ನವದೆಹಲಿ: ಅಮೆಜಾನ್ ಇಂಡಿಯಾ ತನ್ನ ಗ್ರಾಹಕರಿಗೆ ವಿಶೇಷ ರಿಯಾಯ್ತಿ ಮಾರಾಟದ ಗ್ರೇಟ್ ಇಂಡಿಯಾ ಸೇಲ್ ಘೋಷಣೆ ಮಾಡಿದೆ.
ಅಮೆಜಾನ್ ಈ ಹಿಂದೆ ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 21ರಂದು ವಿಶೇಷ ರಿಯಾಯ್ತಿ ಮಾರಾಟದ ಗ್ರೇಟ್ ಇಂಡಿಯಾ ಸೇಲ್ ಘೋಷಣೆ ಮಾಡಿತ್ತು. ಆ ಬಳಿಕ ಜನವರಿ 19ರಂದು ಗ್ರೇಟ್ ಇಂಡಿಯಾ ಸೇಲ್ ಘೋಷಿಸಿದೆ. ಅಂದು ಸ್ಮಾರ್ಟ್ಫೋನ್ಗಳಾದ ಆ್ಯಪಲ್, ಒನ್ಪ್ಲಸ್, ಒಪ್ಪೊ ಸೇರಿದಂತೆ ಇತರೆ ಮೊಬೈಲ್ಗಳ ಮೇಲೆ ಗಮನಾರ್ಹ ರಿಯಾಯಿತಿ ದೊರೆಯಲಿದೆ.
ಗ್ರೇಟ್ ಇಂಡಿಯನ್ ಸೇಲ್ನಂದು ಸ್ಮಾರ್ಟ್‌ಫೋನ್‌ಗಳ ಖರೀದಿ ಮೇಲೆ ಶೇ. 40ರಷ್ಟು ರಿಯಾಯ್ತಿ ನೀಡುವುದಾಗಿ ಅಮೆಜಾನ್ ಭರವಸೆ ಕೊಟ್ಟಿದೆ. ಒನ್ಪ್ಲಸ್ 7 ಪ್ರೋ ಮೊಬೈಲ್ ದರ ₹52,999 ಇದ್ದು, ರಿಯಾಯ್ತಿ ದರದಲ್ಲಿ ₹42,999ಗೆ ಮಾರಾಟ ಆಗಲಿದೆ. ಇದರ ಜೊತೆಗೆ ₹2,000 ವಿಶೇಷ ಕೊಡುಗೆ ಹಾಗೂ 12 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಒದಗಿಸುತ್ತಿದೆ.
22,999 ರೂ. ದರದ ರೆಡ್ಮೀ ಕೆ20 ಮೊಬೈಲ್, ₹19,999ಗೆ ಲಭ್ಯವಾಗಲಿದೆ. 3,000 ರೂ.ವರೆಗೆ ಎಕ್ಸ್ಚೇಂಜ್ ಆಫರ್ ಕೊಡುತ್ತಿದ್ದು, ರೆಡ್ಮೀ ಕೆ20 ಪ್ರೋ 24,999ಕ್ಕೆ ಮಾರಾಟ ಮಾಡಲಿದೆ. ಇದರ ನೈಜ ಬೆಲೆ ₹ 28,999ಯಷ್ಟಿದೆ.
ಒಪ್ಪೋ ಎ7, ಹುವಾವೇ ಪಿ30 ಲೈಟ್ ಮತ್ತು ಪೊಕೊ ಎಫ್1ನಂತಹ ಸ್ಮಾರ್ಟ್‌ಫೋನ್‌ಗಳ ಮೇಲೆ ಅಮೆಜಾನ್ ರಿಯಾಯ್ತಿ ಘೋಷಿಸಿದೆ. ಒಪ್ಪೋ ಎ7 ಮೊಬೈಲ್‌ನ 8,990 ರೂ.ಯ ಭಾರೀ ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಿದೆ. ಈ ಒಪ್ಪೊ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 16,990 ರೂ. ಇದೆ. ಪೊಕೊ ಎಫ್ 1 ಸಹ ಭಾರಿ ರಿಯಾಯ್ತಿ ಹೊಂದಿದ್ದು, ₹14,999ಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಮೂಲ ಬೆಲೆ 24,999 ರೂ.ಯಷ್ಟಿದೆ.