ETV Bharat / business

ಭಾರತದ ವಿದೇಶಿ ವಿನಿಮಯ ಸಂಗ್ರಹ 4.344 ಬಿಲಿಯನ್ ಡಾಲರ್​ ಹೆಚ್ಚಳ

ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಸ್ವತ್ತುಗಳು (ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಟ್ಸ್​ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗೆ ದೇಶದ ಮೀಸಲು ಸ್ಥಾನ ಒಳಗೊಂಡಿದೆ.

India's forex
India's forex
author img

By

Published : Apr 17, 2021, 12:05 PM IST

ಮುಂಬೈ: ಏಪ್ರಿಲ್ 9ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 4.344 ಬಿಲಿಯನ್ ಡಾಲರ್ ಏರಿಕೆಯಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸಾಪ್ತಾಹಿಕ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 2ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ನಿಧಿ 576.869 ಬಿಲಿಯನ್‌ ಡಾಲರ್​ನಿಂದ 581.213 ಬಿಲಿಯನ್‌ ಡಾಲರ್​ಗೆಗೆ ತಲುಪಿದೆ.

ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಸ್ವತ್ತುಗಳು (ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಟ್ಸ್​ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗೆ ದೇಶದ ಮೀಸಲು ಸ್ಥಾನ ಒಳಗೊಂಡಿದೆ.

ಸಾಪ್ತಾಹಿಕ ಆಧಾರದ ಮೇಲೆ ವಿದೇಶಿ ವಿನಿಮಯ ನಿಕ್ಷೇಪಗಳ ಅತಿದೊಡ್ಡ ಘಟಕವಾದ ಎಫ್‌ಸಿಎಗಳು 3.017 ಬಿಲಿಯನ್‌ ಡಾಲರ್​ನಿಂದ 539.455 ಬಿಲಿಯನ್‌ ಡಾಲರ್​ಗೆ ಏರಿದೆ. ದೇಶದ ಚಿನ್ನದ ಸಂಗ್ರಹ ಮೌಲ್ಯವು 1.297 ಬಿಲಿಯನ್ ಡಾಲರ್​ ಗಳಿಸಿ 35.320 ಬಿಲಿಯನ್ ಡಾಲರ್‌ಗೆ ತಲುಪಿದೆ.

ಎಸ್‌ಡಿಆರ್ ಮೌಲ್ಯವು 6 ಮಿಲಿಯನ್‌ ಡಾಲರ್​ ಹೆಚ್ಚಳವಾಗಿ 1.492 ಬಿಲಿಯನ್ ಡಾಲರ್​ನಷ್ಟಾಗಿದೆ. ಐಎಂಎಫ್​​ನೊಂದಿಗೆ ದೇಶದ ಮೀಸಲು ಸ್ಥಾನವು 24 ಮಿಲಿಯನ್ ಡಾಲರ್​ ಹೆಚ್ಚಳದಿಂದ 4.946 ಬಿಲಿಯನ್​ ಡಾಲರ್​ಗೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.