ETV Bharat / business

5G ಪರಿಹಾರಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ ಜಿಯೋ ಮತ್ತು ಕ್ವಾಲ್‌ಕಾಮ್: ಪ್ರಯೋಗಗಳಲ್ಲಿ 1Gbpsಗೂ ಹೆಚ್ಚಿನ ವೇಗದ ಸಾಧನೆ - ಜಿಯೋ ಮತ್ತು ಕ್ವಾಲ್‌ಕಾಮ್

ಕ್ವಾಲ್‌ಕಾಮ್® 5G RAN ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಜಿಯೋ 5GNR ಪರಿಹಾರದಲ್ಲಿ 1 Gbps ಮೈಲಿಗಲ್ಲನ್ನು ದಾಟಿರುವುದಾಗಿಯೂ ಕ್ವಾಲ್‌ಕಾಮ್ ಟೆಕ್ನಾಲಜೀಸ್ ಮತ್ತು ಜಿಯೋ ಘೋಷಿಸಿವೆ.

jio
jio
author img

By

Published : Oct 21, 2020, 4:05 PM IST

ಮುಂಬಯಿ / ಸ್ಯಾನ್ ಡಿಯಾಗೋ: ಕ್ವಾಲ್‌ಕಾಮ್ ಟೆಕ್ನಾಲಜೀಸ್, ಇಂಕ್ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (ಜಿಯೋ) ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ರಾಡಿಸಿಸ್ ಕಾರ್ಪೊರೇಷನ್‌ನೊಂದಿಗೆ ಇಂದು ವರ್ಚುವಲೈಸ್ಡ್ RANನೊಂದಿಗೆ ಮುಕ್ತ ಮತ್ತು ಇಂಟರ್‌ಆಪರಬಲ್ ಇಂಟರ್‌ಫೇಸ್ ಕಂಪ್ಲಯಂಟ್ ಆರ್ಕಿಟೆಕ್ಚರ್ ಆಧಾರಿತ 5G ಪರಿಹಾರಗಳನ್ನು ಅಭಿವೃದ್ಧಿಪಡಿಸುವ ವಿಸ್ತೃತ ಪ್ರಯತ್ನಗಳನ್ನು ಪ್ರಕಟಿಸಿವೆ. ಭಾರತದಲ್ಲಿ ಸ್ಥಳೀಯ 5G ನೆಟ್‌ವರ್ಕ್ ಮೂಲಸೌಕರ್ಯ ಮತ್ತು ಸೇವೆಗಳ ಅಭಿವೃದ್ಧಿ ಹಾಗೂ ಪ್ರಾರಂಭವನ್ನು ತ್ವರಿತಗೊಳಿಸುವುದು ಈ ಪ್ರಯತ್ನಗಳ ಉದ್ದೇಶವಾಗಿದೆ.

ಕ್ವಾಲ್‌ಕಾಮ್® 5G RAN ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಜಿಯೋ 5GNR ಪರಿಹಾರದಲ್ಲಿ 1 Gbps ಮೈಲಿಗಲ್ಲನ್ನು ದಾಟಿರುವುದಾಗಿಯೂ ಕ್ವಾಲ್‌ಕಾಮ್ ಟೆಕ್ನಾಲಜೀಸ್ ಮತ್ತು ಜಿಯೋ ಘೋಷಿಸಿವೆ. ಈ ಸಾಧನೆಯು ಜಿಯೋನ 5ಜಿ ರುಜುವಾತುಗಳನ್ನು ಬೆಂಬಲಿಸುವುದಲ್ಲದೆ, ಗಿಗಾಬಿಟ್ 5G NR ಉತ್ಪನ್ನಗಳ ಕ್ಷೇತ್ರಕ್ಕೆ ಜಿಯೋ ಮತ್ತು ಭಾರತದ ಪ್ರವೇಶವನ್ನೂ ಸೂಚಿಸುತ್ತದೆ.

Qualcomm
ಕ್ವಾಲ್‌ಕಾಮ್

5G ತಂತ್ರಜ್ಞಾನದೊಂದಿಗೆ, ಬಳಕೆದಾರರು 5G-ಸಶಕ್ತ ಸ್ಮಾರ್ಟ್‌ಫೋನ್‌ಗಳಿಂದ ಎಂಟರ್‌ಪ್ರೈಸ್ ಲ್ಯಾಪ್‌ಟಾಪ್‌ಗಳವರೆಗೆ, ಎಆರ್/ವಿಆರ್ ಉತ್ಪನ್ನಗಳಿಂದ ವರ್ಟಿಕಲ್ ಐಒಟಿ ಪರಿಹಾರಗಳವರೆಗೆ ಹೆಚ್ಚಿನ ವೇಗದ ಡೇಟಾ, ಕಡಿಮೆ ವಿಳಂಬವಿರುವ ಸಂವಹನ ಮತ್ತು ಸಂಪರ್ಕಿತ ಸಾಧನಗಳ ವ್ಯಾಪಕ ಶ್ರೇಣಿಯಾದ್ಯಂತ ವರ್ಧಿತ ಡಿಜಿಟಲ್ ಅನುಭವಗಳ ಅನುಕೂಲವನ್ನು ಪಡೆಯುತ್ತಾರೆ.

jio
ಜಿಯೋ

ರಿಲಯನ್ಸ್ ಜಿಯೋ ಇನ್‌ಫೋಕಾಮ್‌ನ ಅಧ್ಯಕ್ಷ ಮ್ಯಾಥ್ಯೂ ಊಮ್ಮೆನ್, "ನಿಜವಾಗಿಯೂ ಮುಕ್ತ ಮತ್ತು ಸಾಫ್ಟ್‌ವೇರ್ ವ್ಯಾಖ್ಯಾನಿತವಾದ ಹೊಸ ತಲೆಮಾರಿನ ಕ್ಲೌಡ್-ನೇಟಿವ್ 5G RAN ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಕ್ವಾಲ್‌ಕಾಮ್ ಟೆಕ್ನಾಲಜೀಸ್‌ನೊಂದಿಗೆ ಕೆಲಸ ಮಾಡುವ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಕ್ವಾಲ್‌ಕಾಮ್ ಟೆಕ್ನಾಲಜೀಸ್‌ನೊಂದಿಗೆ ಸುರಕ್ಷಿತ RAN ಪರಿಹಾರಗಳ ಅಭಿವೃದ್ಧಿಯು ಜಿಯೋ ಪ್ಲಾಟ್‌ಫಾರ್ಮ್ಸ್ ಮತ್ತು ಪ್ರಮಾಣದೊಂದಿಗೆ ಸೇರಿ, ಎಲ್ಲರನ್ನೂ ಒಳಗೊಳ್ಳುವ 5G ರಾಷ್ಟ್ರಕ್ಕಾಗಿ ಸ್ಥಳೀಯ ಉತ್ಪಾದನೆ ಹಾಗೂ ಆತ್ಮನಿರ್ಭರ ಭಾರತದ ಸಾಧನೆಯ ವೇಗವರ್ಧನೆಗೆ ಸೂಕ್ತವಾದ ಸಂಯೋಜನೆಯನ್ನು ಒದಗಿಸುತ್ತದೆ." ಎಂದು ಹೇಳಿದ್ದಾರೆ.

ಕ್ವಾಲ್‌ಕಾಮ್ ಟೆಕ್ನಾಲಜೀಸ್, ಇಂಕ್‌ನ 4G/5G ಹಿರಿಯ ಉಪಾಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕ ದುರ್ಗಾ ಮಲ್ಲಾಡಿ, "ಕ್ವಾಲ್‌ಕಾಮ್ ಟೆಕ್ನಾಲಜೀಸ್ ಜಗತ್ತಿನಾದ್ಯಂತ ವರ್ಚುವಲೈಸ್ಡ್, ಫ್ಲೆಕ್ಸಿಬಲ್ ಮತ್ತು ಇಂಟರ್‌ಆಪರಬಲ್ 5G ಮೂಲಸೌಕರ್ಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವ ಗುರಿ ಹೊಂದಿದೆ. ಕ್ವಾಲ್‌ಕಾಮ್ 5G RAN ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ರಿಲಯನ್ಸ್ ಜಿಯೋ 5G NR ಉತ್ಪನ್ನದಲ್ಲಿ ನಾವು ಇತ್ತೀಚೆಗೆ 1 Gbps ಮೈಲಿಗಲ್ಲನ್ನು ಸಾಧಿಸಿದ್ದೇವೆ, ಮತ್ತು ಫ್ಲೆಕ್ಸಿಬಲ್ ಹಾಗೂ ಸ್ಕೇಲಬಲ್ 5G RAN ನಿಯೋಜನೆಗಳನ್ನು ಸಕ್ರಿಯಗೊಳಿಸಲು ರಿಲಯನ್ಸ್ ಜಿಯೋ ಜೊತೆಗಿನ ಪ್ರಯತ್ನಗಳನ್ನು ವಿಸ್ತರಿಸುವುದನ್ನು ನಾವು ಎದುರು ನೋಡುತ್ತೇವೆ. ಆಪರೇಟರ್‌ಗಳು ಮತ್ತು ಉದ್ಯಮದ ವರ್ಟಿ‌ಕಲ್‌ಗಳು 5G ನೆಟ್‌ವರ್ಕ್ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ಬೇಕಾದಾಗ ಬೇಕಾದಲ್ಲಿ ತ್ವರಿತ ಮತ್ತು ಸುಲಭವಾಗಿ ಅಳವಡಿಸಿಕೊಳ್ಳುವಲ್ಲಿ ಈ ರೀತಿಯ ಇಕೋಸಿಸ್ಟಮ್ ಸಹಯೋಗಗಳು ನಿರ್ಣಾಯಕ ಪಾತ್ರ ವಹಿಸುತ್ತವೆ." ಎಂದು ಹೇಳಿದ್ದಾರೆ.

ಕ್ವಾಲ್‌ಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ಮತ್ತು ಕ್ವಾಲ್‌ಕಾಮ್ ಇಂಡಿಯಾದ ಅಧ್ಯಕ್ಷ ರಾಜೇನ್ ವಾಗಾಡಿಯಾ, "5Gಗಾಗಿ ನಮ್ಮ ಏಕೀಕೃತ ದೂರದೃಷ್ಟಿಯನ್ನು ಮುಂದುವರೆಸಲು ಹಾಗೂ ಭಾರತದ ಡಿಜಿಟಲ್ ರೂಪಾಂತರವನ್ನು ಬೆಂಬಲಿಸಲು ರಿಲಯನ್ಸ್ ಜಿಯೋ ಜೊತೆಗಿನ ನಮ್ಮ ದೀರ್ಘಕಾಲದ ಸಂಬಂಧದಲ್ಲಿ ಹೊಸ ಹಂತವನ್ನು ಪ್ರವೇಶಿಸಲು ನಾವು ಸಂತೋಷಪಡುತ್ತೇವೆ. ಭಾರತದಾದ್ಯಂತ ವಿಶ್ವಾಸಾರ್ಹ, ಸದೃಢ ಮತ್ತು ಶಕ್ತಿಯುತ ಮೊಬೈಲ್ ಅನುಭವಗಳ ಅಗತ್ಯ ಹೆಚ್ಚಾದಂತೆ, ಉತ್ಪಾದನೆ, ಆರೋಗ್ಯ ರಕ್ಷಣೆ ಮತ್ತು ರೀಟೇಲ್‌ನಂತಹ ಉದ್ಯಮಗಳು ಮತ್ತು ಬಳಕೆದಾರರಿಂದ 5G ಸೇವೆಗಳಿಗಾಗಿ ಬೇಡಿಕೆಯ ಹೊಸ ಅಲೆಯನ್ನು ನಾವು ನಿರೀಕ್ಷಿಸುತ್ತೇವೆ. ತನ್ನ ಚಂದಾದಾರರಿಗೆ ಸುಲಭ ಬೆಲೆಯ ಮತ್ತು ವ್ಯಾಪಕವಾದ 4 ಜಿ ನೆಟ್‌ವರ್ಕ್ ವ್ಯಾಪ್ತಿಯನ್ನು ತಲುಪಿಸುವಲ್ಲಿ ಗೇಮ್ ಚೇಂಜರ್ ಎಂದು ಹೆಸರಾಗಿರುವ ಜಿಯೋ ಜೊತೆಗೆ ಭಾರತೀಯ ಗ್ರಾಹಕರಿಗೆ ಮುಂದುವರೆದ 5G ಮೂಲಸೌಕರ್ಯ ಮತ್ತು ಸೇವೆಗಳನ್ನು ಪರಿಚಯಿಸುವ ಪ್ರಯಾಣದಲ್ಲಿ ನಿಕಟವಾಗಿ ಕೆಲಸ ಮಾಡುವುದನ್ನು ನಾವು ಎದುರು ನೋಡುತ್ತೇವೆ." ಎಂದು ಹೇಳಿದ್ದಾರೆ.

ಭಾರತವು ಮೊಬೈಲ್ ಬ್ರಾಡ್‌ಬ್ಯಾಂಡ್‌ನ ವಿಶ್ವದ ಅತಿದೊಡ್ಡ ಗ್ರಾಹಕರ ಸಾಲಿಗೆ ಸೇರುವಂತೆ ಪರಿವರ್ತನೆಯಾಗುವಲ್ಲಿ ಜಿಯೋದ ಹೊಸ ಕಲ್ಪನೆಗಳು ಪ್ರಮುಖ ಪಾತ್ರ ವಹಿಸಿವೆ. ಒಟ್ಟುಗೂಡಿಲ್ಲದ ಮತ್ತು ವರ್ಚುವಲೈಸ್ಡ್ 5GNR ಪರಿಹಾರಗಳೊಂದಿಗೆ, ಕ್ಯಾರಿಯರ್-ಗ್ರೇಡ್ ಸಾಫ್ಟ್‌ವೇರ್-ಆಧಾರಿತ RAN ಪರಿಹಾರಗಳ ಪರಿಸರ ವ್ಯವಸ್ಥೆಯನ್ನು ಜಿಯೋ ಅಭಿವೃದ್ಧಿಪಡಿಸುತ್ತಿದ್ದು, 5G ಸೇವೆಗಳು ಮತ್ತು ಅನುಭವಗಳನ್ನು ಭಾರತದಾದ್ಯಂತ ಮತ್ತು ಭಾರತದ ಹೊರಗೂ ಸಶಕ್ತಗೊಳಿಸಲು ಸಾಧ್ಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಕ್ವಾಲ್‌ಕಾಮ್ 5G RAN ಪ್ಲಾಟ್‌ಫಾರ್ಮ್‌ಗಳನ್ನು ಫ್ಲೆಕ್ಸಿಬಲ್, ವರ್ಚುವಲೈಸ್ಡ್, ಸ್ಕೇಲಬಲ್ ಮತ್ತು ಇಂಟರ್‌ಆಪರಬಲ್ ಸೆಲ್ಯುಲರ್ ಜಾಲದ ಮೂಲಸೌಕರ್ಯಗಳಿಗೆ ತಳಹದಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಬೃಹತ್ MIMO ಹೊಂದಿರುವ ಮ್ಯಾಕ್ರೋ ಬೇಸ್ ಸ್ಟೇಷನ್‌ಗಳಿಂದ ಪ್ರಾರಂಭಿಸಿ ಸಣ್ಣ ಸೆಲ್‌ಗಳವರೆಗಿನ ವ್ಯಾಪಕ ಶ್ರೇಣಿಯ ಮೂಲಸೌಕರ್ಯ ವಿಭಾಗಗಳಿಗೆ ಈ ಪ್ಲಾಟ್‌ಫಾರ್ಮ್‌ಗಳು ಸ್ಕೇಲಬಲ್ ಬೆಂಬಲವನ್ನು ನೀಡುತ್ತವೆ, ಮತ್ತು ಸಬ್-6 GHz ಹಾಗೂ mmWave ಸ್ಪೆಕ್ಟ್ರಂ‌ನಲ್ಲಿನ ಎಲ್ಲ ಪ್ರಮುಖ ಫ್ರೀಕ್ವೆನ್ಸಿ ಬ್ಯಾಂಡ್‌ಗಳನ್ನೂ ಬೆಂಬಲಿಸುತ್ತವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.