ETV Bharat / business

'ಏರ್​ಟೆಲ್ ಆ್ಯಡ್ಸ್​'.. ಜಾಹೀರಾತು ಮಾರುಕಟ್ಟೆಗೆ ಭಾರ್ತಿ ಏರ್​ಟೆಲ್​ ಲಗ್ಗೆ

ಡಿಟಿಎಚ್ ಆ್ಯಂಡ್​​ ಹೋಮ್​​ ಮೊಬೈಲ್‌ನಂತಹ ವಿವಿಧ ವ್ಯವಹಾರಗಳಲ್ಲಿ 320 ದಶಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸಮ್ಮತಿ ಆಧಾರಿತ ಹಾಗೂ ಗೌಪ್ಯತೆ ಸುರಕ್ಷಿತ ಜಾಹೀರಾತು ಅಭಿಯಾನ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಏರ್​ಟೆಲ್​ ಹೇಳಿದೆ.

author img

By

Published : Feb 24, 2021, 3:58 PM IST

Airtel
Airtel

ನವದೆಹಲಿ: ಭಾರ್ತಿ ಏರ್‌ಟೆಲ್ 'ಏರ್‌ಟೆಲ್ ಆ್ಯಡ್ಸ್​' ಎಂಬ ಸಂಸ್ಥೆಯನ್ನು ಪ್ರಾರಂಭಿಸುವುದರೊಂದಿಗೆ ಜಾಹೀರಾತು ಮಾರುಕಟ್ಟೆಗೆ ಪ್ರವೇಶಿಸಿದೆ ಎಂದು ಕಂಪನಿ ತಿಳಿಸಿದೆ. ಈ ಮೂಲಕ ತನ್ನ ಮೊಬೈಲ್​, ಡಿಟಿಎಚ್​ ಪ್ಲಾಟ್​ಫಾರ್ಮ್​ಗಳನ್ನು ಬಳಸುತ್ತಿರುವ ವಿಶಾಲ 320 ದಶಲಕ್ಷ ಬಳಕೆದಾರರಿಗೆ ಸಮ್ಮತಿ ಆಧರಿತ ಹಾಗೂ ಗೌಪ್ಯತೆ ಸುರಕ್ಷತೆಯ ಸೇವೆಗಳನ್ನು ನೀಡಲಿದೆ ಎಂದು ಹೇಳಿದೆ.

ಏರ್​​ಟೆಲ್​ ಆಡ್ಸ್​ ಸ್ಥಾಪಿಸುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತೀಯ ಜಾಹೀರಾತು ಉದ್ಯಮದಲ್ಲಿ ಹೆಜ್ಜೆ ಇಡಲು ಕಂಪನಿ ಪ್ರಯತ್ನಿಸುತ್ತಿದೆ. ಏರ್​ಟೆಲ್​ ತನ್ನ ಡೇಟಾ ಸೈನ್ಸ್​ ಸಾಮರ್ಥ್ಯದಿಂದ, ಕಂಪನಿಗಳು ಹೆಚ್ಚು ಪ್ರಸ್ತುತವಾದ ಹಾಗೂ ಪರಿಣಾಮಕಾರಿ ಜಾಹೀರಾತುಗಳನ್ನು ಏರ್​ಟೆಲ್​ ಗ್ರಾಹಕರಿಗೆ ತೋರಿಸಬಹುದು. ಅಂದರೆ ಏರ್​ಟೆಲ್​ ಗ್ರಾಹಕರು ಅವರಿಗೆ ಸೂಕ್ತವಾದ ಜಾಹೀರಾತುಗಳನ್ನು ಮಾತ್ರ ತೋರಿಸಲಿದ್ದು, ಸ್ಪ್ಯಾಮ್​ಗಳನ್ನು ನಿವಾರಿಸಲಿದೆ.

ಇದನ್ನೂ ಓದಿ: 2030ರ ವೇಳೆಗೆ ಫ್ಲಿಪ್​ಕಾರ್ಟ್​ನಲ್ಲಿ 25,000 ಎಲೆಕ್ಟ್ರಿಕ್​ ವಾಹನ ನಿಯೋಜನೆ

"ನಾವು ಅತಿಹೆಚ್ಚು ಸಂಖ್ಯೆಯ ಪ್ರಮಾಣಕ್ಕಿಂತ ಕಾಳಜಿ ವಹಿಸುವ ಗ್ರಾಹಕರಿಗೆ ಮಾತ್ರವೇ ಜಾಹೀರಾತು ತೋರಿಸಲು ಬಯಸುತ್ತೇವೆ. ಆದ್ದರಿಂದ, ಸಂಖ್ಯೆ ಕಡಿಮೆ ಇರಬಹುದು, ಆದರೆ ಗುಣಮಟ್ಟ ಹೆಚ್ಚಾಗಿರುತ್ತದೆ." ಎಂದು ಭಾರ್ತಿ ಏರ್‌ಟೆಲ್‌ನ ಮುಖ್ಯ ಉತ್ಪನ್ನ ಅಧಿಕಾರಿ ಆದರ್ಶ್ ನಾಯರ್ ಹೇಳಿದರು.

ಗ್ರಾಹಕರ ಆದ್ಯತೆ ಮತ್ತು ಬ್ರ್ಯಾಂಡ್ ಪ್ರಸ್ತುತತೆಯ ನಡುವೆ ಸಂಪರ್ಕ ಸಾಧಿಸಲು ಕಂಪನಿಯು ಎದುರು ನೋಡುತ್ತದೆಯಾದರೂ ಅದು ಅರ್ಥವಿಲ್ಲದ ಜಾಹೀರಾತುಗಳೊಂದಿಗೆ ಗ್ರಾಹಕರ ಬಳಿ ಹೋಗುವುದಿಲ್ಲ. ಹಾಗೆಯೇ ಬಳಕೆದಾರರ ಪ್ರೊಫೈಲ್ ಮೇಲೆ ನಿಗಾ ಇರಿಸುವುದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.