ETV Bharat / business

ವಾಣಿಜ್ಯ ಬ್ಯಾಂಕ್​ಗಳ ಠೇವಣಿ, ಸಾಲದ ದತ್ತಾಂಶ ಪ್ರಕಟಿಸಿದ ಆರ್​ಬಿಐ

author img

By

Published : May 31, 2020, 9:40 PM IST

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾಣಿಜ್ಯ ಬ್ಯಾಂಕ್​ಗಳ ಠೇವಣಿ ಮತ್ತು ಸಾಲದ ತ್ರೈಮಾಸಿಕ ಅಂಕಿಅಂಶವನ್ನು ಬಿಡುಗಡೆ ಮಾಡಿದೆ. ಒಟ್ಟು ಕ್ರೆಡಿಟ್ ಮತ್ತು ಠೇವಣಿ ಮಾಹಿತಿಯನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶ (ಯುಟಿ), ಜಿಲ್ಲೆಗಳು, ಕೇಂದ್ರಗಳು, ಜನಸಂಖ್ಯಾ ಗುಂಪುಗಳು ಮತ್ತು ಬ್ಯಾಂಕ್​ಗಳಿಂದ ಪ್ರತ್ಯೇಕಿಸಲಾಗಿದೆ.

RBI releases quarterly statistics
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಭಾರತೀಯ ಡೇಟಾಬೇಸ್ ಆನ್ ಇಂಡಿಯನ್ ಎಕಾನಮಿ (ಡಿಬಿಐಇ)ಯಲ್ಲಿ ಮಾರ್ಚ್ 2020ರ ಶೆಡ್ಯೂಲ್ಡ್ ವಾಣಿಜ್ಯಿಕ ಬ್ಯಾಂಕ್​ಗಳ (ಎಸ್‌ಸಿಬಿ) ಠೇವಣಿ ಮತ್ತು ಸಾಲದ ತ್ರೈಮಾಸಿಕ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ಒಟ್ಟು ಕ್ರೆಡಿಟ್ ಮತ್ತು ಠೇವಣಿ ಮಾಹಿತಿಯನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶ (ಯುಟಿ), ಜಿಲ್ಲೆಗಳು, ಕೇಂದ್ರಗಳು, ಜನಸಂಖ್ಯಾ ಗುಂಪುಗಳು ಮತ್ತು ಬ್ಯಾಂಕ್​ಗಳಿಂದ ಪ್ರತ್ಯೇಕಿಸಲಾಗಿದೆ. ಬೇಸಿಕ್ ಸ್ಟ್ಯಾಟಿಸ್ಟಿಕಲ್ ರಿಟರ್ನ್ (ಬಿಎಸ್ಆರ್) - 7 ಸಿಸ್ಟಮ್ 1ರ ಅಡಿಯಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​​ (ಆರ್‌ಆರ್‌ಬಿ) ಮತ್ತು ಸಣ್ಣ ಹಣಕಾಸು ಬ್ಯಾಂಕ್​ಗಳು (ಎಸ್‌ಎಫ್‌ಬಿ) ಸೇರಿದಂತೆ ಎಸ್‌ಸಿಬಿಗಳಿಂದ ಡೇಟಾ ಸಂಗ್ರಹಿಸಲಾಗಿದೆ.

ಮುಖ್ಯಾಂಶಗಳು:

ಮಾರ್ಚ್ 2020ರ ಬ್ಯಾಂಕ್ ಸಾಲದ ಬೆಳವಣಿಗೆ ಇಯರ್ ಆನ್ ಇಯರ್ (ಕಳೆದ ವರ್ಷಕ್ಕೆ ಹೋಲಿಸಿದರೆ) ಎಲ್ಲಾ ಜನಸಂಖ್ಯೆಯ ಗುಂಪುಗಳಲ್ಲಿ (ಗ್ರಾಮೀಣ / ಅರೆ ನಗರ / ನಗರ / ಮಹಾನಗರ) ಮಿತ ಪ್ರಮಾಣದಲ್ಲಿ ದಾಖಲಾಗಿದೆ. ಸುಮಾರು 63 ಪ್ರತಿಶತದಷ್ಟು ಸಾಲವನ್ನು ಹೊಂದಿರುವ ಮಹಾನಗರ ಶಾಖೆಗಳು 2020ರ ಮಾರ್ಚ್​ನಲ್ಲಿ ಸಾಲದ ಬೆಳವಣಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 4.8ಕ್ಕೆ ಆಗಿದೆ. ಇದು ಒಂದು ವರ್ಷದ ಹಿಂದೆ ಶೇ 13.5ರಷ್ಟಿತ್ತು.

ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಬ್ಯಾಂಕ್​ಗಳ ಸಾಲದ ಬೆಳವಣಿಗೆ ಕ್ರಮವಾಗಿ ಶೇ 4.2 ಮತ್ತು 9.3ರಷ್ಟಿತ್ತು, 2020ರ ಮಾರ್ಚ್​ನಲ್ಲಿ ವರ್ಷದ ಹಿಂದೆ ದಾಖಲಾದ ಬೆಳವಣಿಗೆಯ ಅರ್ಧಕ್ಕಿಂತ ಕಡಿಮೆಯಾಗಿದೆ

ಎಸ್‌ಸಿಬಿಗಳ ಒಟ್ಟು ಠೇವಣಿಗಳು ತ್ರೈಮಾಸಿಕದಲ್ಲಿ ಕಡಿಮೆ ಇಳಿಕೆ ಕಂಡು ಬಂದಿದ್ದು ಈ ಹಿಂದಿನ ಶೇ 10ರಷ್ಟು ಬೆಳವಣಿಗೆಗೆ ಹೋಲಿಸಿದರೆ ಶೇ 9.5ಕ್ಕೆ ತಲುಪಿದೆ. ಒಟ್ಟಾರೆ ಠೇವಣಿಗಳಲ್ಲಿ ಅರ್ಧದಷ್ಟು ಪಾಲು ಹೊಂದಿರುವ ಮಹಾನಗರ ಶಾಖೆಗಳು ಠೇವಣಿ ಬೆಳವಣಿಗೆಯಲ್ಲಿ ಗಮನಾರ್ಹವಾದ ಮಿತಿ (ಶೇ 6.9ರಷ್ಟು) ಕಂಡಿದೆ. ಆದರೆ, ಗ್ರಾಮೀಣ ಮತ್ತು ಅರೆ ನಗರ ಶಾಖೆಗಳು ಬೆಳವಣಿಗೆ ಕ್ರಮವಾಗಿ ಶೇ 15.5 ಮತ್ತು ಶೇ 12.3ರಷ್ಟಿದೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳ ಠೇವಣಿ ಬೆಳವಣಿಗೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ (ಶೇ 8.2ರಷ್ಟು). ಆದರೂ ಅದು ಎರಡಂಕಿ ತಲುಪಿಲ್ಲ. ಮತ್ತೊಂದೆಡೆ ಸತತ ಎರಡನೇ ತ್ರೈಮಾಸಿಕದಲ್ಲಿ ಮಿತವಾದ ಹೊರತಾಗಿಯೂ ಖಾಸಗಿ ವಲಯದ ಬ್ಯಾಂಕ್​ಗಳ ಠೇವಣಿ ಬೆಳವಣಿಗೆ ಎರಡು ಅಂಕೆಗಳಲ್ಲಿ (ಶೇ 10.4) ಉಳಿದಿದೆ. ಒಟ್ಟು ಠೇವಣಿಗಳಲ್ಲಿ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ (ಸಿಎಎಸ್ಎ) ಠೇವಣಿಗಳ ಪಾಲು ಹಿಂದಿನ ತ್ರೈಮಾಸಿಕದಲ್ಲಿ ಶೇ. 41.2 ರಿಂದ ಈ ತ್ರೈಮಾಸಿಕದಲ್ಲಿ ಶೇ. 42.1ಕ್ಕೆ ಏರಿದೆ.

ಅಖಿಲ ಭಾರತ ಕ್ರೆಡಿಟ್-ಠೇವಣಿ (ಸಿ-ಡಿ) ಅನುಪಾತವು 2020ರ ಮಾರ್ಚ್​ನಲ್ಲಿ ಶೇ 76.0ಕ್ಕೆ ಇಳಿದಿದೆ. ಈ ಅವಧಿಯಲ್ಲಿ ಎಲ್ಲಾ ಜನಸಂಖ್ಯಾ ಗುಂಪುಗಳಿಗೆ ಸಿ-ಡಿ ಅನುಪಾತವು ಕುಸಿಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.