ETV Bharat / business

ಪೆಟ್ರೋಲ್​-ಡೀಸೆಲ್​ ತೆರಿಗೆ ತಗ್ಗಿಸಲು ಕೇಂದ್ರ & ರಾಜ್ಯಗಳು ಒಗ್ಗೂಡಲಿ: RBI ಗವರ್ನರ್​ - ಪೆಟ್ರೋಲ್ ಬೆಲೆ

ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯದ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಏಕೆಂದರೆ ಎರಡೂ ಅಂತರ್ಗತ ತೆರಿಗೆ ವಿಧಿಸುತ್ತವೆ. ತೆರಿಗೆಗಳ ಮಾಪನಾಂಕ ನಿರ್ಣಯಿಸುವುದು ಮುಖ್ಯವಾಗಿದೆ ಎಂದು ಆರ್‌ಬಿಐ ಗವರ್ನರ್​​ ಶಕ್ತಿಕಾಂತ್​ ದಾಸ್ ಹೇಳಿದರು.

RBI Guv
RBI Guv
author img

By

Published : Feb 25, 2021, 3:01 PM IST

ಮುಂಬೈ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲಿನ ತೆರಿಗೆ ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘಟಿತ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್​​ ಶಕ್ತಿಕಾಂತ್​ ದಾಸ್ ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯದ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಏಕೆಂದರೆ ಎರಡೂ ಅಂತರ್ಗತ ತೆರಿಗೆ ವಿಧಿಸುತ್ತವೆ. ತೆರಿಗೆಗಳ ಮಾಪನಾಂಕ ನಿರ್ಣಯಿಸುವುದು ಮುಖ್ಯವಾಗಿದೆ ಎಂದರು.

ಬಾಂಬೆ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಆದಾಯದ ಒತ್ತಡ ಹೊಂದಿವೆ. ದೇಶ ಮತ್ತು ಜನರು ಕೋವಿಡ್​-19 ಸಾಂಕ್ರಾಮಿಕ ಒತ್ತಡದಿಂದ ಹೊರಬರಲು ಸಾಧ್ಯವಾಗುವಂತೆ ಹೆಚ್ಚಿನ ಪ್ರಮಾಣದ ಹಣ ಖರ್ಚು ಮಾಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: ಭಾರತದಲ್ಲಿ ಬಾನೆತ್ತರಕ್ಕೆ ಜಿಗಿದ ಇಂಧನ ದರ: ನೇಪಾಳದಿಂದ ಪೆಟ್ರೋಲ್ ಕಳ್ಳಸಾಗಣೆ

ಆದಾಯದ ಅವಶ್ಯಕತೆ ಮತ್ತು ಸರ್ಕಾರಗಳ ಒತ್ತಾಸೆಯನ್ನು ಅರ್ಥಮಾಡಿಕೊಳ್ಳಲಾಗಿದೆ. ಆದರೆ, ಹಣದುಬ್ಬರದ ಮೇಲಿನ ಪರಿಣಾಮವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಉತ್ಪಾದನಾ, ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರುತ್ತವೆ ಎಂದು ಗವರ್ನರ್​ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.