ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಫೇಸ್ ರಿಕಗ್ನಿಷನ್' (ಮುಖ ಚಹರೆ ಗುರುತಿಸುವಿಕೆ) ಯಂತ್ರವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರದ ದಿಗಿ ಯಾತ್ರಾ ಯೋಜನೆಯ ಭಾಗವಾಗಿ ಪ್ರಯೋಗಾರ್ಥವಾಗಿ ಜುಲೈ 1ರಿಂದ 3ರವರೆಗೆ ಇದನ್ನು ಅಳವಡಿಸಲಾಗಿದೆ. 180 ಪ್ರಯಾಣಿಕರು ಸ್ವಯಂಪ್ರೇರಿತವಾಗಿ 'ಫೇಸ್ ರಿಕಗ್ನಿಷನ್' ಮುಖಾಂತರ ವಿಮಾನ ನಿಲ್ದಾಣ ಪ್ರವೇಶಿಸಲು ಹೆಸರು ನೋಂದಣಿ ಮಾಡಿಸಿದ್ದಾರೆ.
ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ದೇಶಿಯ ವಿಮಾನ ಪ್ರಯಾಣಿಕರ ಪ್ರವೇಶ ದ್ವಾರದ ಗೇಟ್ ನಂ 1 ಮತ್ತು 3ರಲ್ಲಿ ಈ ಯಂತ್ರವನ್ನು ಅಳವಡಿಸಿದ್ದಾರೆ. ಪ್ರವೇಶ ನೋಂದಣಿಗೆ ಪ್ರಕ್ರಿಯೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಅವಕಾಶವಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.