand mahindra (@anandmahindra) March 16, 2021

ಈ ಸೇತುವೆಯು 120 ವರ್ಷಗಳ ಜೀವಿತಾವಧಿ ಹೊಂದಲಿದೆ. ಎರಡೂ ತುದಿಗಳನ್ನು ಹೊರತುಪಡಿಸಿ ಯಾವುದೇ ಆಧಾರವನ್ನು ಸೇತುವೆ ಹೊಂದಿಲ್ಲ ಎಂದು ಹೇಳಲಾಗುತ್ತದೆ. ಮಹೀಂದ್ರಾ ಅವರು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಹಂಚಿಕೊಂಡ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: UPI ಟ್ರಾನ್ಸಕ್ಷನ್ ಸಮಸ್ಯೆಗಳ ಇತ್ಯರ್ಥಕ್ಕೆ ಬಂತು ಯುಪಿಐ-ಹೆಲ್ಪ್​

ನನ್ನ ಶಾಲಾ ದಿನಗಳಲ್ಲಿ ಗೋಲ್ಡನ್ ಗೇಟ್ ಸೇತುವೆಯಂತಹ ನಿರ್ಮಾಣದ ಅದ್ಭುತಗಳ ಬಗೆ ತಿಳಿದು, ಅಂತಹದನ್ನು ಮತ್ತೆ ಮಾಡಲು ಸಾಧ್ಯವಿಲ್ಲ ಎಂಬ ಅಮೆರಿಕದ ಸಾಕ್ಷ್ಯಚಿತ್ರ ನೋಡಿದ್ದೆ. ಭಾರತದಲ್ಲಿ ಅಂತಹ ಸಾಹಸಮಯ ದಾಖಲೆ ಮಾಡುಲಾಗುತ್ತಿದೆ. ನಮ್ಮ ಎಂಜಿನಿಯರ್‌ಗಳ ಎಲ್ಲಾ ಸ್ಟೋರಿಗಳನ್ನು ಸೆರೆಹಿಡಿಯೋಣ ಎಂದು ಅವರು ಬರೆದುಕೊಂಡಿದ್ದಾರೆ.

ಚೆನಾಬ್ ಸೇತುವೆ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿದೆ. ಪ್ಯಾರಿಸ್​ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಿದೆ. ಬಕ್ಕಲ್ ಹಾಗೂ ಕೌರಿ ನಡುವಿನ ರೈಲ್ವೆ ಮಾರ್ಗದಲ್ಲಿರುವ ಈ ಸೇತುವೆಯನ್ನು ಅಂದಾಜು 1,250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.