ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 12 ಮತ್ತು 13ರಂದು G7 ಔಟ್ರೀಚ್ ಸೆಷನ್‌ಗಳಲ್ಲಿ ವರ್ಚುವಲ್ ಮೂಲಕ ಭಾಗವಹಿಸಲಿದ್ದಾರೆ.
G7 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಖುದ್ದಾಗಿ ಹಾಜರಾಗುವುದಿಲ್ಲ ಎಂದು ಮೊದಲೇ ನಿರ್ಧರಿಸಲಾಗಿತ್ತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಪತ್ರಿಕಾಗೋಷ್ಟಿ ಯಲ್ಲಿ ತಿಳಿಸಿದ್ದಾರೆ.
"ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರ G7 ಆಹ್ವಾನಕ್ಕೆ ಅನುಗುಣವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 12 ಮತ್ತು 13ರಂದು ವರ್ಚುವಲ್ ರೂಪದಲ್ಲಿ ಔಟ್ರೀಚ್ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ" ಎಂದು ಅವರು ಹೇಳಿದರು.
ಯುಕೆ G7 ಅಧ್ಯಕ್ಷತೆಯನ್ನು ಹೊಂದಿದೆ ಮತ್ತು ಮುಂಬರುವ ಶೃಂಗಸಭೆಗೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಕೊರಿಯಾವನ್ನು ಆಹ್ವಾನಿಸಿದೆ.