ಬೋಪಾಲ್: ಕೇಂದ್ರದ ಮಹತ್ವಕಾಂಕ್ಷೆಯ ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆಯ (ಪಿಎಂಜೆಡಿವೈ ) 36 ಕೋಟಿ ಖಾತೆಗಳಲ್ಲಿ ಒಂದು ಲಕ್ಷ ಕೋಟಿ ರೂ.ಗೂ ಅಧಿಕ ಹಣ ಜಮೆಯಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಈ ವಿಷಯ ಬಹಿರಂಗವಾಗಿದೆ.
ಮಧ್ಯಪ್ರದೇಶದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಆರ್ಟಿಐ ಅಡಿ ಕೇಳಲಾದ ಪ್ರಶ್ನೆಗೆ ಹಣಕಾಸು ಸಚಿವಾಲಯ ಉತ್ತರಿಸಿದೆ. 2019ರ ಜುಲೈ 17ರ ವರೆಗೆ ಪಿಎಂಜೆಡಿವೈ ಅಡಿ ಒಟ್ಟು 36.25 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಇವುಗಳಿಂದ ಒಟ್ಟು ₹ 1,00,831 ಕೋಟಿ ಜಮೆ ಆಗಿದೆ ಎಂದು ತಿಳಿಸಿದೆ.
ಈ ಯೋಜನೆ ಜಾರಿಯಾಗಿ ಐದು ವರ್ಷಗಳ ಅವಧಿಯಲ್ಲಿನ 36.25 ಕೋಟಿ ಖಾತೆಗಳಲ್ಲಿ 4.99 ಕೋಟಿ ಅಥವಾ ಶೇ 14ರಷ್ಟು ಖಾತೆಗಳು ಶೂನ್ಯವಾಗಿವೆ ಎಂದು ಆರ್ಟಿಐನಲ್ಲಿ ತಿಳಿದು ಬಂದಿದೆ. 2014ರ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂಜೆಡಿವೈಗೆ ಚಾಲನೆ ನೀಡಿದ್ದರು.