ETV Bharat / business

ಪಾಟ್ನಾ ವಿದ್ಯಾರ್ಥಿಗೆ ಮೈಕ್ರೋಸಾಫ್ಟ್​ನಿಂದ 43.5 ಲಕ್ಷ ಪ್ಯಾಕೇಜ್ - ಐಐಟಿ ಪಾಟ್ನಾ ವಿದ್ಯಾರ್ಥಿ ಮೋಹಿತ್​​ ಕಿಶೋರ್​

ಕೋವಿಡ್​​​​​​ನ ಈ ಸಂದಿಗ್ದ ಸಮಯದಲ್ಲಿ ಮೋಹಿತ್ ಕಿಶೋರ್ ಮೈಕ್ರೋಸಾಫ್ಟ್​ನಿಂದ ವರ್ಷಕ್ಕೆ 43.50 ಲಕ್ಷ ರೂ. ಪ್ಯಾಕೇಜ್​​ ಪಡೆದುಕೊಂಡಿದ್ದಾರೆ. ಬಿ.ಟೆಕ್‌ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಓದುತ್ತಿದ್ದಾರೆ. 16 ಕಂಪನಿಗಳು 38 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿವೆ.

ಮೋಹಿತ್​​ ಕಿಶೋರ್​
ಮೋಹಿತ್​​ ಕಿಶೋರ್​
author img

By

Published : Dec 2, 2020, 8:07 PM IST

ಪಾಟ್ನಾ: ಕೊರೊನಾ ನಡುವೆಯೂ 16 ಐಐಟಿ ಕಂಪನಿಗಳು ಈ ಬಾರಿ ಐಐಟಿ ಪಾಟ್ನಾದಿಂದ 38 ವಿದ್ಯಾರ್ಥಿಗಳನ್ನು ಕೆಲಸಕ್ಕೆ ಆಯ್ಕೆ ಮಾಡಿ ಕೊಂಡಿವೆ. ಇದರಲ್ಲಿ ಮೈಕ್ರೋಸಾಫ್ಟ್​​ ಕಂಪನಿಯಲ್ಲಿ ಕೆಲಸ ಪಡೆದುಕೊಂಡ ಮೋಹಿತ್​​ ಕಿಶೋರ್​ ಎಂಬ ವಿದ್ಯಾರ್ಥಿ ವರ್ಷಕ್ಕೆ 43.50 ಲಕ್ಷ ಸಂಬಳ ಪಡೆಯಲಿದ್ದಾರೆ.

ಇನ್ನೊಬ್ಬ ವಿದ್ಯಾರ್ಥಿಗೆ 33.50 ಲಕ್ಷ ರೂ.ಗಳ ಪ್ಯಾಕೇಜ್ ಬಂದಿದೆ ಎಂದು ತರಬೇತಿ ಮತ್ತು ಉದ್ಯೋಗ ಅಧಿಕಾರಿ ಕೃಪಾ ಶಂಕರ್ ಸಿಂಗ್ ತಿಳಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ ಮೀಡಿಯಾ ನೆಟ್ 29.92 ಲಕ್ಷ ರೂ.ಪ್ಯಾಕೇಜ್​ ನೀಡಿದೆ. ಗೂಗಲ್ ನಾಲ್ಕು ಪೂರ್ವ ವರ್ಷದ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ನೀಡಿದೆ.

ಈ ವರ್ಷ ಸಂಪೂರ್ಣ ನಿಯೋಜನೆ ಪ್ರಕ್ರಿಯೆಯು ಆನ್‌ಲೈನ್ ಅಥವಾ ವರ್ಚುಯಲ್ ಮೋಡ್‌ನಲ್ಲಿ ನಡೆಯಿತು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ವಿದ್ಯಾರ್ಥಿಗಳು ಮನೆಯಲ್ಲಿದ್ದಾರೆ. ಇದರಿಂದಾಗಿ ಕಂಪನಿಗಳು ಕ್ಯಾಂಪಸ್‌ಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಕೆಲವು ಕಂಪನಿಗಳು ಆನ್‌ಲೈನ್ ಪ್ರಕ್ರಿಯೆಯೂ ಕಡಿಮೆ ಹಣಕ್ಕೆ ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬುತ್ತಾರೆ. ನಿಯೋಜನೆಯ ಪ್ರಕ್ರಿಯೆಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗಿತ್ತು.

ಡಿ.11ರಿಂದ ಫಿಕ್ಕಿ ಸಮಾವೇಶ: 'ಇನ್​ಸ್ಪಾಯರ್ಡ್​ ಇಂಡಿಯಾ' ಬಗ್ಗೆ ಪ್ರಧಾನಿ ಮೋದಿ, ಸತ್ಯ ನಾಡೆಲ್​ ಭಾಷಣ

ಇದಕ್ಕೂ ಮುಂಚೆಯೇ ಐಐಟಿ ಪಾಟ್ನಾದಲ್ಲಿ ಉತ್ತಮ ಆಯ್ಕೆಗಳನ್ನು ಮಾಡಿಕೊಳ್ಳಲಾಗಿದೆ. ಸೆಪ್ಟೆಂಬರ್‌ನಲ್ಲಿ ಜಪಾನಿನ ಕಂಪನಿ ರಕುಟಿನ್ ಎಂಟೆಕ್‌ನ ಅವಿನಾಶ್ ಸಿಂಗ್, ನಿಧಿ ಠಾಕೂರ್ ಮತ್ತು ರಾಜೀವ್ ರೋಶನ್ ಅವರಿಗೆ 59 ಲಕ್ಷ ರೂ. ಪ್ಯಾಕೇಜ್​ ಕೊಟ್ಟು ಆಯ್ಕೆ ಮಾಡಿಕೊಂಡಿತ್ತು. ಇನ್ನು ಬಿಟೆಕ್‌ನ ಸೌರಭ್‌ಗೆ ಮೈಕ್ರೋಸಾಫ್ಟ್ 40 ಲಕ್ಷ ರೂಪಾಯಿ ನೀಡಿತ್ತು.

ಪಾಟ್ನಾ ಐಐಟಿ ಕ್ಯಾಂಪಸ್‌ನಲ್ಲಿ ಈ ಬಾರಿ ಅತಿ ಹೆಚ್ಚು ಪ್ಯಾಕೇಜ್ ಪಡೆದ ಮೋಹಿತ್ ಕಿಶೋರ್ ಬಿ.ಟೆಕ್‌ನಿಂದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್​ ಕಲಿಯುತ್ತಿದ್ದಾರೆ. ಬಿಹಾರದ ಗಯಾ ಜಿಲ್ಲೆಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಮೋಹಿತ್ ಜನಿಸಿದ್ದಾರೆ. ಅವರ ತಂದೆಯ ಹೆಸರು ಕಿಶೋರ್ ಕುಮಾರ್ ಸಿನ್ಹಾ ಮತ್ತು ತಾಯಿಯ ಹೆಸರು ಉಷಾ ಸಿನ್ಹಾ. ಮೋಹಿತ್ ತಂದೆ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಈಗ ನಿವೃತ್ತರಾಗಿದ್ದಾರೆ.

ಮೋಹಿತ್ ಪಾಟ್ನಾದ ದಾನಪುರದ ರೇಡಿಯಂಟ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 10 ಮತ್ತು ಹೋಲಿ ಮಿಷನ್ ಸೆಕೆಂಡರಿ ಶಾಲೆಯಲ್ಲಿ 12ನೇ ತರಗತಿ ಓದಿದ್ದಾರೆ. ಮೋಹಿತ್ ಮೊದಲಿನಿಂದಲೂ ಅಧ್ಯಯನದಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ತಂದೆ ಕಿಶೋರ್ ಕುಮಾರ್ ಸಿನ್ಹಾ ಹೇಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.