ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳು, ರತ್ನಗಳು ಮತ್ತು ಆಭರಣ ಮತ್ತು ಚರ್ಮದಂತಹ ಕ್ಷೇತ್ರಗಳ ಸಾಗಣೆ ಕುಸಿತದಿಂದಾಗಿ ಅಕ್ಟೋಬರ್‌ನಲ್ಲಿ ಭಾರತದ ರಫ್ತು ವಹಿವಾಟು ಶೇ 5.4ರಷ್ಟು ಕುಸಿದು 24.82 ಬಿಲಿಯನ್ ಡಾಲರ್‌ಗೆ ತಲುಪಿದೆ.
ಮಂಗಳವಾರ ಬಿಡುಗಡೆಯಾದ ಸರ್ಕಾರದ ಅಂಕಿ ಅಂಶಗಳ ಪ್ರಕಾರ, 2020-21ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ರಫ್ತು ವಹಿವಾಟು 150.07 ಬಿಲಿಯನ್ ಡಾಲರ್‌ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 19.05ರಷ್ಟು ಕುಸಿತ ಕಂಡಿತ್ತು.
2020ರ ಅಕ್ಟೋಬರ್‌ನಲ್ಲಿ ಭಾರತದ ಸರಕು ರಫ್ತು ಪ್ರಮಾಣ 24.82 ಬಿಲಿಯನ್ ಡಾಲರ್ ಆಗಿದ್ದು, 2019ರ ಅಕ್ಟೋಬರ್‌ನಲ್ಲಿ 26.23 ಬಿಲಿಯನ್ ಡಾಲರ್‌ಗೆ ಹೋಲಿಸಿದರೆ ಇದು ಶೇ 5.4ರಷ್ಟು ಕುಸಿತ ತೋರಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ಟೋಬರ್‌ನಲ್ಲಿ ಆಮದು ಶೇ 11.56ರಷ್ಟು ಕುಸಿದು 33.6 ಬಿಲಿಯನ್ ಡಾಲರ್‌ಗೆ ತಲುಪಿದೆ. 2020ರ ಅಕ್ಟೋಬರ್‌ನಲ್ಲಿ ಭಾರತವು ನಿವ್ವಳ ಆಮದು 8.78 ಶತಕೋಟಿ ಡಾಲರ್‌ಗಳಷ್ಟು ವ್ಯಾಪಾರ ಕೊರತೆಯಾಗಿದೆ. 11.76 ಬಿಲಿಯನ್ ಡಾಲರ್‌ಗಳ ವ್ಯಾಪಾರ ಕೊರತೆಗೆ ಹೋಲಿಸಿದರೆ, ಇದು 25.34ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.