ನವದೆಹಲಿ: ಮೂಲಸೌಕರ್ಯಗಳ ಅಭಿವೃದ್ಧಿಯನ್ನು ರಾಜಕೀಯಕ್ಕಿಂತ ಮೇಲಿರಿಸಬೇಕು. ಮೂಲಸೌಕರ್ಯಗಳ ಬಗ್ಗೆ ರಾಜಕೀಯ ಪಕ್ಷಗಳ ನಡುವೆ ಸ್ಪರ್ಧೆ ನಡೆಯಬೇಕಾದರೆ ಅದು ಗುಣಮಟ್ಟ, ವೇಗ ಮತ್ತು ಪ್ರಮಾಣಿಕೃತವಾಗಿ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಇಡಿಎಫ್‌ಸಿ) ಮತ್ತು ಆಪರೇಷನ್ ಕಂಟ್ರೋಲ್ ಸೆಂಟರ್ನ (ಒಸಿಸಿ) 351 ಕಿ.ಮೀ ಹೊಸ ಭೌಪುರ್ - ನ್ಯೂ ಖುರ್ಜಾ ವಿಭಾಗವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹಿಂದಿನ ಅನುಭವಗಳು ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಮೂಲಸೌಕರ್ಯ ಯೋಜನೆಗಳನ್ನು ರಾಜಕೀಯದಿಂದ ಹೊರಗಿಡಬೇಕು. ದೇಶದ ಮೂಲಸೌಕರ್ಯವು ಯಾವುದೇ ಪಕ್ಷದ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿಲ್ಲ. ಬರೀ ಐದು ವರ್ಷಗಳ ಕಾಲ ಮಾತ್ರವಲ್ಲ, ದೇಶದ ಜನರಿಗೆ ಅನುಕೂಲವಾಗುವ ಉದ್ದೇಶ ಇರಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಮೋದಿ ಗತ್ತು, ಸೀತಾರಾಮನ್ ತಾಕತ್ತು: ಪೇಟೆಗೆ ಬಂತು ಲಕ್ಷಾಂತರ ಕೋಟಿ ರೂ. ಸಂಪತ್ತು
ಯಾವುದೇ ರಾಜಕೀಯ ಪಕ್ಷವು ಈ ವಿಷಯದ ಬಗ್ಗೆ ಸ್ಪರ್ಧೆಯನ್ನು ಮಾಡಬೇಕಾದರೆ, ಅದು ಮೂಲಸೌಕರ್ಯದ ಗುಣಮಟ್ಟ, ವೇಗ ಮತ್ತು ಪ್ರಮಾಣಿಕೃತವಾಗಿ ಇರಬೇಕು ಎಂದು ಹೇಳಿದರು.
ಹಲವು ಸಂದರ್ಭಗಳಲ್ಲಿ ಪ್ರತಿಭಟನೆ ಅಥವಾ ಆಂದೋಲನಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಈ ಮೂಲ ಸೌಕರ್ಯವು ಯಾವುದೇ ರಾಜಕೀಯ ಪಕ್ಷ ಅಥವಾ ಯಾರಿಗೂ ಸೇರಿಲ್ಲ. ಆದರೆ, ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಇದನ್ನು ಮರೆತಿಲ್ಲ ಎಂದರು.
ದೇಶದ ಜೀವನಾಡಿಯಾಗಿ ರೈಲ್ವೆಯ ಪಾತ್ರವನ್ನು ಒತ್ತಿ ಹೇಳಿದ ಅವರು, ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ದೇಶಾದ್ಯಂತ ಆಹಾರ, ಅಗತ್ಯ ಸರಕು ಮತ್ತು ಇತರ ಸರಕುಗಳನ್ನು ಸಾಗಿಸಲು ಇದು ಸಹಾಯ ಮಾಡಿದೆ. ರೈಲ್ವೆ ಜನರಿಗೆ ನೀಡಿದ ಸಹಾಯವನ್ನು ದೇಶವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಇದು ಲಕ್ಷಾಂತರ ಜನರನ್ನು ತಮ್ಮ ಮನೆಗಳಿಗೆ ಕರೆದೊಯ್ಯಿತು. ಹಲವು ದಿನಗಳವರೆಗೆ ಒಂದು ಲಕ್ಷಕ್ಕೂ ಹೆಚ್ಚು ಗಂಟೆಗಳ ಉದ್ಯೋಗ ಒದಗಿಸಿತು ಎಂದು ಹೇಳಿದರು.