ನವದೆಹಲಿ: ದೇಶದ ಅತ್ಯಂತ ವೇಗದ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನಲ್ಲಿ ವಿಮಾನ ಮಾದರಿಯ ಗಗನ ಸಖಿಯರು ಆಹಾರ ಮತ್ತು ಪಾನಿಯಾ ಸರಬರಾಜು ಮಾಡಲಿದ್ದಾರೆ.
ಫೆಬ್ರವರಿ 15ರಂದು ಉದ್ಘಾಟನೆಯಾದ ದೆಹಲಿ- ವಾರಣಾಸಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ 'ಏರ್‌ಹೋಸ್ಟೆಸ್' ಸೇವೆ ಲಭಿಸಲಿದೆ. ಪ್ರಯಾಣಿಕರನ್ನು ಉಪಚರಿಸಲು ಭಾರತೀಯ ರೈಲ್ವೆ ಇಲಾಖೆಯು 34ಕ್ಕೂ ಹೆಚ್ಚು 'ಏರ್‌ಹೋಸ್ಟೆಸ್ ಮತ್ತು ಫ್ಲೈಟ್ ಸ್ಟೀವರ್ಡ್'ಗಳನ್ನು ನೇಮಿಸಿಕೊಂಡಿದೆ.
ತೋಳಿಲ್ಲದ ಕಪ್ಪು ಜಾಕೆಟ್, ಕುತ್ತಿಗೆಗೆ ರೇಷ್ಮೆ ಸ್ಕಾರ್ಫ್ ಮತ್ತು ಅಚ್ಚುಕಟ್ಟಾಗಿ ಕೂದಲನ್ನು ಹಿಮ್ಮುಖಲವಾಗಿ ಕಟ್ಟಿದ ಬಿಳಿ ಸ್ಕಾರ್ಪ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ಏರ್ ಹೋಸ್ಟೆಸ್ಗಳು ಪ್ರಯಾಣಿಕರಿಗೆ ಆಹಾರ ಮತ್ತು ಪಾನೀಯಗಳನ್ನು ವಿತರಿಸಲಿದ್ದಾರೆ.