ನವದೆಹಲಿ: ಪುಲ್ವಾಮಾ ಪ್ರತೀಕಾರಕ್ಕೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿನ ಬಾಲಾಕೋಟ್ ಭಯೋತ್ಪಾದಕರ ತರಬೇತಿ ಶಿಬಿರವನ್ನು ಧ್ವಂಸ ಮಾಡಿದ ಇಸ್ರೇಲ್ ನಿರ್ಮಿತ 'ವಿಧ್ವಂಸಕ ಬಂಕರ್ ಬಸ್ಟರ್ ಸ್ಪೈಸ್ 2000' ಸಿಡಿ ತಲೆಯ ಹೊಸ ಅವತರಣಿಕೆಯ ಬಾಂಬ್ಗಳನ್ನು ಭಾರತೀಯ ವಾಯುಪಡೆ (ಐಎಎಫ್) ಸ್ವೀಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಅವತರಣಿಕೆಯ ಬಂಕರ್ ಬಸ್ಟರ್ ಸ್ಪೈಸ್- 2000 ಸಿಡಿ ತಲೆಗಳನ್ನು ಇಸ್ರೇಲ್ ಪ್ರಥಮ ಹಂತದಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ. ಐಎಎಫ್ನ ಕೇಂದ್ರ ಕಚೇರಿಯಾದ ಗ್ವಾಲಿಯರ್ ಕ್ಯಾಂಪ್ ಇವುಗಳನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರವು ಸೇನೆಯ ಮೂರು ದಳಗಳಿಗೂ ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ತಲಾ 250 ಕೋಟಿ ರೂಪಾಯಿ ಮೀಸಲಿರಿಸಿ ಇಸ್ರೇಲ್ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಮೂಲಗಳ ಪ್ರಕಾರ ವಾಯುಸೇನೆಯು ಸ್ಪೈಸ್- 2000 ಮಾರ್ಕ್ 84 ಸರಣಿಯ ಬಾಂಬ್ಗಳನ್ನು ಖರೀದಿಸಿದೆ.
ಸ್ಪೈಸ್ 2000 ವಿಶೇಷತೆ:
SPICE: ಸ್ಮಾರ್ಟ್, ಪ್ರಿಸೈಜ್, ಇಂಪ್ಯಾಕ್ಟ್, ಕಾಸ್ಟ್ ಎಫೆಕ್ಟಿವ್ ಅಂದರೆ ಅತ್ಯಾಧುನಿಕ, ನಿಖರ, ಪರಿಣಾಮಕಾರಿ ಮತ್ತು ಅಗ್ಗದ ಬಾಂಬ್ ಎಂದರ್ಥ. ಅತ್ಯಂತ ನಿಖರವಾದ ಗುರಿಯೊಂದಿಗೆ ದಾಳಿ ನಡೆಸಿ ವೈರಿಪಡೆಯ ಶಿಬಿರವನ್ನು ನಾಶ ಮಾಡುತ್ತದೆ. ಇಸ್ರೇಲ್ನ ರಾಫೇಲ್ ಅಡ್ವಾನ್ಸಡ್ ಡಿಫೆನ್ಸ್ ಸಿಸ್ಟಮ್ ಕಂಪನಿ ತಯಾರಿಸಿದೆ.
ಕಾರ್ಯ ನಿರ್ವಹಣೆ ಹೇಗೆ:
ಫೈಲೆಟ್ ಒಮ್ಮೆ ಇದನ್ನು ಕಾರ್ಯಾಚರಣೆಗೆ ಲಾಂಚ್ ಮಾಡಿದರೆ ಅದು ಸ್ವಯಂ ಆಗಿ ತನ್ನ ಜಿಪಿಎಸ್ ಬಳಸಿಕೊಂಡು ನ್ಯಾವಿಗೇಟ್ ಮಾಡಿಕೊಳ್ಳುತ್ತದೆ. ಉದ್ದೇಶಿತ ಗುರಿ ಒಂದಿಂಚೂ ತಪ್ಪದಂತೆ ಅಪ್ಪಳಿಸಿ ನಾಶಪಡಿಸುತ್ತದೆ. ಹೋಮಿಂಗ್ ಸ್ಟೇಜ್ನಲ್ಲಿ ಸ್ಪೈಸ್ ಸೀನ್ ಮ್ಯಾಚಿಂಗ್ ಬಳಸಿಕೊಂಡು ಗುಡಿಯನ್ನು ಪತ್ತೆಹಚ್ಚುತ್ತದೆ ಜೊತೆಗೆ ಟ್ರ್ಯಾಕರ್ ಬಳಸಿಕೊಂಡು ಅದರ ಮೇಲೆ ಅಪ್ಪಳಿಸುತ್ತದೆ.