ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ತನ್ನ ಸಿಯಾಜ್ ಕಂಪನಿಯ 3 ಲಕ್ಷಕ್ಕೂ ಅಧಿಕ ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಮಾರುತಿ ಸುಜುಕಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.
ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಸುಜುಕಿ ಹೆಚ್ಚಿನ ಮೈಲೇಜ್ ಕೊಡಲಿದೆ. ಪ್ರಸ್ತುತ ಈ ಕಾರಿನ ಬೆಲೆ 8.72 ಲಕ್ಷ ರೂ.ನಿಂದ 11.71 ಲಕ್ಷ ರೂ.ವರೆಗೆ (ದೆಹಲಿಯ ಎಕ್ಸ್ ಶೋ ರೂಂ) ಇದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಂಎಸ್‌ಐಎಲ್ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ, 2014 ರಲ್ಲಿ ಕಂಪನಿ ಪ್ರಾರಂಭವಾಗಿದ್ದು, ಸಿಯಾಜ್ ಅತ್ಯಂತ ಸ್ಪರ್ಧಾತ್ಮಕ ಪ್ರೀಮಿಯಂ ಸೆಡಾನ್ ವಿಭಾಗದಲ್ಲಿ ಭರ್ಜರಿ ಯಶಸ್ಸನ್ನು ಕಂಡಿದೆ ಎಂದು ಹೇಳಿದರು.
ಇದನ್ನೂ ಓದಿ: ಆದಾಯ ತೆರಿಗೆ ಪಾವತಿ ಅಂತಿಮ ದಿನಾಂಕ ವಿಸ್ತರಣೆ
3 ಲಕ್ಷ ಕಾರು ಮಾರಾಟದ ಮೈಲಿಗಲ್ಲು ಗ್ರಾಹಕರ ನಂಬಿಕೆ ಮತ್ತು ಬ್ರಾಂಡ್‌ನಲ್ಲಿ ವಿಶ್ವಾಸವನ್ನು ತೋರಿಸುತ್ತದೆ ಎಂದು ಶಶಾಂಕ್ ಹೇಳಿದ್ದಾರೆ.