ಚಿಕಾಗೋ (ಅಮೆರಿಕ): ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕೊರೊನಾ ವೈರಸ್ ದಿನೇ ದಿನೆ ತನ್ನ ವ್ಯಾಪ್ತಿಯನ್ನ ಹೆಚ್ಚಿಸಿಕೊಳ್ಳುತ್ತಿದ್ದು, ಇದರಿಂದ ಜಾಗತಿಕ ವ್ಯಾಪಾರೋದ್ಯಮದ ಮೇಲೆ ಹೆಚ್ಚಿನ ಹೊಡೆತ ಬೀಳುತ್ತಿದೆ.
ಇದರಿಂದಾಗಿ ಜಾಗತಿಕವಾಗಿ ಸುಮಾರು 2.5 ಟ್ರಿಲಿಯನ್ ಅಂದರೆ ( 1ಕೋಟಿ 82 ಲಕ್ಷ ಕೋಟಿ(18,28,68,74,99,99,999.97)) ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಚಿಕಾಗೋದ ಮೆಕ್ಕಾರ್ಮಿಕ್ನಲ್ಲಿ ಮಾರ್ಚ್ 14 ರಂದು ನಡೆಯಬೇಕಿದ್ದ ಇನ್ಸ್ಪೈರ್ಡ್ ಹೋಂ ಶೋ 2020ನ್ನು ಇಂಟರ್ನ್ಯಾಷನಲ್ ಹೌಸ್ ವೇರ್ಸ್ ಅಸೋಸಿಯೇಷನ್ ಇದೀಗ ರದ್ದುಗೊಳಿಸಿದೆ. ಈ ಪ್ರದರ್ಶನಕ್ಕೆ 130 ದೇಶಗಳಿಂದ 50 ಸಾವಿರಕ್ಕೂ ಹೆಚ್ಚು ಉದ್ಯಮಿಗಳನ್ನು ಸೆಳೆಯುವ ನಿರೀಕ್ಷೆಯಿತ್ತು.
ಸದ್ಯಕ್ಕೆ ಗ್ರಾಹಕರೊಂದಿಗಿನ ಮುಖಾಮುಖಿ ಸಂಪರ್ಕಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಮಾರ್ಕೆಟಿಂಗ್ ತಜ್ಞರು ಮತ್ತು ಕಾರ್ಯನಿರ್ವಾಹಕರು ಎಚ್ಚರಿಸಿದ್ದಾರೆ.
ಕರೋನ ವೈರಸ್ ಕಾರಣದಿಂದಾಗಿ ವ್ಯಾಪಾರ ಘಟಕಗಳು ಪ್ರಪಂಚದಾದ್ಯಂತ ತ್ವರಿತವಾಗಿ ಕತ್ತಲೆ ಕಡೆ ಮುಖಮಾಡುತ್ತಿದೆ ಎಂದು ಹೇಳಲಾಗುತ್ತಿದೆ.