ETV Bharat / business

ಸ್ಪೆಕ್ಟ್ರಮ್ ಹರಾಜು: ಮೊದಲ ದಿನ 77,164 ಕೋಟಿ ರೂ. ಜೇಬಿಗಿಳಿಸಿಕೊಂಡ ಕೇಂದ್ರ ಸರ್ಕಾರ

author img

By

Published : Mar 1, 2021, 7:37 PM IST

ಮೊಬೈಲ್ ಸೇವೆಗೆ 7 ಫ್ರಿಕ್ವೆನ್ಸಿ ಬ್ಯಾಂಡ್‌ ಹೊಂದಿರುವ ಹರಾಜಿನಲ್ಲಿ 700 ಮೆಗಾಹರ್ಟ್ಸ್​, 800 ಮೆಗಾಹರ್ಟ್ಸ್​​, 900 ಮೆಗಾಹರ್ಟ್ಸ್​, 1800 ಮೆಗಾಹರ್ಟ್ಸ್​​, 2100 ಮೆಗಾಹರ್ಟ್ಸ್​​, 2300 ಮೆಗಾಹರ್ಟ್ಸ್​ ಮತ್ತು 2500 ಮೆಗಾಹರ್ಟ್ಸ್​​ ಇವೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

Spectrum
Spectrum

ನವದೆಹಲಿ: ಭಾರತದಲ್ಲಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಸೋಮವಾರ ಆರಂಭವಾಗಿದ್ದು, 3.92 ಲಕ್ಷ ಕೋಟಿ ಮೌಲ್ಯದ 2,251.25 ಮೆಗಾಹೆರ್ಟ್ಜ್​ (ಎಂಎಚ್​​ಝ್ಯಡ್​) ರೇಡಿಯೋ ವೇವ್‌ಗಳ ಬಿಡ್ಡಿಂಗ್​ ನಡೆದಿದೆ.

ಟೆಲಿಕಾಂ ಸ್ಪೆಕ್ಟ್ರಮ್ ಹರಾಜು ನವೀಕರಣದ ಮೊದಲ ದಿನ ಸರ್ಕಾರದ ನಿರೀಕ್ಷಿತ 45,000 ಕೋಟಿ ರೂ. ಬದಲಿಗೆ 77,146 ಕೋಟಿ ರೂ. ಪಡೆದಿದೆ ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಮೊಬೈಲ್ ಸೇವೆಗೆ 7 ಫ್ರಿಕ್ವೆನ್ಸಿ ಬ್ಯಾಂಡ್‌ ಹೊಂದಿರುವ ಹರಾಜಿನಲ್ಲಿ 700 ಮೆಗಾಹರ್ಟ್ಸ್​​, 800 ಮೆಗಾಹರ್ಟ್ಸ್​​, 900 ಮೆಗಾಹರ್ಟ್ಸ್​, 1800 ಮೆಗಾಹರ್ಟ್ಸ್​​, 2100 ಮೆಗಾಹರ್ಟ್ಸ್, 2300 ಮೆಗಾಹರ್ಟ್ಸ್ ಮತ್ತು 2500 ಮೆಗಾಹರ್ಟ್ಸ್ ಇವೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ಪ್ರಸ್ತುತ ಹರಾಜಿನಲ್ಲಿ 5ಜಿ ಸೇವೆಗೆ ಗುರುತಿಸಲಾದ 3,300-3,600 ಮೆಗಾಹರ್ಟ್ಸ್ ಬ್ಯಾಂಡ್‌ಗಳಲ್ಲಿನ ಆವರ್ತನಗಳು ಒಳಗೊಂಡಿಲ್ಲ. ಇದು ನಂತರ ನಡೆಯಲಿದೆ.

ಯಶಸ್ವಿ ಬಿಡ್​ದಾರರು ಒಂದೇ ಸಮಯದಲ್ಲಿ (ಮುಂಗಡ) ಸಂಪೂರ್ಣ ಬಿಡ್ ಮೊತ್ತ ಪಾವತಿಸಬಹುದು ಅಥವಾ ಒಂದು ನಿರ್ದಿಷ್ಟ ಮೊತ್ತ ಪಾವತಿಸುವ ಆಯ್ಕೆ ನೀಡಲಾಗಿದೆ. (700 ಮೆಗಾಹರ್ಟ್ಸ್​, 800 ಮೆಗಾಹರ್ಟ್ಸ್​, 900 ಮೆಗಾಹರ್ಟ್ಸ್​ ಬ್ಯಾಂಡ್‌ ಪಡೆದರೆ ಸ್ಪೆಕ್ಟ್ರಮ್‌ಗೆ ಶೇ 25ರಷ್ಟು ಅಥವಾ 1800 ಮೆಗಾಹರ್ಟ್ಸ್, 2100 ಮೆಗಾಹರ್ಟ್ಸ್​, 2300 ಮೆಗಾಹರ್ಟ್ಸ್​ ಹಾಗೂ 2500 ಮೆಗಾಹರ್ಟ್ಸ್​ ಸ್ಪೆಕ್ಟ್ರಮ್‌ ಬ್ಯಾಂಡ್​ ಗಿಟ್ಟಿಸಿಕೊಂಡರೆ ಶೇ 50ರಷ್ಟು ಪಾವತಿಸಬೇಕಾಗುತ್ತದೆ ) ಎರಡು ವರ್ಷಗಳ ನಿರ್ಬಂಧದ ನಂತರ ಉಳಿದ ಮೊತ್ತವನ್ನು ಗರಿಷ್ಠ 16 ಇಎಂಐ ತನಕ ಮುಂಗಡವಾಗಿರಿಸಿಕೊಳ್ಳುತ್ತವೆ.

ಇದನ್ನೂ ಓದಿ: ಬೆಳ್ಳಿ ದರದಲ್ಲಿ 781 ರೂ. ಜಿಗಿತ: ಬಂಗಾರದ ಬೆಲೆಯೂ ಏರಿಕೆ!

20 ವರ್ಷಗಳ ಮಾನ್ಯತೆಯ ಅವಧಿಗೆ ಸ್ಪೆಕ್ಟ್ರಮ್ ನೀಡಲಾಗುವುದು. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸ್ಪೆಕ್ಟ್ರಮ್ ಹರಾಜಿಗೆ ಒಟ್ಟು 13,475 ಕೋಟಿ ರೂ. ಠೇವಣಿ (ಇಎಂಡಿ) ಸಲ್ಲಿಸಿದ್ದವು.

1.79 ಲಕ್ಷ ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರುವ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ, ಹರಾಜಿಗೆ 10,000 ಕೋಟಿ ರೂ. ಇಎಂಡಿ ಸಲ್ಲಿಸಿದೆ. ಮೂರು ಖಾಸಗಿ ಟೆಲಿಕಾಂಗಳ ಪೈಕಿ ಜಿಯೋದು ಅತಿ ಹೆಚ್ಚಿನದು ಇದೆ. ಜಿಯೋನ ಇಎಂಡಿ ಮೊತ್ತವು ಹರಾಜಿನಲ್ಲಿ ಅದರ ಆರೋಗ್ಯಕರ ಪೈಪೋಟಿ ಸೂಚಿಸುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

71,303 ಕೋಟಿ ನಿವ್ವಳ ಮೌಲ್ಯ ಹೊಂದಿರುವ ಭಾರ್ತಿ ಏರ್‌ಟೆಲ್ 3,000 ಕೋಟಿ ರೂ. ಇಎಂಡಿ ಮತ್ತು 43,474 ಕೋಟಿ ಋಣಾತ್ಮಕ ಮೌಲ್ಯ ಹೊಂದಿರುವ ವೊಡಾಫೋನ್ ಐಡಿಯಾ 475 ಕೋಟಿ ರೂ. ಇಎಂಡಿ ಸಲ್ಲಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.