ETV Bharat / business

ನ್ಯಾಯಮೂರ್ತಿಗಳ ಹುದ್ದೆ ಖಾಲಿ ಖಾಲಿ: 90 ಸಾವಿರ ಕೇಸ್​ಗಳು 30 ವರ್ಷದಿಂದ ಬಾಕಿ!

author img

By

Published : Mar 20, 2021, 8:07 PM IST

ನ್ಯಾಯ ವಿಳಂಬವಾಗಲು ಹಲವು ಕಾರಣಗಳಿವೆ. ಆದರೆ ಹೆಚ್ಚಿನ ಸಂಖ್ಯೆಯ ಖಾಲಿಯಾಗಿರುವ ನ್ಯಾಯಮೂರ್ತಿಗಳ ಸ್ಥಾನಗಳಿಂದ ನಾಗರಿಕರಿಗೆ ನ್ಯಾಯ ವಿತರಣೆಯಲ್ಲಿ ವಿಳಂಬವಾಗಲು ಬಹುದೊಡ್ಡ ಕಾರಣವಾಗಿದೆ. ಹೈಕೋರ್ಟ್‌ಗಳಲ್ಲಿ ಶೇ 40ರಷ್ಟು ಹುದ್ದೆಗಳು ಖಾಲಿಯಿವೆ. ಕೆಳ ಹಂತದ ನ್ಯಾಯಾಲಯದಲ್ಲಿ ಶೇ 20ಕ್ಕೂ ಅಧಿಕ ಹುದ್ದೆಗಳು ಭರ್ತಿಗಾಗಿ ಕಾಯುತ್ತಿವೆ.

Justice
Justice

ನವದೆಹಲಿ: ಲಕ್ಷಾಂತರ ಭಾರತೀಯರು ನ್ಯಾಯಕ್ಕಾಗಿ ವರ್ಷಗಳವರೆಗೆ ಕಾಯುತ್ತಿದ್ದು, ಕೆಳ ಹಂತದ ನ್ಯಾಯಾಲಯಗಳಲ್ಲಿ 3.8 ಕೋಟಿ ಪ್ರಕರಣಗಳು ವಿಲೇವಾರಿಯಾಗದೆ ದಶಕಗಳಿಂದ ಬಾಕಿ ಉಳಿದಿವೆ.

ದೇಶದ 25 ಹೈಕೋರ್ಟ್‌ಗಳಲ್ಲಿ 57 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ ಎಂದು ಇತ್ತೀಚೆಗೆ ಸರ್ಕಾರ ಸಂಸತ್ತಿನಲ್ಲಿ ಹಂಚಿಕೊಂಡ ಮಾಹಿತಿಯಿಂದ ತಿಳಿದುಬಂದಿದೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತದ ನ್ಯಾಯದಾನ ವ್ಯವಸ್ಥೆಯು ತೀವ್ರತರವಾದ ನ್ಯಾಯಮೂರ್ತಿಗಳ ಕೊರತೆಯನ್ನು ನಿಭಾಯಿಸಿತ್ತು. ಸುಪ್ರೀಂಕೋರ್ಟ್​ನಲ್ಲಿ 1,080 ನ್ಯಾಯಮೂರ್ತಿ, 25 ಹೈಕೋರ್ಟ್‌ಗಳಲ್ಲಿ ಒಟ್ಟು 440 ಹುದ್ದೆಗಳು ಖಾಲಿಯಾಗಿದ್ದು, ಶೇ 40ರಷ್ಟು ಹುದ್ದೆಗಳನ್ನು ಮಾಡಬೇಕಿದೆ.

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿನ 661 ನ್ಯಾಯಮೂರ್ತಿಗಳಲ್ಲಿ 255 ಅಥವಾ ಒಟ್ಟು ಭರ್ತಿ ಮಾಡಿದ ಹುದ್ದೆಗಳಲ್ಲಿ ಶೇ 40ರಷ್ಟು ಕಳೆದ ಮೂರು ವರ್ಷಗಳಲ್ಲಿ ನೇಮಕಗೊಂಡಿವೆ. ಅವರಲ್ಲಿ ಹೆಚ್ಚಿನವರು 2018 ಮತ್ತು 2019ರಲ್ಲಿ ನೇಮಕವಾಗಿದ್ದಾರೆ.

ಇದನ್ನೂ ಓದಿ: ಧೂಮಪಾನಿಗಳೇ ಎಚ್ಚರ! ರೈಲಿನಲ್ಲಿ ಸಿಗರೇಟ್​ ಸೇದಿದ್ರೆ ಜೈಲು ಶಿಕ್ಷೆ ಖಚಿತ

2020ರಲ್ಲಿ ಸುಪ್ರೀಂಕೋರ್ಟ್ ಮತ್ತು ದೇಶದ 10 ಹೈಕೋರ್ಟ್‌ಗಳಿಗೆ ಯಾವುದೇ ನ್ಯಾಯಮೂರ್ತಿಗಳು ನೇಮಕವಾಗಿಲ್ಲ. ಕಳೆದ ವರ್ಷ 15 ಹೈಕೋರ್ಟ್‌ಗಳಲ್ಲಿ 66 ನ್ಯಾಯಮೂರ್ತಿಗಳನ್ನು ನೇಮಿಸಲಾಯಿತು.

ಸುಪ್ರೀಂಕೋರ್ಟ್‌ನಲ್ಲಿ 34 ಹುದ್ದೆಗಳ ಪರಿಸ್ಥಿತಿ ಉತ್ತಮವಾಗಿದ್ದು, 2020ರಲ್ಲಿ ಕೇವಲ ನಾಲ್ಕು ಹುದ್ದೆಗಳು ಖಾಲಿ ಇದ್ದವು. ಆದರೆ 30 ಸಿಟ್ಟಿಂಗ್ ನ್ಯಾಯಮೂರ್ತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ನ್ಯಾಯಮೂರ್ತಿಗಳನ್ನು 2018 ಮತ್ತು 2019ರಲ್ಲಿ ನೇಮಕ ಮಾಡಲಾಗಿದೆ.

ಹೈಕೋರ್ಟ್‌ಗಳಲ್ಲಿ 40ರಷ್ಟು ಖಾಲಿ ಹುದ್ದೆಗಳು

ದೇಶದ 25 ಹೈಕೋರ್ಟ್‌ಗಳಲ್ಲಿ 1,046 ನ್ಯಾಯಮೂರ್ತಿ ಹುದ್ದೆಗಳಿದ್ದು, 1.35 ಶತಕೋಟಿಗೂ ಹೆಚ್ಚು ಭಾರತೀಯರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕಳೆದ ವರ್ಷ ಮಂಜೂರಾದ ಒಟ್ಟು ಬಲದ 415 (ಶೇ 40ರಷ್ಟು) ಖಾಲಿಯಾಗಿವೆ.

ದೇಶದ ಏಳು ಹೈಕೋರ್ಟ್‌ಗಳು ಅರ್ಧದಷ್ಟು ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಪಾಟ್ನಾ ಹೈಕೋರ್ಟ್‌ ಒಟ್ಟು 53 ಸ್ಥಾನಗಳಲ್ಲಿ ಕೇವಲ 21 ನ್ಯಾಯಮೂರ್ತಿಗಳು ಕಳೆದ ವರ್ಷ ಕೆಲಸ ಮಾಡುತ್ತಿದ್ದು, 32 ಹುದ್ದೆಗಳು ಖಾಲಿಯಾಗಿವೆ. ಒಟ್ಟು ಬಲದ ಶೇ 60ರಷ್ಟಕ್ಕಿಂತ ಹೆಚ್ಚು.

ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಒಟ್ಟು 72 ಸ್ಥಾನಗಳಲ್ಲಿ 40 ಖಾಲಿ ಇದ್ದು, ಇದು ಅನುಮೋದಿತ ಬಲ ಶೇ 55ಕ್ಕಿಂತ ಹೆಚ್ಚಿದೆ. ರಾಜಸ್ಥಾನ್ ಹೈಕೋರ್ಟ್​ನಲ್ಲಿ 50 ಸ್ಥಾನಗಳಲ್ಲಿ 27 ಹುದ್ದೆಗಳು ಖಾಲಿ ಇದ್ದು, ಜೋಧಪುರ ಮತ್ತು ಜೈಪುರದ ಹೈಕೋರ್ಟ್‌ನ ಎರಡು ಪೀಠಗಳಲ್ಲಿ ಕೇವಲ 23 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ಒಟ್ಟು 53 ಸ್ಥಾನಗಳ ಪೈಕಿ 26 ಹುದ್ದೆಗಳು ಖಾಲಿಯಾಗಿವೆ. ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ಕಳೆದ ವರ್ಷ ಒಟ್ಟು 37 ಹುದ್ದೆಗಳಲ್ಲಿ 18 ಹುದ್ದೆಗಳು ಖಾಲಿ ಇದ್ದು, ಇದು ಎರಡು ಹೈಕೋರ್ಟ್‌ಗಳಿಗೆ ಒಟ್ಟು ಬಲದ ಅರ್ಧದಷ್ಟಿದೆ.

ರಾಷ್ಟ್ರೀಯ ರಾಜಧಾನಿಗೆ ಸೇವೆ ಸಲ್ಲಿಸುತ್ತಿರುವ ದೆಹಲಿ ಹೈಕೋರ್ಟ್‌ನಲ್ಲೂ ಇದೇ ಪರಿಸ್ಥಿತಿ ಇದೆ. ಕಳೆದ ವರ್ಷ ಒಟ್ಟು 60 ಹುದ್ದೆಗಳಲ್ಲಿ 29 ಹುದ್ದೆಗಳು ಖಾಲಿ ಇದ್ದವು ಎಂದು ಸರ್ಕಾರ ಬುಧವಾರ ಸಂಸತ್ತಿನಲ್ಲಿ ಮಾಹಿತಿ ಹಂಚಿಕೊಂಡಿದೆ.

ಒಡಿಶಾ ಹೈಕೋರ್ಟ್‌ನಲ್ಲಿ ಕೇವಲ 15 ನ್ಯಾಯಮೂರ್ತಿಗಳಿದ್ದು, 27 ಹುದ್ದೆಗಳ ಅನುಮೋದಿತ ಬಲಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 12 ಹುದ್ದೆಗಳು ಖಾಲಿ ಇವೆ, ಇದು ಒಟ್ಟು ಹುದ್ದೆಗಳಲ್ಲಿ ಶೇ 45ರಷ್ಟಿದೆ.

ನೇಮಕಾತಿಯ ವಿವಾದ

ಭಾರತದಲ್ಲಿ ಉನ್ನತ ನ್ಯಾಯಾಂಗದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ನೇಮಕಾತಿ ವಿವಾದಾಸ್ಪದ ವಿಷಯವಾಗಿದೆ. ಕೊಲೆಜಿಯಂ ಎಂದು ಕರೆಯಲ್ಪಡುವ ಸಮಿತಿಯ ಶಿಫಾರಸುಗಳ ಮೇರೆಗೆ ನ್ಯಾಯಮೂರ್ತಿಯನ್ನು ನೇಮಿಸಲಾಗುತ್ತದೆ.

ಸಾಂವಿಧಾನಿಕ ಚೌಕಟ್ಟಿನ ಪ್ರಕಾರ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕಾತಿಯನ್ನು ಸಂವಿಧಾನದ 124, 217 ಮತ್ತು 224ನೇ ವಿಧಿಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತದೆ.

ಬಾಕಿ ಉಳಿದ ಪ್ರಕರಣಗಳು

ನ್ಯಾಷನಲ್ ಜ್ಯುಡಿಶಿಯಲ್ ಡೇಟಾ ಗ್ರಿಡ್ ಪ್ರಕಾರ, 25 ಹೈಕೋರ್ಟ್‌ಗಳಲ್ಲಿ 57 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಅದರಲ್ಲಿ 41 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಸಿವಿಲ್ ಪ್ರಕರಣಗಳಾಗಿದ್ದು, ಕ್ರಿಮಿನಲ್ ಪ್ರಕರಣಗಳ ಸಂಖ್ಯೆ 16 ಲಕ್ಷಕ್ಕೂ ಹೆಚ್ಚಾಗಿದ್ದು, ಶೇ 28ರಷ್ಟು ಬಾಕಿ ಉಳಿದ ಪ್ರಕರಣಗಳಗಿವೆ.

ಬಾಕಿ ಉಳಿದಿರುವ ಈ ಪ್ರಕರಣಗಳಲ್ಲಿ ಬಹುಪಾಲು ಒಂದು ವರ್ಷಕ್ಕಿಂತ ಹಳೆಯವೇ ಇವೆ. ಸಿವಿಲ್​ ವ್ಯಾಜ್ಯಕ್ಕೆ ಸಂಬಂಧಪಟ್ಟ ಶೇ 90ಕ್ಕಿಂತ ಹೆಚ್ಚು ಜನರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಾಯುತ್ತಿದ್ದಾರೆ. ಶೇ 85ರಷ್ಟು ಕ್ರಿಮಿನಲ್ ಪ್ರಕರಣಗಳು 1 ವರ್ಷಕ್ಕಿಂತ ಹಳೆಯದಾಗಿವೆ.

ಶೇ 58ಕ್ಕೂ ಹೆಚ್ಚು ಪ್ರಕರಣಗಳು 3 ವರ್ಷಕ್ಕಿಂತ ಹಳೆಯದಾದರೆ, ಸುಮಾರು ಶೇ 20ರಷ್ಟು ಪ್ರಕರಣಗಳು 10 ವರ್ಷಕ್ಕಿಂತ ಹಳೆಯವಾಗಿವೆ. 10 ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಇರುವ ಒಟ್ಟು 12.5 ಲಕ್ಷ ಪ್ರಕರಣಗಳಲ್ಲಿ 1.51 ಲಕ್ಷಕ್ಕೂ ಹೆಚ್ಚು ಪ್ರಕರಣಗಳು 20ಕ್ಕೂ ಹೆಚ್ಚು ವರ್ಷಗಳಿಂದ ಬಾಕಿ ಉಳಿದಿವೆ. ಸುಮಾರು 92,000 ಪ್ರಕರಣಗಳು 30 ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದುಕೊಂಡಿವೆ.

-ಕೃಷ್ಣಾನಂದ ತ್ರಿಪಾಠಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.