ETV Bharat / business

ಜನವರಿಯಿಂದ ತೈಲ ಉತ್ಪಾದನೆ ಪ್ರಮಾಣ ನಿಗದಿ ನಿರ್ಧಾರಕ್ಕೆ ಬದ್ಧವಾದ ಒಪೆಕ್+ ರಾಷ್ಟ್ರಗಳು - ಜನವರಿಯಿಂದ ತೈಲ ಉತ್ಪಾದನೆಗೆ ಹೊಸ ನಿಯಮ

ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೈಲ ಬೆಲೆ ಸಾಕಷ್ಟು ಏರಿಕೆ ಕಂಡ ಹಿನ್ನೆಲೆಯಲ್ಲಿ ತೈಲ ಬೆಲೆ ಇಳಿಕೆ ಮಾಡುವಂತೆ ಕೆಲವು ರಾಷ್ಟ್ರಗಳು ಒಪೆಕ್ ರಾಷ್ಟ್ರಗಳಿಗೆ ಮನವಿ ಮಾಡಿದ್ದವು. ಈ ಮನವಿಗೆ ಒಪೆಕ್​​ ರಾಷ್ಟ್ರಗಳು ಸ್ವಲ್ಪ ಮಟ್ಟಿಗೆ ಸ್ಪಂದಿಸಿವೆ..

OPEC+ agrees on planned January oil output rise
ಜನವರಿಯಿಂದ ತೈಲ ಉತ್ಪಾದನೆ ಪ್ರಮಾಣ ನಿಗದಿ ನಿರ್ಧಾರಕ್ಕೆ ಬದ್ಧವಾದ ಒಪೆಕ್+ ರಾಷ್ಟ್ರಗಳು
author img

By

Published : Dec 3, 2021, 12:01 PM IST

ವಾಷಿಂಗ್ಟನ್, ಅಮೆರಿಕ : ಕೊರೊನಾ ವೈರಸ್​ ರೂಪಾಂತರ ಒಮಿಕ್ರೋನ್ ಭೀತಿ ಜಗತ್ತಿನಲ್ಲಿ ತಲ್ಲಣ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ತೈಲ ಬೆಲೆ ಇಳಿಯುವ ಸಾಧ್ಯತೆ ಇದ್ದರೂ, ಜನವರಿಯಿಂದ ತಿಂಗಳಿಗೆ ಇಂತಿಷ್ಟೇ ತೈಲ ಉತ್ಪಾದನೆ ಮಾಡಬೇಕೆಂಬ ನಿಯಮಕ್ಕೆ ಬದ್ಧವಾಗಿರಲು ಕಚ್ಚಾತೈಲ ಉತ್ಪಾದಿಸಿ ರವಾನಿಸುವ ಒಪೆಕ್​​ ಮತ್ತು ಒಪೆಕ್​ ಮೈತ್ರಿಕೂಟದ ರಾಷ್ಟ್ರಗಳು ನಿರ್ಧರಿಸಿವೆ.

ಇತ್ತೀಚೆಗೆ ಭಾರತ, ಚೀನಾ ಸೇರಿದಂತೆ ಅಮೆರಿಕ ನೇತೃತ್ವದ ಕೆಲವು ರಾಷ್ಟ್ರಗಳು ತಮ್ಮಲ್ಲಿ ಮೀಸಲಿಟ್ಟಿರುವ ಕಚ್ಚಾ ತೈಲವನ್ನು ಹೊರ ತೆಗೆದು, ಒಪೆಕ್ ರಾಷ್ಟ್ರಗಳಿಂದ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಿ, ತೈಲ ಉತ್ಪಾದನೆ ಮಾಡುವ ರಾಷ್ಟ್ರಗಳಿಗೆ ಹಾಕಿದ್ದ ಬೆದರಿಕೆಗೆ ಒಪೆಕ್​ ರಾಷ್ಟ್ರಗಳು ಸ್ವಲ್ಪ ಸ್ಪಂದಿಸಿವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

​ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತೈಲ ಬೆಲೆ ಸಾಕಷ್ಟು ಏರಿಕೆ ಕಂಡ ಹಿನ್ನೆಲೆ ತೈಲ ಬೆಲೆ ಇಳಿಕೆ ಮಾಡುವಂತೆ ಕೆಲವು ರಾಷ್ಟ್ರಗಳು ಒಪೆಕ್ ರಾಷ್ಟ್ರಗಳಿಗೆ ಮನವಿ ಮಾಡಿದ್ದವು.

ಆದರೆ, ತೈಲ ಉತ್ಪಾದನಾ ರಾಷ್ಟ್ರಗಳು ಮನವಿ ತಿರಸ್ಕರಿಸಿದ ಕಾರಣಕ್ಕೆ ತಮ್ಮಲ್ಲಿ ತುರ್ತು ಕಾಲಕ್ಕೆ ಮೀಸಲಿಟ್ಟಿರುವ ಕಚ್ಚಾ ತೈಲವನ್ನೇ ಉಪಯೋಗಿಸಿ, ತೈಲ ಬೆಲೆ ಇಳಿಸುವಂತೆ ಒತ್ತಡ ಹೇರಿದ್ದವು. ಆದರೂ ಒಪೆಕ್​ ರಾಷ್ಟ್ರಗಳು ಈಗ ತೈಲ ಬೆಲೆ ಇಳಿಕೆ ಮಾಡಲು ಒಲವು ತೋರಲಿಲ್ಲ.

ಅದರಲ್ಲೂ ಅಮೆರಿಕದಲ್ಲಿ ಗ್ಯಾಸೋಲಿನ್ ಬೆಲೆಗಳು ಗಗನಕ್ಕೇರಿದ್ದರಿಂದ ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಳ ಮಾಡಲು ಅಮೆರಿಕ ಪದೇಪದೆ ಒಪೆಕ್ ರಾಷ್ಟ್ರಗಳಿಗೆ ಮನವಿ ಮಾಡಿತ್ತು. ಅದರ ಜೊತೆಗೆ ಮೀಸಲು ತೈಲವನ್ನು ಬಳಸಿಕೊಳ್ಳುವುದಾಗಿ ಹೇಳಿತ್ತು.

ಒಪೆಕ್​ ಹಾಕಿಕೊಂಡಿರುವ ನಿಯಮ

ಕಚ್ಚಾ ತೈಲವನ್ನು ಹೆಚ್ಚು ಉತ್ಪಾದನೆ ಮಾಡಿದರೆ, ಅವುಗಳ ಪರಿಣಾಮ ತೈಲ ಬೆಲೆಯ ಮೇಲೆ ಆಗುತ್ತದೆ ಎಂದು ಭಾವಿಸಿದ ರಾಷ್ಟ್ರಗಳು ಜನವರಿಯಿಂದ ಇಂತಿಷ್ಟೇ ತೈಲವನ್ನು ಉತ್ಪಾದನೆ ಮಾಡಬೇಕೆಂಬ ನಿಯಮವನ್ನು ಹೊರ ತಂದಿವೆ.

ಅದರ ಪ್ರಕಾರ ಒಂದು ದಿನಕ್ಕೆ 4 ಲಕ್ಷ ಬ್ಯಾರೆಲ್​ಗಳನ್ನು (BPD- Barrels Per Day) ಮಾತ್ರವೇ ಉತ್ಪಾದನೆ ಮಾಡಬೇಕು ಅಥವಾ ಒಂದು ತಿಂಗಳಿಗೆ ನಿಗದಿಪಡಿಸಿದ ಬ್ಯಾರೆಲ್​ಗಳಿಂತ ಕಡಿಮೆ ಕಚ್ಚಾ ತೈಲ ಉತ್ಪಾದನೆ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ. ಇದೇ ನಿಯಮಕ್ಕೆ ಅಂಟಿಕೊಂಡಿರಲು ಒಪೆಕ್​ ರಾಷ್ಟ್ರಗಳು ಈಗ ನಿರ್ಧಾರ ಮಾಡಿವೆ.

ಇದನ್ನೂ ಓದಿ: 'ದ್ವೇಷವನ್ನು ಸಹಿಸಿಕೊಳ್ಳಬೇಡಿ': ಬೀಳ್ಕೊಡುಗೆ ಸಮಾರಂಭದಲ್ಲಿ ಜರ್ಮನ್ ಚಾನ್ಸೆಲರ್​ ಮರ್ಕೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.