ಮುಂಬೈ: ಸರ್ಕಾರಿ ಭದ್ರತೆಗಳ (ಜಿ-ಸೆಕ್ಯೂರಿಟಿ) ಸ್ವಾಧೀನ ಕಾರ್ಯಕ್ರಮದ (ಜಿ-ಎಸ್‌ಎಪಿ 1.0) ಅಡಿಯಲ್ಲಿ 35,000 ಕೋಟಿ ರೂ. ಸರ್ಕಾರಿ ಸೆಕ್ಯೂರಿಟಿಗಳ ಎರಡನೇ ಖರೀದಿಯನ್ನು ಮೇ 20ರಂದು ಮಾಡಲಾಗುವುದು ಎಂದು ಆರ್‌ಒಬಿಐ ತಿಳಿಸಿದೆ. ಕೋವಿಡ್- 19 ಎರಡನೇ ಅಲೆಯ ಆರ್ಥಿಕ ಹೊಡೆತದ ಬೆದರಿಕೆ ತೊಡೆದು ಹಾಕಲು ಕೇಂದ್ರೀಯ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ. ಕಳೆದ ತಿಂಗಳು 25 ಸಾವಿರ ಕೋಟಿ ರೂ. ಮೊದಲ ಖರೀದಿಗೆ ಮಾರುಕಟ್ಟೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ಹಾನಿಗೊಳಗಾದ ಆರ್ಥಿಕತೆಯ ವಿವಿಧ ಭಾಗಗಳಿಗೆ ಪರಿಹಾರ ಒದಗಿಸುವ ಕ್ರಮಗಳನ್ನು ಪ್ರಕಟಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಎರಡು ವಾರಗಳಲ್ಲಿ 35,000 ಕೋಟಿ ರೂ.ಒಟ್ಟುಗೂಡಿಸಿ ಸರ್ಕಾರಿ ಭದ್ರತೆಗಳ (ಜಿ-ಸೆಕ್ಯೂರಿಟಿ) ಎರಡನೇ ಖರೀದಿಯನ್ನು ಆರ್‌ಬಿಐ ಕೈಗೆತ್ತಿಕೊಳ್ಳಲಿದೆ ಎಂದರು.
ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳ (ಒಎಂಒ) ಮೂಲಕ ತನ್ನ ಬಾಂಡ್ - ಖರೀದಿ ಕಾರ್ಯಕ್ರಮದ ಬಗ್ಗೆ ಸ್ಪಷ್ಟತೆ ನೀಡಲು, ದಾಸ್ ಮೊದಲ ತ್ರೈಮಾಸಿಕದಲ್ಲಿ ಜಿ - ಎಸ್‌ಎಪಿ 1.0 ಎಂಬ ಹೊಸ ಉಪಕರಣದ ಅಡಿ 1 ಲಕ್ಷ ಕೋಟಿ ರೂ. ಘೋಷಿಸಿದ್ದಾರೆ.
ಬೆಲೆ ಏರಿಕೆಯ ದರದಲ್ಲಿ ಆಹಾರ ಮತ್ತು ಇಂಧನ ಹಣ ದುಬ್ಬರವು ಪ್ರಮುಖ ಹಣದುಬ್ಬರವನ್ನು ಮೇಲ್ಮುಖಕ್ಕೆ ತಳ್ಳಿದೆ. ನಿರೀಕ್ಷಿತ ಸಾಮಾನ್ಯ ಮಾನ್ಸೂನ್ ಮುನ್ಸೂಚನೆಯು ಆಹಾರ ಬೆಲೆ ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.