ETV Bharat / business

ಲಾಕ್​ಡೌನ್​​​: ಉಚಿತ ಸೇವಾ ಅವಧಿ ಮುಂದೂಡಿದ ಟಾಟಾ ಮೋಟಾರ್ಸ್​​

ಕೋವಿಡ್​ ಪ್ರಕರಣಗಳ ಹೆಚ್ಚಳವು ವಾಹನ ಸಂಚಾರದ ಮೇಲೆ ನಿರ್ಬಂಧಕ್ಕೆ ಕಾರಣವಾಗಿದೆ ಮತ್ತು ದೇಶಾದ್ಯಂತದ ಗ್ರಾಹಕರು ತಮ್ಮ ವಾಹನಗಳನ್ನು ಸರ್ವಿಸ್​ ಅಥವಾ ರಿಪೇರಿ ಕೆಲಸಗಳಿಗಾಗಿ ಅಧಿಕೃತ ಸೇವಾ ಕೇಂದ್ರಗಳಿಗೆ ತರಲು ಅಥವಾ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಉಚಿತ ಸೇವಾ ಅವಧಿ ಮುಂದೂಡಿದ ಟಾಟಾ ಮೋಟಾರ್ಸ್​​
ಉಚಿತ ಸೇವಾ ಅವಧಿ ಮುಂದೂಡಿದ ಟಾಟಾ ಮೋಟಾರ್ಸ್​​
author img

By

Published : May 11, 2021, 10:52 PM IST

ನವದೆಹಲಿ: ಕೊರೊನಾ 2ನೇ ಅಲೆಯಿಂದಾಗಿ ದೇಶಾದ್ಯಂತ ನಡೆಯುತ್ತಿರುವ ಲಾಕ್​​ಡೌನ್​ ನಿಯಮ ಗಮನದಲ್ಲಿಟ್ಟುಕೊಂಡು ಏಪ್ರಿಲ್ 1 ಮತ್ತು ಮೇ 31ರ ವಾರಂಟಿ ಅಂತ್ಯವಾಗುವ ಹಾಗೂ ಉಚಿತ ಸೇವಾ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿ ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ​ ಶುಭ ಸುದ್ದಿ ನೀಡಿದೆ.

ದೇಶಾದ್ಯಂತ ನಡೆಯುತ್ತಿರುವ ಲಾಕ್‌ಡೌನ್‌ನಿಂದಾಗಿ ಹಲವಾರು ಗ್ರಾಹಕರು ನಿರ್ವಹಣೆಗೆ ನಿಗದಿಪಡಿಸಿದ ವಾಹನಗಳಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಮಾರಾಟದ ನಂತರದ ಗ್ರಾಹಕರ ಸೇವೆಯನ್ನು ತಡೆ ರಹಿತವಾಗಿ ಮತ್ತು ತೊಂದರೆಯಿಲ್ಲದೇ ನೀಡಲು ಕಂಪನಿಯು ಖಾತರಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಟಾಟಾ ಮೋಟಾರ್ಸ್​​ನ ಗ್ರಾಹಕ ಸೇವೆ ಮುಖ್ಯಸ್ಥ (ದೇಶೀಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರ), ಪ್ರಯಾಣಿಕರ ವಾಹನಗಳ ವ್ಯಾಪಾರ ಘಟಕ ಡಿಂಪಲ್ ಮೆಹ್ತಾ ಮಾತನಾಡಿ, ಕೋವಿಡ್​ ಪ್ರಕರಣಗಳ ಹೆಚ್ಚಳವು ವಾಹನ ಚಲನೆಗಳ ಮೇಲೆ ನಿರ್ಬಂಧಕ್ಕೆ ಕಾರಣವಾಗಿದೆ ಮತ್ತು ದೇಶಾದ್ಯಂತದ ಗ್ರಾಹಕರು ತಮ್ಮ ವಾಹನಗಳನ್ನು ಸರ್ವಿಸ್​ ಅಥವಾ ರಿಪೇರಿ ಕೆಲಸಗಳಿಗಾಗಿ ಅಧಿಕೃತ ಸೇವಾ ಕೇಂದ್ರಗಳಿಗೆ ತರಲು ಅಥವಾ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಟಾಟಾ ಮೋಟಾರ್ಸ್​ ಸದ್ಯ ದೇಶದ 400ಕ್ಕೂ ಹೆಚ್ಚು ಸ್ಥಳಗಳಲ್ಲಿ 608ಕ್ಕೂ ಹೆಚ್ಚು ಸೇವಾ ಕೇಂದ್ರಗಳನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.