ETV Bharat / business

ಅಮೆರಿಕದಲ್ಲಿ ಮಾಸಿಕ 40,000 ರೂ. ನಿರುದ್ಯೋಗ ಭತ್ಯೆ: ಭಾರತದಲ್ಲಿ 200 ರೂ.ಗೆ ಅದೆಷ್ಟು ನಿಯಮ? - ವಾಣಿಜ್ಯ ಸುದ್ದಿ

ಅಮೆರಿಕದ ಕಾರ್ಮಿಕ ಇಲಾಖೆಯ ಪ್ರಕಾರ, ನಿರುದ್ಯೋಗಿಗಳಿಗೆ ಸರ್ಕಾರ 45,000 ರೂ. ಭತ್ಯೆ ನೀಡುತ್ತಿದೆ. ಜನರ ಸರಾಸರಿ ಮಾಸಿಕ ವೇತನ ಸುಮಾರು 30,000 ರೂ.ಯಷ್ಟಿದೆ. ಹೆಚ್ಚಿನ ಹಣ ಸಿಗುವುದರಿಂದ ಜನರು ಇನ್ನು ಮುಂದೆ ಕೆಲಸ ಮಾಡಲು ಬಯಸುವುದಿಲ್ಲ. ಈ ನಡುವೆ ಕೆಲಸಕ್ಕೆ ಬಾರದ ನೌಕರರ ವರದಿಯನ್ನು ಸರ್ಕಾರ ಕೋರಿದೆ. ಕರೋನಾ ಬಿಕ್ಕಟ್ಟಿನ ಬಳಿಕ ಅಮೆರಿಕದಲ್ಲಿ ನಿರುದ್ಯೋಗ ದರವು ಶೇ 14.7ಕ್ಕೆ ಏರಿದೆ. ಇಲ್ಲಿಯವರೆಗೆ ಅಮೆರಿಕದಲ್ಲಿ 17,06,277 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಒಂದು ಲಕ್ಷಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.

UMEMPLOYMENT ALLOWANCE
ಹಣ
author img

By

Published : May 28, 2020, 10:03 PM IST

ಹೈದರಾಬಾದ್​: ಕೊರೊನಾ ಬಿಕ್ಕಟ್ಟಿನಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ದರವು 80 ವರ್ಷಗಳಲ್ಲಿ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಸುಮಾರು 3.86 ಕೋಟಿ ಜನರು ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದ್ದಾರೆ. ಜನರು ಪಡೆಯುತ್ತಿದ್ದ ಸಂಬಳಕ್ಕಿಂತ ಒಂದೂವರೆ ಪಟ್ಟು ಹೆಚ್ಚಿನ ಭತ್ಯೆ ಇವರು ಪಡೆಯುತ್ತಿದ್ದಾರೆ. ಇದು ಸರ್ಕಾರದ ಯೋಜನೆಗಳಾದ ನಿರುದ್ಯೋಗ ಭತ್ಯೆ ಮತ್ತು ನಿರುದ್ಯೋಗ ವಿಮೆಯ ಮೇಲಿನ ಒತ್ತಡ ಹೆಚ್ಚಿಸಿದೆ.

ಅಮೆರಿಕದ ಕಾರ್ಮಿಕ ಇಲಾಖೆಯ ಪ್ರಕಾರ, ನಿರುದ್ಯೋಗಿಗಳಿಗೆ ಸರ್ಕಾರ 45,000 ರೂ. ಭತ್ಯೆ ನೀಡುತ್ತಿದೆ. ಜನರ ಸರಾಸರಿ ಮಾಸಿಕ ವೇತನ ಸುಮಾರು 30,000 ರೂ.ಯಷ್ಟಿದೆ. ಹೆಚ್ಚಿನ ಹಣ ಸಿಗುವುದರಿಂದ ಜನರು ಇನ್ನು ಮುಂದೆ ಕೆಲಸ ಮಾಡಲು ಬಯಸುವುದಿಲ್ಲ. ಈ ನಡುವೆ ಕೆಲಸಕ್ಕೆ ಬಾರದ ನೌಕರರ ವರದಿಯನ್ನು ಸರ್ಕಾರ ಕೋರಿದೆ. ಕರೋನಾ ಬಿಕ್ಕಟ್ಟಿನ ಬಳಿಕ ಅಮೆರಿಕದಲ್ಲಿ ನಿರುದ್ಯೋಗ ದರವು ಶೇ 14.7ಕ್ಕೆ ಏರಿದೆ. ಇಲ್ಲಿಯವರೆಗೆ ಅಮೆರಿಕದಲ್ಲಿ 17,06,277 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಒಂದು ಲಕ್ಷಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.

ರಾಷ್ಟ್ರಗಳವಾರು ನಿರುದ್ಯೋಗ ಭತ್ಯೆ:

ನ್ಯೂಜಿಲ್ಯಾಂಡ್​​​ನಲ್ಲಿ ಉದ್ಯೋಗ ಕಳೆದುಕೊಳ್ಳುವವರಿಗೆ ಪ್ರತಿ ವಾರ 17,360 ರೂ. ಭತ್ಯೆ ಸಿಗುತ್ತದೆ. ಮೇ 29ರಿಂದ ಕಿವೀಸ್​​ ಸರ್ಕಾರ ಲಾಕ್‌ಡೌನ್ ಅನ್ನು ಇನ್ನಷ್ಟು ಸಡಿಲಿಸಲು ನಿರ್ಧರಿಸಿದೆ. ನ್ಯೂಜಿಲ್ಯಾಂಡ್​​​​​ನಲ್ಲಿ 1,504 ಪ್ರಕರಣಗಳು ಕಂಡುಬಂದಿದ್ದು, 21 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ನಾರ್ವೆಯಲ್ಲಿ ಇದುವರೆಗೆ 8,374 ಕೊರೊನಾ ಪ್ರಕರಣಗಳು ಕಂಡುಬಂದಿದ್ದು, 235 ಸೋಂಕಿತರು ಮೃತಪಟ್ಟಿದ್ದಾರೆ. ತಾತ್ಕಾಲಿಕ ಕಾರ್ಮಿಕರಿಗೆ 3.82 ಲಕ್ಷ ರೂ. ನೀಡಲಾಗುತ್ತಿದೆ. ಸ್ಪೇನ್​ನಲ್ಲಿ ಎಲ್ಲ ಕಾರ್ಮಿಕರಿಗೆ ಪೂರ್ಣ ವೇತನ ಮತ್ತು ಭತ್ಯೆ ನೀಡಲು ಆದೇಶಿಸಲಾಗಿದೆ. ಇಲ್ಲಿ 2,82,480 ಸೋಂಕಿನ ಪ್ರಕರಣಗಳಿದ್ದು, 26,837 ಸಾವುಗಳು ಸಂಭವಿಸಿವೆ. ಫ್ರಾನ್ಸ್​ನಲ್ಲಿ ಕಾರ್ಮಿಕರಿಗೆ ಶೇ 84ರಷ್ಟು ವೇತನ ಭತ್ಯೆ, ಸಾಮಾನ್ಯ ಕಾರ್ಮಿಕರಿಗೆ ಶೇ 100ರಷ್ಟು ಭತ್ಯೆ ನೀಡಲಾಗಿದೆ. 1,82,942 ಸೋಂಕಿತರಿದ್ದು, 28,432 ಜನರು ಮೃತಪಟ್ಟಿದ್ದಾರೆ.

ಕೆನಡಾ ಸರ್ಕಾರ ಲಾಕ್‌ಡೌನ್‌ನಲ್ಲಿರುವ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1,09,500 ರೂ. ಭತ್ಯೆ ನೀಡುತ್ತಿದೆ. ಇದುವರೆಗೆ 85,998 ಪ್ರಕರಣಗಳು ವರದಿಯಾಗಿದ್ದು, 6,566 ಸಾವುಗಳು ಸಂಭವಿಸಿವೆ. ಇಂಗ್ಲೆಂಡ್​ನಲ್ಲಿ ಕಂಪನಿಗಳು 2.33 ಲಕ್ಷ ರೂ. ಪಾವತಿಸುತ್ತಿವೆ. ಸರ್ಕಾರ ಶೇ 80ರಷ್ಟು ಹಣವನ್ನು ಮಾಸಿಕ ವೇತನದೊಂದಿಗೆ ನೀಡುತ್ತಿದೆ. ಯುಕೆಯಲ್ಲಿ 2,61,184 ಪ್ರಕರಣಗಳಿದ್ದು, 36,914 ಪೀಡಿತರು ಸಾವನ್ನಪ್ಪಿದ್ದಾರೆ.

ಗ್ರೀಸ್ ಸರ್ಕಾರ ಕಾರ್ಮಿಕರಿಗೆ 66,324 ರೂ. ಮಾಸಿಕ ಭತ್ಯೆ ಪಾವತಿಸುವುದು. ಇಲ್ಲಿ 2,892 ಪ್ರಕರಣಗಳು ದಾಖಲಾಗಿ, 173 ಸಾವುಗಳು ಸಂಭವಿಸಿವೆ. ಜಪಾನ್ ಸರ್ಕಾರ ಎಲ್ಲ ನಾಗರಿಕರಿಗೆ 70,120 ರೂ. ನೀಡುತ್ತಿದೆ. ಜಪಾನ್‌ನಲ್ಲಿ 16,581 ಪ್ರಕರಣಗಳು ದಾಖಲಾಗಿದ್ದು, 830 ಸಾವುಗಳು ಸಂಭವಿಸಿವೆ.

ಭಾರತದಲ್ಲಿ ಉದ್ಯೋಗ ಭತ್ಯೆಯ ಪರಿಸ್ಥಿತಿ

ಕೋವಿಡ್​-19 ಬಿಕ್ಕಟ್ಟು ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ನಿರುದ್ಯೋಗ ದರವು ಶೇ 27.11ಕ್ಕೆ ಏರಿಕೆಯಾಗಿದೆ. ಮಾರ್ಚ್ ಮಧ್ಯದಲ್ಲಿ ಸಾಂಕ್ರಾಮಿಕ ರೋಗವು ಆರಂಭವಾಗುವ ಮೊದಲು ಶೇ 7ಕ್ಕಿಂತ ಕಡಿಮೆ ಮಟ್ಟದಿಂದ ಏರಿಕೆ ಆಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ( ಸಿಎಂಇಐ) ತಿಳಿಸಿದೆ.

ರಾಜಸ್ಥಾನ್​ದ ಅಶೋಕ್ ಗೆಹ್ಲೋಟ್ ಅವರು ಪುರುಷ ಅರ್ಜಿದಾರರಿಗೆ ಮಾಸಿಕ 3,000 ರೂ., ಮಹಿಳೆ ಮತ್ತು ವಿಕಲಚೇತನರಿಗೆ ತಿಂಗಳಿಗೆ 3,500 ರೂ. ನೀಡುವ ಯೋಜನೆ ಘೋಷಿಸಿದರು. ಅರ್ಹತಾ ಮಾನದಂಡಗಳ ಪ್ರಕಾರ, ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಅವರ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷ ರೂ.ಗಿಂತ ಕಡಿಮೆಯಿರಬೇಕು. ಗರಿಷ್ಠ ವಯಸ್ಸಿನ ಮಿತಿ ಪುರುಷರಿಗೆ 30 ವರ್ಷ ಮತ್ತು ಮಹಿಳೆಯರಿಗೆ 35 ವರ್ಷ ನಿಗದಿಪಡಿಸಲಾಗಿದೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಕಳೆದ ಚುನಾವಣೆಯ ಸಮಯದಲ್ಲಿ ನಿರುದ್ಯೋಗ ಭತ್ಯೆ 3,016 ರೂ. ನೀಡುವ ಭರವಸೆ ನೀಡಿದ್ದರು. ಒಂದೂವರೆ ವರ್ಷಗಳ ನಂತರವೂ ಈ ಭರವಸೆ ಈಡೇರಿಲ್ಲ. ತೆಲಂಗಾಣದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಲಾಕ್‌ಡೌನ್ ನಂತರ ದ್ವಿಗುಣಗೊಂಡಿದೆ.

ಪಂಜಾಬ್​ನ ಸಿಎಂ ಅಮ್ರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರವು ತನ್ನ ಅಧಿಕಾರಾವಧಿಯ ಮೂರು ವರ್ಷಗಳನ್ನು ಪೂರ್ಣಗೊಳಿಸಲಿದೆ. 2017ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ ಮಾಸಿಕ 2,500 ರೂ. ನಿರುದ್ಯೋಗ ಭತ್ಯೆ ಇದುವರೆಗೂ ನೀಡಿಲ್ಲ.

ಪ್ರಸ್ತುತ, ರಾಜ್ಯದ ನಿರುದ್ಯೋಗಿ ಯುವಕರಿಗೆ ವಿವಿಧ ವಿಭಾಗಗಳಡಿ ಮಾಸಿಕ 150 ರಿಂದ 600 ರೂ.ವರೆಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ದಿವ್ಯಾಂಗ ನಿರುದ್ಯೋಗಿ ಯುವಕರಿಗೆ ಮೆಟ್ರಿಕ್ ಪಾಸ್ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ತಿಂಗಳಿಗೆ 450 ರೂ. ಮತ್ತು ಸಾಮಾನ್ಯ ಪದವಿ ಮತ್ತು ಸ್ನಾತಕೋತ್ತರ ಪದವಿ ಪಾಸಾದ ನಿರುದ್ಯೋಗಿ ಯುವಕರಿಗೆ ಮಾಸಿಕ 600 ರೂ. ಒದಗಿಸಲಾಗುತ್ತಿದೆ.

ಮೂಳೆ ಅಂಗವೈಕಲ್ಯ ಹೊಂದಿರುವ ಯುವಕರಿಗೆ ಭತ್ಯೆಯ ಪ್ರಮಾಣವು ಪದವಿ ಪೂರ್ವ ಅರ್ಜಿದಾರರಿಗೆ ತಿಂಗಳಿಗೆ 255 ರೂ. ಮತ್ತು ಪದವಿ ಹಾಗೂ ಸ್ನಾತಕೋತ್ತರ ಅರ್ಜಿದಾರರಿಗೆ ತಿಂಗಳಿಗೆ 300 ರೂ. ನಿಗದಿಪಡಿಸಲಾಗಿದೆ. ಇತರ ವರ್ಗದ ಅರ್ಜಿದಾರರಾದ ಪದವಿಪೂರ್ವ ನಿರುದ್ಯೋಗಿ ಯುವಕರಿಗೆ ಸರ್ಕಾರವು ತಿಂಗಳಿಗೆ 150 ರೂ. ಕೊಡುತ್ತಿದೆ. ಪದವಿ ಮತ್ತು ಸ್ನಾತಕೋತ್ತರ ಅರ್ಜಿದಾರರು ಮಾಸಿಕ 200 ರೂ.ಯಂತಹ ಅಲ್ಪ ಮೊತ್ತ ಪಡೆಯಲು ವಾರ್ಷಿಕ ಕುಟುಂಬದ ಆದಾಯವು 12,000 ರೂ.ಗಿಂತ ಕಡಿಮೆಯಿರಬೇಕು ಎಂಬ ನಿಯಮ ಪಾಲಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.