ETV Bharat / business

ಕೋವಿಡ್​ ಲಸಿಕೆ ಪ್ರಮಾಣಪತ್ರ ತಿದ್ದುಪಡಿಗೆ ಕೋವಿನ್​ ಪ್ಲಾಟ್‌ಫಾರ್ಮ್‌ಗೆ ಹೊಸ ಫೀಚರ್ ಸೇರ್ಪಡೆ​ - ಕೋವಿನ್ ನ್ಯೂಸ್​

ಕೋವಿನ್‌ನಲ್ಲಿ ಹೊಸ ನಾಗರಿಕ ಸ್ನೇಹಿ ವೈಶಿಷ್ಟ್ಯ ಪರಿಚಯಿಸಲಾಗಿದೆ. ಈಗ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿನ ದೋಷಗಳನ್ನು ನೀವೇ ಸರಿಪಡಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಶ್ ಶೀಲ್ ಟ್ವೀಟ್ ಮಾಡಿದ್ದಾರೆ.

ಕೋವಿನ್ ಪ್ಲಾಟ್​​ಫಾರ್ಮ್
ಕೋವಿನ್ ಪ್ಲಾಟ್​​ಫಾರ್ಮ್
author img

By

Published : Jun 9, 2021, 3:41 PM IST

ನವದೆಹಲಿ: ಫಲಾನುಭವಿಗಳ ಕೋವಿಡ್​ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳು ದೋಷಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಲು, ಕೋವಿನ್ ಪ್ಲಾಟ್‌ಫಾರ್ಮ್‌ಗೆ 'ಒಂದು ಸಮಸ್ಯೆ ಹೆಚ್ಚಿಸಿ' (ರೈಸ್​​ ಆ್ಯನ್​ ಇಸ್ಯು) ಎಂಬ ವಿಶೇಷ ವೈಶಿಷ್ಟ್ಯ ಸೇರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಜಾಗರೂಕ ದೋಷಗಳು ಇದ್ದಲ್ಲಿ ಬಳಕೆದಾರರು ತಮ್ಮ ಕೋವಿಡ್​ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ಹೆಸರು, ಜನ್ಮ ದಿನಾಂಕ ಮತ್ತು ಲಿಂಗ ತಿದ್ದುಪಡಿ ಮಾಡಬಹುದು. ಇದಕ್ಕಾಗಿ, ಬಳಕೆದಾರರು www.cowin.gov.inಗೆ ಭೇಟಿ ನೀಡಬೇಕು ಮತ್ತು 'ರೈಸ್​ ಆ್ಯನ್​ ಇಸ್ಯು' ಮೊರೆ ಹೋಗುವಂತೆ ಸೂಚಿಸಿದೆ.

ಓದಿ: ಹ್ಯುಂಡೈ ಅಲ್ಕಾಜಾರ್‌​ ಎಸ್​ಯುವಿ ಬುಕ್ಕಿಂಗ್ ಶುರು

ಕೋವಿನ್‌ನಲ್ಲಿ ಹೊಸ ನಾಗರಿಕ ಸ್ನೇಹಿ ವೈಶಿಷ್ಟ್ಯ ಪರಿಚಯಿಸಲಾಗಿದೆ. ಈಗ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿನ ದೋಷಗಳನ್ನು ನೀವೇ ಸರಿಪಡಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಶ್ ಶೀಲ್ ಟ್ವೀಟ್ ಮಾಡಿದ್ದಾರೆ.

ಮಂಗಳವಾರದವರೆಗೆ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಚಾಲನೆಯಲ್ಲಿ 23.6 ಕೋಟಿ (23,61,98,726) ಕೋವಿಡ್​ ಲಸಿಕೆ ಪ್ರಮಾಣ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.