ETV Bharat / business

ವೋಟಿಗೂ ಮುನ್ನ 'ಆರ್​ಬಿಐ' ಬಡ್ಡಿದರ ಕಡಿತ ನಿರೀಕ್ಷೆ.. ಯಾವ ಪಕ್ಷಕ್ಕೆ ಲಾಭ.. - ರಿಯಲ್​ ಎಸ್ಟೇಟ್​

ಆರ್‌ಬಿಐನ ನಿರ್ಧಾರವು ಬ್ಯಾಂಕ್‌ಗಳು ವಿವಿಧ ಸಾಲಗಳ ಮೇಲಿನ ಬಡ್ಡಿ ದರ ತಗ್ಗಿಸಲು ಉತ್ತೇಜನ ನೀಡಲಿದೆ. ಇದರಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಲಿದ್ದು, ಆರ್ಥಿಕತೆಗೆ ಚೇತರಿಕೆ ಸಿಗಲಿದೆ ಎಂದು ದೇಶಿ ಉದ್ದಿಮೆ ವಲಯ ನಿರೀಕ್ಷಿಸಿದೆ.

ಆರ್​ಬಿಐ
author img

By

Published : Apr 3, 2019, 3:43 PM IST

ನವದೆಹಲಿ :ಭಾರತೀಯ ರಿಸರ್ವ್‌ ಬ್ಯಾಂಕ್​ನ ಮೂರು ದಿನಗಳ ಹಣಕಾಸು ನೀತಿ ಪರಾಮರ್ಶೆ ಸಭೆ ನಾಳೆ (ಏಪ್ರಿಲ್​ 4ರಂದು) ಕೊನೆಗೊಳ್ಳಲಿದ್ದು, ಸತತ ಎರಡನೇ ಬಾರಿಗೆ ತನ್ನ ಪ್ರಮುಖ ಬಡ್ಡಿ ದರಗಳನ್ನು ಇಳಿಸಲಿದೆ ಎಂಬ ಆಶಾಭಾವನೆ ಮಾರುಕಟ್ಟೆಯಲ್ಲಿ ಮೂಡಿದೆ.

ಆರ್‌ಬಿಐ ಕೈಗೊಳ್ಳುವ ಹಣಕಾಸು ಸಂಬಂಧಿತ ರೇಟ್‌ ಕಟ್‌, ಲೋಕಸಭೆಯ ಮೊದಲ ಹಂತದ ಚುನಾವಣೆಗೆ ಸ್ವಲ್ಪ ಮೊದಲು ಕೈಗೊಳ್ಳಲಿದೆ. ಬಿಜೆಪಿಯ ವಿಜಯವು ದೇಶದ ಆರ್ಥಿಕತೆಗೆ ಅನುಕೂಲಕರವಾಗಲಿದೆ ಚುನಾವಣಾ ಸಮೀಕ್ಷಾ ವರದಿ ತಿಳಿಸಿದೆ.

ಆರ್​ಬಿಐ ಗವರ್ನರ್ ಆಗಿ ಶಕ್ತಿಕಾಂತ ದಾಸ್‌ ನೇಮಕಗೊಂಡ ಬಳಿಕ ಎರಡನೇ ರೇಟ್‌ ಕಟ್‌ ಇದಾಗಲಿದೆ. ಕಳೆದ ಫೆಬ್ರವರಿಯಲ್ಲಿ ದಾಸ್‌ ತಮ್ಮ ಮೊದಲ ಸಭೆಯಲ್ಲಿ ಬಡ್ಡಿ ದರ ಇಳಿಸಿ ಬ್ಯಾಂಕ್‌ ಸಾಲವನ್ನು ಆಕರ್ಷಕಗೊಳಿಸಿದ್ದರು. ಕಳೆದ ಕೆಲವು ವಾರಗಳ ಹಿಂದೆ ಬ್ಯಾಂಕ್, ವಾಣಿಜ್ಯ ಉದ್ಯಮಿ, ಆರ್ಥಿಕ ತಜ್ಞರು ದಾಸ್ ಅವರನ್ನು ಭೇಟಿ ಮಾಡಿ​, 'ಹಣದುಬ್ಬರ ಕಡಿಮೆ ಮತ್ತು ಆರ್ಥಿಕ ಬೆಳವಣಿಗೆ ಗತಿ ನಿಧಾನವಾಗಿದೆ. ಬಡ್ಡಿ ದರ ಕಡಿಮೆಗೊಳಿಸುವಂತೆ' ಕೋರಿದ್ದರು.

ಇದರ ಜೊತೆಗೆ ಮುಂಬರುವ ಹಣಕಾಸು ಪರಾಮರ್ಶೆಗಳು ಸಾಲ ಸೌಕರ್ಯವನ್ನು ಸುಲಭಗೊಳಿಸುವ ಉದ್ದೇಶ ಹೊಂದಿರುವುದರ ಸುಳಿವು ಕೂಡ ದಾಸ್​ ನೀಡಿದ್ದಾರೆ. ಒಂದು ಬಡ್ಡಿ ದರ ಕಡಿತ ಆದರೆ ಗೃಹ ನಿರ್ಮಾಣ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಿದೆ. ಈಗಾಗಲೇ ನಿರ್ಮಾಣ ಹಂತದ ಕಟ್ಟಡ ಸಾಮಗ್ರಿಗಳ ಜಿಎಸ್​ಟಿ ಹೊರೆಯನ್ನು ಸಹ ತಗ್ಗಿಸಲಾಗಿದೆ. ನೋಟುರದ್ದತಿ ಹಾಗೂ ಜಿಎಸ್​ಟಿ ಜಾರಿ ಬಳಿಕ ಕುಸಿತದ ಹಾದಿಯಲ್ಲಿರುವ ರಿಯಲ್ ಎಸ್ಟೇಟ್​ ಉದ್ಯಮಕ್ಕೆ ಉತ್ತೇಜನ ಸಿಗಲಿದೆ.

'ಬಡ್ಡಿ ದರ ಕಡಿತದ ಫಲವಾಗಿ ಸಾಲದ ಮಾಸಿಕ ಸಮಾನ ಕಂತುಗಳ (ಇಎಂಐ) ಹೊರೆ ಇಳಿಯಲಿದೆ. ಗೃಹ ನಿರ್ಮಾಣ ಮಾರುಕಟ್ಟೆಗೆ ಆರ್‌ಬಿಐ ನಿರ್ಧಾರವು ಇನ್ನಷ್ಟು ಉತ್ತೇಜನ ನೀಡಲಿದೆ. ಜನರು ಮನೆ ಸೇರಿದಂತೆ ಇತರೆ ಸರಕುಗಳ ಖರೀದಿಗೆ ಒಲವು ತೋರಲಿದ್ದಾರೆ' ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Intro:Body:

ವೋಟಿಗೂ ಮುನ್ನ 'ಆರ್​ಬಿಐ' ಬಡ್ಡಿದರ ಕಡಿತ ನಿರೀಕ್ಷೆ... ಯಾವ ಪಕ್ಷಕ್ಕೆ ಲಾಭ..?

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.