ನವದೆಹಲಿ: 18 ಭಾರತೀಯ ಕಾರ್ಪೊರೇಟ್ಸ್ ಮತ್ತು ಬ್ಯಾಂಕುಗಳು ಮೂಡೀಸ್ ಹೂಡಿಕೆದಾರರ ಸೇವೆಯ ರೇಟಿಂಗ್ಸ್ ಅನ್ನು ಹೆಚ್ಚಿಸಿಕೊಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ಇತರ ಸಂಸ್ಥೆಗಳು ನಕಾರಾತ್ಮಕದಿಂದ ಸ್ಥಿರತೆಗೆ ಅಪ್‌ಗ್ರೇಡ್ ಮಾಡಿಕೊಂಡಿವೆ. ಯುಎಸ್ ಮೂಲದ ರೇಟಿಂಗ್ ಏಜೆನ್ಸಿ 'Baa3'ನಲ್ಲಿ ರೇಟಿಂಗ್ಸ್ ಅನ್ನು ದೃಢಪಡಿಸಲಾಗಿದೆ.
ಆರ್‌ಐಎಲ್, ಟಿಸಿಎಸ್, ಇನ್ಫೋಸಿಸ್, ಒಎನ್‌ಜಿಸಿ, ಪೆಟ್ರೋನೆಟ್ ಎಲ್‌ಎನ್‌ಜಿ ಲಿಮಿಟೆಡ್, ಅಲ್ಟ್ರಾಟೆಕ್ ಸಿಮೆಂಟ್, ಆಯಿಲ್ ಇಂಡಿಯಾ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಕಂಪನಿಗಳ ರೇಟಿಂಗ್ ಅನ್ನು ಪರಿಷ್ಕರಿಸಲಾಗಿದೆ. ಏಜೆನ್ಸಿ ಖಾಸಗೀಕರಣಕ್ಕೆ ಒಳಪಟ್ಟಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ರೇಟಿಂಗ್ ಅನ್ನು ದೃಢಪಡಿಸಲಾಗಿದೆ. ಆದರೆ, ಇದು ನಕಾರಾತ್ಮಕ ದೃಷ್ಟಿಕೋನವನ್ನು ಕಾಯ್ದುಕೊಂಡಿದೆ.
ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಪಿಎನ್‌ಬಿ, ಯೂನಿಯನ್ ಬ್ಯಾಂಕ್ ಮತ್ತು ಎಕ್ಸಿಮ್ ಬ್ಯಾಂಕ್‌ಗಳ ಸ್ಥಿರವಾಗಿರುವ ಒಂಬತ್ತು ಬ್ಯಾಂಕುಗಳನ್ನು ಪರಿಷ್ಕರಿಸಲಾಗಿದೆ. ಆಸ್ತಿಯ ಗುಣಮಟ್ಟದಲ್ಲಿ ಸ್ಥಿರತೆ ಮತ್ತು ಸುಧಾರಿತ ಬಂಡವಾಳವು ಈ ರೇಟಿಂಗ್ ಕ್ರಿಯೆಯ ಮುಖ್ಯ ವಸ್ತುವಾಗಿದೆ ಎಂದು ಮೂಡೀಸ್ ಹೇಳಿದೆ.
ಅಲ್ಲದೆ, ಎನ್‌ಟಿಸಿಪಿ, ಎನ್‌ಹೆಚ್‌ಎಐ, ಪಿಜಿಸಿಐಎಲ್, ಗೈಲ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (APSEZ) ಸೇರಿದಂತೆ 10 ಭಾರತೀಯ ಸಂಸ್ಥೆಗಳನ್ನು ಮೂಲಸೌಕರ್ಯ ಕಲ್ಪಿಸುವ ಮೇಲಿನ ರೇಟಿಂಗ್ ಅನ್ನು ನಕಾರಾತ್ಮಕದಿಂದ ಸ್ಥಿರತೆಯ ಸ್ಥಾನಕ್ಕೆ ಪರಿಷ್ಕರಿಸಲಾಗಿದೆ.
ಇದನ್ನೂ ಓದಿ: ಸಿಹಿ ಸುದ್ದಿ... ಭಾರತದ ಆರ್ಥಿಕ ಸ್ಥಿತಿ Negativeನಿಂದ ಸ್ಥಿರತೆಯತ್ತ: ಮೂಡಿಸ್ ವರದಿ