ಮುಂಬೈ: ನಿನ್ನೆಯಷ್ಟೇ 1100ಕ್ಕೂ ಹೆಚ್ಚು ಅಂಕ ಏರಿಕೆ ಕಂಡಿದ್ದ ಮುಂಬೈ ಷೇರುಪೇಟೆ ಇಂದು ಬೆಳಗಿನ ಆರಂಭಿಕ ವಹಿವಾಟಿನಲ್ಲೇ ಬರೋಬ್ಬರಿ 673 ಅಂಕ ಕುಸಿತ ಕಂಡು ದಂಗು ಬಡಿಸಿದೆ.
ಮುಂಬೈ ಷೇರುಪೇಟೆ 726 ಅಂಕಗಳಷ್ಟು ಕುಸಿಯುವ ಮೂಲಕ 50,770ರಲ್ಲಿ ವಹಿವಾಟು ಮುಂದುವರಿಸಿದೆ. ಪ್ರಮುಖ 30 ಷೇರುಗಳ ಕುಸಿತ ಕಂಡಿವೆ.
ಇನ್ನು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ( ನಿಫ್ಟಿ) ಸಹ 197 ಅಂಕಗಳಷ್ಟು ಕುಸಿದು 15,048ರಲ್ಲಿ ವಹಿವಾಟು ನಿರತವಾಗಿತ್ತು. ಹೆಚ್ಡಿಎಫ್ಸಿ, ಬಜಾಜ್ ಫೈನಾನ್ಸ್, ಕೊಟಕ್, ಬಜಾಜ್ ಫೈನಾನ್ಸ್ ಶೇ 2 ಕ್ಕಿಂತಲೂ ಹೆಚ್ಚು ನಷ್ಟ ಅನುಭವಿಸಿವೆ.
ಅಮೆರಿಕದ ವಾಲ್ ಸ್ಟ್ರೀಟ್ನಲ್ಲಿ ಕಂಡು ಬಂದ ಕುಸಿತದ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆಯಲ್ಲೂ ಇಳಿಕೆ ಕಂಡು ಬಂದಿದೆ.
ಇನ್ನು ಮಾರ್ಚ್ 3ರಂದು ಸತತ ಮೂರನೇ ಸೆಷನ್ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದ ಬಿಎಸ್‌ಇ ಸೆನ್ಸೆಕ್ಸ್ ಗೂಳಿ, ಸುಮಾರು 1,148 ಅಂಕ ಹೆಚ್ಚಿಸಿಕೊಂಡಿತ್ತು.