ETV Bharat / business

ರಸ್ತೆ, ರೈಲ್ವೆ ಸೇರಿ 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಕೇಂದ್ರ ಸರ್ಕಾರದ ನಿರ್ಧಾರ.. ಕಾರಣ?

author img

By

Published : Aug 23, 2021, 8:07 PM IST

ಕೇಂದ್ರದ 11 ಇಲಾಖೆಯ ಮೂಲ ಸೌಕರ್ಯಗಳ ಯೋಜನೆ ಮಾರಾಟ ಮಾಡಲು ಮೋದಿ ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.

Nirmala Sitharaman
Nirmala Sitharaman

ನವದೆಹಲಿ: ವಿತ್ತೀಯ ಕೊರತೆ ನೀಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟಕ್ಕೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹೊರಹಾಕಿದ್ದಾರೆ.

  • Ministries of Roads, Transport & Highways, Railways, Power, Pipeline & Natural Gas, Civil Aviation, Shipping Ports & Waterways, Telecommunications, Food & Public Distribution, Mining, Coal & Housing & Urban Affairs are included in National Monetisation Pipeline: Finance Ministry

    — ANI (@ANI) August 23, 2021 " class="align-text-top noRightClick twitterSection" data=" ">

ಮುಂದಿನ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಆಸ್ತಿ ಮಾರಾಟ ಮಾಡಲು ಯೋಜನೆ ರೂಪಿಸಿದೆ ಎಂದಿರುವ ಅವರು, ಆಸ್ತಿಯ ಮಾಲೀಕತ್ವ ಕೇಂದ್ರ ಸರ್ಕಾರದ ಬಳಿಯೇ ಉಳಿದುಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಬಿಡ್ಡಿಂಗ್​ ನಡೆಸುವ ಮೂಲಕ ಆಸ್ತಿ ಮಾರಾಟ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, 2022- 2025ರ ಅವಧಿಯಲ್ಲಿ ಆಪರೇಟ್ ಮೆಂಟೇನ್​​ ಅಂಡ್ ಟ್ರಾನ್ಸ್​​ಫರ್ ಸ್ಕೀಮ್ ಯೋಜನೆ ಮೂಲಕ ಆಸ್ತಿಗಳ ಮಾರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದಕ್ಕೋಸ್ಕರ ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಪ್ಲ್ಯಾನ್​ ಜಾರಿಗೊಳಿಸಲಾಗಿದ್ದು, ಗ್ಯಾಸ್ ಪೈಪ್‌ಲೈನ್‌ಗಳು, ರಸ್ತೆಗಳು, ರೈಲ್ವೆ ಸ್ವತ್ತುಗಳು ಮತ್ತು ಗೋದಾಮಿನ ಸೌಲಭ್ಯ ಸೇರಿದಂತೆ ಇತರ ಆಸ್ತಿಗಳ ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಮಿತಾಬ್ ಕಾಂತ್ ಮಾಹಿತಿ ಹಂಚಿಕೊಂಡಿದ್ದಾರೆ. ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಪ್ಲ್ಯಾನ್​ನಲ್ಲಿ ರಾಜ್ಯ ಸರ್ಕಾರ ಹಾಗೂ ಖಾಸಗಿ ವಲಯಗಳು ಭಾಗಿಯಾಗಬಹುದಾಗಿದ್ದು, ಆಸ್ತಿ ಖರೀದಿ ಮಾಡಿದ ಹಣ ಹೊಸ ಯೋಜನೆಗೆ ಹೂಡಿಕೆ ಮಾಡಲಾಗುವುದು.

  • National Monetisation Pipeline (NMP) estimates aggregate monetization potential of Rs 6 lakh crores through core assets of the Central Govt, over a 4-year period, from FY 2022 to FY 2025: Finance Ministry https://t.co/0PSBMUDX4T

ಪ್ರಮುಖವಾಗಿ ಕೇಂದ್ರದ 11 ಇಲಾಖೆಯ ಮೂಲಸೌಕರ್ಯ ಯೋಜನೆ ಮಾರಾಟಕ್ಕೆ ಕೇಂದ್ರ ನಿರ್ಧಾರ ಮಾಡಿದ್ದು, ಇದರಲ್ಲಿ ರಸ್ತೆಗಳು, ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೆ, ವಿದ್ಯುತ್, ಪೈಪ್‌ಲೈನ್ ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಹಡಗು ಬಂದರುಗಳು ಮತ್ತು ಜಲಮಾರ್ಗಗಳು, ದೂರಸಂಪರ್ಕ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗಣಿಗಾರಿಕೆ, ಕಲ್ಲಿದ್ದಲು ಮತ್ತು ವಸತಿ ಮತ್ತು ನಗರ ವ್ಯವಹಾರ ಸೇರಿಕೊಂಡಿವೆ.

ಪ್ರಮುಖವಾಗಿ 1.6 ಲಕ್ಷ ಕೋಟಿ ರಸ್ತೆ, 1.5 ಲಕ್ಷ ರೂ. ರೈಲ್ವೆ, 79,000 ಕೋಟಿ ವಿದ್ಯುತ್​, 20,800 ಕೋಟಿ ಏರ್​ಪೋರ್ಟ್​​,13,000 ಬಂದರು, 35,000 ಕೋಟಿ ಟೆಲಿಕಾಂ, 11,500 ಕೋಟಿ ಮೈದಾನಗಳು ಹಾಗೂ 45,200 ಕೋಟಿ ಗಣಿಗಾರಿಕೆಯಿಂದ ಸಂಗ್ರಹ ಮಾಡಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.