ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರವೃತ್ತಿ ಇದ್ದರೂ, ಭಾರತದ ಮಾರುಕಟ್ಟೆಗಳಲ್ಲಿ ಯಾವುದೇ ಏರಿಕೆ ಕಂಡು ಬರದ ಹಿನ್ನೆಲೆ ಇಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಕುಸಿತದೊಂದಿಗೆ ಕೊನೆಗೊಂಡಿತು.
666.64 ಪಾಯಿಂಟ್‌ಗಳನ್ನು ಸ್ವಿಂಗ್ ಮಾಡಿದ ನಂತರ, 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 19.69 ಪಾಯಿಂಟ್ ಅಥವಾ 0.04 ರಷ್ಟು ಇಳಿಕೆ ಕಂಡು 51,309. 39ಕ್ಕೆ ತಲುಪಿತು.
ಅಂತೆಯೇ ಎನ್‌ಎಸ್‌ಇ ನಿಫ್ಟಿ 2.80 ಪಾಯಿಂಟ್ ಅಥವಾ ಶೇ. 0.02 ರಷ್ಟು ಕುಸಿದು 15,106.50 ಕ್ಕೆ ತಲುಪಿದೆ.
ಓದಿ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 150 ಪಾಯಿಂಟ್ ಏರಿಕೆ... ಹಳಿಗೆ ಮರಳಿದ ವಹಿವಾಟು
ಎಚ್‌ಡಿಎಫ್‌ಸಿ ಬ್ಯಾಂಕ್, ಭಾರ್ತಿ ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ನೆಸ್ಲೆ ಇಂಡಿಯಾ, ಒಎನ್‌ಜಿಸಿ, ಎಲ್& ಟಿ ಮತ್ತು ಎಸ್‌ಬಿಐ ಇವು ಸೆನ್ಸೆಕ್ಸ್ ಇಳಿಕೆಯಿಂದ ಶೇ.1 ರಷ್ಟು ಕುಸಿತ ಕಂಡಿವೆ.
ಮತ್ತೊಂದೆಡೆ ಬಜಾಜ್ ಫಿನ್‌ಸರ್ವ್, ಎಂ&ಎಂ, ಬಜಾಜ್ ಫೈನಾನ್ಸ್, ಟೈಟಾನ್ ಮತ್ತು ಟಿಸಿಎಸ್ ಗಳಿಕೆ ಕಂಡಿವೆ.
ಏಷ್ಯಾದ ಇತರೆಡೆಗಳಲ್ಲಿ ಶಾಂಘೈ, ಹಾಂಕಾಂಗ್, ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಬೋರ್ಸ್‌ಗಳು ಲಾಭದೊಂದಿಗೆ ಕೊನೆಗೊಂಡವು.