ಮುಂಬೈ: ಭಾರತೀಯ ಅಂಚೆ ಸೇವೆಯ ಮಹಾರಾಷ್ಟ್ರ ವಲಯವು 1371 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಮೇಲೆ ತಿಳಿಸಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅಕ್ಟೋಬರ್ 3ರಿಂದ ಪ್ರಾರಂಭವಾಗಿ ನವೆಂಬರ್ 3ರವರೆಗೆ ನಡೆಯಲಿದೆ. ಈ ಪೈಕಿ 1,029 ಹುದ್ದೆಗಳು ಪೋಸ್ಟ್‌ಮ್ಯಾನ್ ಇದ್ದರೆ, 295 ಹುದ್ದೆಗಳು ಸಬ್ ಆರ್ಡಿನೇಟ್ ಆಫೀಸ್‌ನ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್), 32 ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಮತ್ತು ಉಳಿದ 15 ಸ್ಥಾನಗಳು ಮೇಲ್ ಗಾರ್ಡ್‌ಗೆ ಮೀಸಲಿವೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಹಾರಾಷ್ಟ್ರ ವಲಯದ ಅಧಿಕೃತ ವೆಬ್‌ಸೈಟ್- https://dopmah20.onlineapplicationform.org/MHPOST/ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಕಂಪ್ಯೂಟರ್ ಆಧಾರಿತ ಪರೀಕ್ಷೆಯ ದಿನಾಂಕವನ್ನು ಅಂಚೆ ಸೇವಾ ವೆಬ್‌ಸೈಟ್‌ನಲ್ಲಿ ಘೋಷಿಸಲಾಗುವುದು.
ಅಭ್ಯರ್ಥಿಗಳು 12ನೇ ಪಾಸ್ ಆಗಿರಬೇಕು ಮತ್ತು ಪೋಸ್ಟ್‌ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ ಕಂಪ್ಯೂಟರ್ ಮತ್ತು ಸ್ಥಳೀಯ ಭಾಷೆಯ ಜ್ಞಾನ ಹೊಂದಿರಬೇಕು. ಆದರೆ, ಆಡಳಿತಾತ್ಮಕ ಮತ್ತು ಸಬ್ ಆರ್ಡಿನೇಟ್ ಕಚೇರಿಯಲ್ಲಿ ಎಂಟಿಎಸ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ಪಾಸ್ ಆಗಿರಬೇಕು. ಸ್ಥಳೀಯರ ತಿಳಿವಳಿಕೆಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಎಲ್ಲ ಹುದ್ದೆಗಳಿಗೆ ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು. ಆದರೆ, ಪೋಸ್ಟ್‌ಮ್ಯಾನ್ ಮತ್ತು ಮೇಲ್ ಗಾರ್ಡ್ ಖಾಲಿ ಹುದ್ದೆಗಳ ಗರಿಷ್ಠ ವಯೋಮಿತಿ 27 ವರ್ಷಗಳು. ಎಂಟಿಎಸ್‌ಗೆ 25 ವರ್ಷ ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಸಾಮಾನ್ಯ/ ಇಡಬ್ಲ್ಯೂಎಸ್ / ಒಬಿಸಿ ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಮಹಿಳಾ ಅಭ್ಯರ್ಥಿಗಳು ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ವಿಭಾಗಕ್ಕೆ ಸೇರಿದ ಅಭ್ಯರ್ಥಿಗಳು 100 ರೂ. ಶುಲ್ಕವಿದೆ.
ಪೋಸ್ಟ್‌ಮ್ಯಾನ್, ಎಂಟಿಎಸ್ ಮತ್ತು ಮೇಲ್ ಗಾರ್ಡ್ ಹುದ್ದೆಗಳ ಆಯ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ. ಪೋಸ್ಟ್‌ಮ್ಯಾನ್ ಅಥವಾ ಮೇಲ್ ಗಾರ್ಡ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು 21,700- 69,100 ರೂ. ನಡುವೆ ವೇತನ ದೊರೆಯುತ್ತೆ. ಆದರೆ ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಆಯ್ಕೆಯಾದವರಿಗೆ 18,000-56,9 ರೂ. ಸಂಬಳ ಸಿಗಲಿದೆ.