ನವದೆಹಲಿ: ಫೋರ್ಬ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 17 ನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 44.3 ಬಿಲಿಯನ್ ಡಾಲರ್ ಆಗಿದ್ದು, ಭಾರತದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಮುಖೇಶ್ ಅಂಬಾನಿ ಅವರು ಭಾರತದ ಪ್ರಮುಖ ಕಂಪನಿಯಾದ ತೈಲ ಮತ್ತು ಅನಿಲ ದೈತ್ಯ ರಿಲಾಯನ್ಸ್ ಇಂಡಸ್ಟ್ರೀಸ್ಅನ್ನು ಮುನ್ನಡೆಸುತ್ತಿದ್ದಾರೆ. ಇದು ಇವರು ರೂ. 88 ಬಿಲಿಯನ್ ಆದಾಯ ಗಳಿಸುವ ಉದ್ಯಮವಾಗಿದೆ.
ಉಚಿತ ದೇಶೀಯ ಧ್ವನಿ ಕರೆಗಳು, ಅಗ್ಗದ ಡೇಟಾ ಸೇವೆಗಳು ಮತ್ತು ಉಚಿತ ಸ್ಮಾರ್ಟ್‌ಫೋನ್‌ಗಳನ್ನು ನೀಡುವ ಮೂಲಕ ರಿಲಾಯನ್ಸ್ ಜಿಯೋ 340 ದಶಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
ಕೊರೊನಾ ವೈರಸ್ ಬಾಧಿಸಿರುವ ಈ ಸಮಯದಲ್ಲೂ ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇವರು 113 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. 98 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಬಿಲ್ ಗೇಟ್ಸ್ ಜಗತ್ತಿನ ಎರಡನೇ ದೊಡ್ಡ ಶ್ರೀಮಂತರಾಗಿದ್ದಾರೆ.
2017 ರಲ್ಲಿ ಗ್ರಾಹಕ ಸೇವೆ ಆರಂಭಗೊಂಡ ನಂತರ ಸೂಪರ್ ಮಾರ್ಕೆಟ್ ದೈತ್ಯ ಡಿಮಾರ್ಟ್, ಭಾರತದ ಚಿಲ್ಲರೆ ಮಾರುಕಟ್ಟೆ ರಾಜನೆಂದು ಖ್ಯಾತಿ ಪಡೆದಿದೆ. ಇದರ ಅನುಭವಿ ಹೂಡಿಕೆದಾರ ಮುಂಬೈn ರಾಧಾಕಿಶನ್ ದಮಾನಿ 16.6 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 65 ನೇ ಸ್ಥಾನದಲ್ಲಿದ್ದಾರೆ.