ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅವಧಿಯ ಮೊದಲ ಪ್ರಗತಿ ಪರಿಶೀಲನಾ ಸಭೆ ನಡೆಸಿ, '2022ರ ವೇಳೆಗೆ ಎಲ್ಲರಿಗೂ ವಸತಿ ಒದಗಿಸುವ ಯೋಜನೆಗೆ ಸರ್ಕಾರ ಬದ್ಧವಾಗಿದೆ. ಯೋಜನೆಯಡಿಗೆ ಇರುವ ಅಡಡತಡೆಗಳನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.
ಸರ್ಕಾರದ ಹಿಂದಿನ ಅವಧಿಯಲ್ಲಿ ನಡೆದ ಇಪ್ಪತ್ತೊಂಭತ್ತು ಸಭೆಗಳಲ್ಲಿ ಒಟ್ಟು 12 ಲಕ್ಷ ಕೋಟಿ ರೂ. ಹೂಡಿಕೆಯ 257 ಯೋಜನೆಗಳ ಪರಿಶೀಲನೆ ನಡೆಸಿದರು. ಪಿಎಂ ಆವಾಸ್ ಯೋಜನೆ ಸಂಬಂಧಿಸಿದ ಕುಂದುಕೊರತೆಗಳ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
2022ರ ವೇಳೆಗೆ ಯಾವುದೇ ಕುಟುಂಬವು ಮನೆಯಿಲ್ಲದೆ ವಂಚಿತ ಆಗಬಾರದು. ಇದಕ್ಕಾಗಿ ಸರ್ಕಾರವು ತನ್ನ ಸಂಕಲ್ಪದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ಸಿದ್ಧವಿಲ್ಲ. ಉದ್ದೇಶ ಗುರಿ ಮುಟ್ಟಲು ಶ್ರದ್ಧೆಯಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಕೆಲಸ ಮಾಡುವಂತೆ ಹೇಳಿದ್ದಾರೆ.