ನವದೆಹಲಿ: ಸ್ಟಾರ್ಟ್ಅಪ್ ಪ್ಲಾಟ್ ಫಾರ್ಮ್ಗಳು, ಕಂಪನಿಗಳು, ವೈಯಕ್ತಿಕ ಆದಾಯದಾರರು ಸೇರಿದಂತೆ ಸುಮಾರು 1.72 ಲಕ್ಷ ತೆರಿಗೆದಾರರಿಗೆ ಬಾಕಿ ಉಳಿದಿರುವ ತೆರಿಗೆ ಬೇಡಿಕೆ ಮತ್ತು ತೆರಿಗೆ ಮರುಪಾವತಿಯ ಮಾಹಿತಿ ಹಂಚಿಕೊಳ್ಳುವಂತೆ ಆದಾಯ ತೆರಿಗೆ ಇಲಾಖೆ ಇ-ಮೇಲ್ ಕಳುಹಿಸಿ ಮನವಿ ಮಾಡಿದೆ.
ಕೋವಿಡ್- 19 ನಂತಹ ಸಂಕಷ್ಟದಲ್ಲಿ ಬಾಕಿ ಉಳಿಸಿಕೊಂಡಿರುವ ಮರುಪಾವತಿ ಪ್ರಕರಣಗಳನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಏಪ್ರಿಲ್ 8ರಿಂದ ತ್ವರಿತವಾಗಿ ಪತ್ತೆಹಚ್ಚಲು ಮುಂದಾಗಿದೆ.
ವೈಯಕ್ತಿಕ ಆದಾಯದ ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬ (ಎಚ್‌ಯುಎಫ್), ಮಾಲೀಕರು, ಸಂಸ್ಥೆಗಳು, ಸಾಂಸ್ಥಿಕ ಸಂಸ್ಥೆಗಳು, ಸ್ಟಾರ್ಟ್ಅಪ್ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇಗಳು) ಸೇರಿದಂತೆ ಸುಮಾರು 14 ಲಕ್ಷ ಮರುಪಾವತಿಗಳ ಮೂಲಕ ಇಲ್ಲಿಯವರೆಗೆ 9,000 ಕೋಟಿ ರೂ. ಮೊತ್ತ ವರ್ಗಾಯಿಸಲಾಗಿದೆ.
ತೆರಿಗೆ ಮರುಪಾವತಿ ಪಡೆಯಲು ಅರ್ಹತೆ ಇರುವವರು. ಪಾವತಿಸಬೇಕಾದ ಬಾಕಿ ತೆರಿಗೆ ಹೊಂದಿರುವ ಎಲ್ಲರಿಂದಲೂ ಸ್ಪಷ್ಟೀಕರಣ ಕೋರಿದೆ. ತನ್ನ ಇ-ಮೇಲ್ ಅನ್ನು ಕಿರುಕುಳ ಎಂದು ತಪ್ಪಾಗಿ ಪರಿಗಣಿಸಬಾರದು ಎಂದು ಸಿಬಿಡಿಟಿ ಪ್ರಕಟಣೆಯಲ್ಲಿ ಮನವರಿಕೆ ಮಾಡಿದೆ.
ಬಾಕಿ ಇರುವ ಬೇಡಿಕೆಗಳನ್ನು ಪೂರ್ಣಗೊಳಿಸಲು ಅಥವಾ ಐಟಿ ಇಲಾಖೆಗೆ ಹೇಳಲಾದ ಬೇಡಿಕೆಯ ಸ್ಥಿತಿಯ ಬಗ್ಗೆಯೂ ತಿಳಿಸಲು ಇಲಾಖೆಯು ತೆರಿಗೆದಾರರಿಗೆ ಅವಕಾಶ ಒದಗಿಸಿದೆ.
ಬಾಕಿ ಇರುವ ಬೇಡಿಕೆಯ ಪ್ರಮಾಣ ತಿಳಿಸಬೇಕು. ಬೇಡಿಕೆ ಪಾವತಿಗೆ ಈಗಾಗಲೇ ಮಾಡಿದ್ದರೆ, ಅದನ್ನು ಪಾವತಿಸುವ ಬಗ್ಗೆ ಪುರಾವೆಗಳ ಜತೆಗೆ ಪ್ರತಿಕ್ರಿಯಿಸಬಹುದು. ಅದನ್ನು ನವೀಕರಣ ಮಾಡುವ ಮೂಲಕ ಪಾವತಿಸಲಾಗುತ್ತದೆ. ಇತರ ಯಾವುದೇ ಬೇಡಿಕೆಯು ಕ್ರಿಯಾ ಸ್ಥಿತಿಯಲ್ಲಿದ್ದರೇ ಆ ಬಗೆಯೂ ಐಟಿಗೆ ತಿಳಿಸಬಹುದು ಎಂದು ಇಮೇಲ್ನಲ್ಲಿ ವಿವರಿಸಿದೆ.