ಕೊವಿಡ್-19 ಲಾಕ್‌ಡೌನ್ ಅವಧಿಯಲ್ಲೂ, ದೇಶಾದ್ಯಂತ ಇಂಧನ ಸರಬರಾಜನ್ನು ಯಾವುದೇ ಅಡೆ - ತಡೆಯಿಲ್ಲದೇ ಸರ್ಕಾರ ನೀಡಿತ್ತು. ಜನರ ಜೀವನದಲ್ಲಿ ಇಂಧನದ ಅವಶ್ಯಕತೆ ಎಷ್ಟು ನಿರ್ಣಾಯಕ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2020-21 ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿನ ಕೆಲವು ಪ್ರಮುಖ ಉಪಕ್ರಮಗಳನ್ನು ಘೋಷಿಸಿದ್ದಾರೆ.
- 8 ಕೋಟಿ ಕುಟುಂಬಗಳಿಗೆ ಈಗಾಗಲೇ ಲಾಭ ತಂದಿರುವ ಉಜ್ವಲ ಯೋಜನೆಯನ್ನು, 1 ಕೋಟಿ ಹೆಚ್ಚು ಫಲಾನುಭವಿಗಳಿಗೆ ವಿಸ್ತರಿಸಲಾಗುವುದು
- ಮುಂದಿನ ಮೂರು ವರ್ಷಗಳಲ್ಲಿ ಇನ್ನೂ 100 ಜಿಲ್ಲೆಗಳನ್ನು ನಗರ ಅನಿಲ ವಿತರಣಾ ಜಾಲಕ್ಕೆ ಸೇರ್ಪಡೆ
- ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ಯಾಸ್ ಪೈಪ್ ಲೈನ್ ಯೋಜನೆ ಪ್ರಾರಂಭಿಸಲಾಗುವುದು.
- ತಾರತಮ್ಯರಹಿತ ಮುಕ್ತ ಪ್ರವೇಶದ ಆಧಾರದ ಮೇಲೆ ಎಲ್ಲಾ ನೈಸರ್ಗಿಕ ಅನಿಲಗಳನ್ನು ಪೈಪ್ ಲೈನ್ ಗಳ ಮೂಲಕ ಸಾಮಾನ್ಯ ವಾಹಕ ಸಾಮರ್ಥ್ಯದ ಬುಕಿಂಗ್ ಸೌಲಭ್ಯ ಮತ್ತು ಸಮನ್ವಯದ ಮೂಲಕ ಸರಬರಾಜು ಮಾಡಲು, ಒಂದು ಸ್ವತಂತ್ರ ಅನಿಲ ಸರಬರಾಜು ವ್ಯವಸ್ಥೆ ನಿರ್ವಹಣೆಯನ್ನು ಸ್ಥಾಪಿಸಲಾಗುವುದು