ETV Bharat / business

ಸರ್ಕಾರಗಳು ಹಣದ ಹಾಲು ಕೊಡುವ ಹಸುಗಳಲ್ಲ: ಎಸ್​ಬಿಐ ಮುಖ್ಯಸ್ಥರ ಹೇಳಿಕೆಯ ಮರ್ಮವೇನು?

ಆದಷ್ಟು ಬೇಗ ಆಸ್ತಿ ವಿವರನ್ನು ಚುಕ್ತಗೊಳಿಸಿಕೊಳ್ಳಿ. ಬೆಲೆಗಳು ಏರಿಕೆಯಾಗುತ್ತವೆ ಎಂದು ನಂಬಿದ್ದೆವು. ಆದರೆ, ದುರದೃಷ್ಟವಶಾತ್ ಬೆಲೆಗಳು ಏರಿಕೆಯಾಗುತ್ತಿಲ್ಲ. ಹಿಂದೆ ಪ್ರಥಮ ಬಾರಿಗೆ ಮನೆ ಖರೀದಿಸುವವರು ಇದ್ದರು ಮತ್ತು ಹೂಡಿಕೆದಾರರೂ ಇದ್ದರು. ಅವರಿಂದ ಐದು ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಈಗ ಅಂತಹ ಸಮಯಗಳು ಮುಗಿದಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದರು.

SBI chief
ಎಸ್​ಬಿಐ ಮುಖ್ಯಸ್ಥ
author img

By

Published : Apr 11, 2020, 5:44 PM IST

ನವದೆಹಲಿ: ರಿಯಲ್ ಎಸ್ಟೇಟ್ ಸಂಸ್ಥೆಗಳು ತಮ್ಮ ಬ್ಯಾಂಕ್ ಖಾತೆಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು. ತಪಶೀಲು ಪಟ್ಟಿಯಲ್ಲಿ ಸ್ಪಷ್ಟತೆ ಹಾಗೂ ವ್ಯವಹಾರದ ಬಗೆಗಿನ ಗ್ರಹಿಕೆ ಸುಧಾರಿಸಿಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ರಜನೀಶ್ ಕುಮಾರ್ ಸಲಹೆ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆ ಮಾತನಾಡಿದ ಅವರು, ರಿಯಲ್​ ಎಸ್ಟೇಟ್ ಉದ್ಯಮದ ಅಸ್ತಿತ್ವ ಮತ್ತು ಆದಷ್ಟು ಬೇಗ ಈ ಹಿಂದಿನ ಲಯಕ್ಕೆ ಮರಳಲು ಬಯಸಿದರೆ ನಿಮ್ಮನ್ನು ನೀವು ತಿದ್ದಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಆದಷ್ಟು ಬೇಗ ಆಸ್ತಿ ವಿವರನ್ನು ಚುಕ್ತಗೊಳಿಸಿಕೊಳ್ಳಿ. ಬೆಲೆಗಳು ಏರಿಕೆಯಾಗುತ್ತವೆ ಎಂದು ನಂಬಿದ್ದೆವು. ಆದರೆ, ದುರದೃಷ್ಟವಶಾತ್ ಬೆಲೆಗಳು ಏರಿಕೆಯಾಗುತ್ತಿಲ್ಲ. ಹಿಂದೆ ಪ್ರಥಮ ಬಾರಿಗೆ ಮನೆ ಖರೀದಿಸುವವರು ಇದ್ದರು ಮತ್ತು ಹೂಡಿಕೆದಾರರೂ ಇದ್ದರು. ಅವರಿಂದ ಐದು ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ಈಗ ಅಂತಹ ಸಮಯಗಳು ಮುಗಿದಿವೆ ಎಂದು ಹೇಳಿದರು.

ಉದ್ಯಮವು ವೆಚ್ಚವನ್ನು ಕಡಿಮೆ ಮಾಡಲು ಮತ್ತು ವಹಿವಾಟು ಸಮಯವನ್ನು ಸುಧಾರಿಸುವ ಅವಕಾಶಗಳನ್ನು ಅನ್ವೇಷಿಸಿಕೊಳ್ಳಬೇಕಿದೆ ಎಂದು ಅವರುಸಲಹೆ ನೀಡಿದರು.

ನಾವು ನಿರ್ಮಾಣ ಅವಧಿಯನ್ನು ಹೇಗೆ ಕಡಿಮೆಗೊಳಿಸುತ್ತೇವೆ? ನಿರ್ಮಾಣ ಸಾಮಗ್ರಿಗಳ ಮೇಲೆ ನಾವು ವೆಚ್ಚವನ್ನು ಹೇಗೆ ನಿಯಂತ್ರಣದಲ್ಲಿ ಇರಿಸಿಕೊಳ್ಳುತ್ತೇವೆ ಎಂಬುದರ ಬಗ್ಗೆ ಯೋಚಿಸಬೇಕು. ಉದ್ಯಮವು ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳ ಮೇಲೆ ಪ್ರಭಾವ ಬೀರಬೇಕು. ಅದು ನಗದು ಹಾಲು ನೀಡುವ ಹಸುವಲ್ಲ. ನೀವು ಸದಾ ಹಾಲು ಕರಿಯುದನ್ನೇ ಮುಂದುವರಿಸುವ ಬದಲು, ನಿರ್ಮಾಣದ ಮೇಲಿನ ವೆಚ್ಚವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರತ್ತ ಗಮನಹರಿಸಿ ಎಂದು ರೂಪಕವಾಗಿ ಸಲಹೆ ನೀಡಿದರು.

ಪ್ರತಿಯೊಬ್ಬರ ಪ್ರಯತ್ನವು ಕೈಗೆಟುಕುವ ದರದಲ್ಲಿ ವಸತಿ ನೀಡುವಂತಹ ಉದ್ದೇಶ ಹೊಂದಿರಬೇಕು. ಬೆಲೆ ಏರಿಕೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ದೀರ್ಘಾವಧಿಯವರೆಗೆ ನಿಮ್ಮಲ್ಲಿಯೇ ವಸತಿಗಳನ್ನು ಹಿಡಿದಿಟ್ಟುಕೊಳ್ಳುವ ಬದಲು, ಕಟ್ಟಡಗಳನ್ನು ವೇಗವಾಗಿ ನಿರ್ಮಿಸುವುದರ ಜೊತೆಗೆ ತ್ವರಿತವಾಗಿ ಮಾರಾಟ ಮಾಡುವುದು ಕೂಡ ಇರಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.