ETV Bharat / business

ಆದಾಯ ತೆರಿಗೆ ಪಾವತಿಸಿದವರಿಗೆ ಸಿಹಿ ಸುದ್ದಿ: ಐಟಿಯಿಂದ 4,250 ಕೋಟಿ ಮರುಪಾವತಿ

ತೆರಿಗೆ ಪಾವತಿದಾರರ ಬಾಕಿ ಹಣವನ್ನು ಕೇಂದ್ರ ನೇರ ತೆರಿಗೆ ಮಂಡಳಿ ಬಿಡುಗಡೆ ಮಾಡಿದ್ದು, ಇದೊಂದೇ ವಾರದಲ್ಲಿ 1.75 ಲಕ್ಷ ಮಂದಿ ತೆರಿಗೆ ಮರುಪಾವತಿ ಹಣವನ್ನು ಪಡೆಯಲಿದ್ದಾರೆ.

income tax
ಆದಾಯ ತೆರಿಗೆ
author img

By

Published : Apr 15, 2020, 8:12 PM IST

ನವದೆಹಲಿ: ಕೋವಿಡ್‌ 19 ಮಹಾಮಾರಿಗೆ ಸಿಲುಕಿರುವ ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ನೇರ ತೆರಿಗೆ ಮಂಡಳಿ (CBDT) ಕೊಂಚ ರಿಲೀಫ್‌ ನೀಡಿದೆ. ತೆರಿಗೆ ಪಾವತಿದಾರರ ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, 5 ಲಕ್ಷದವರೆಗೆ ತೆರಿಗೆ ಮರುಪಾವತಿ ಹಣ ಪಡೆಯುವ ತೆರಿಗೆದಾರರಿಗೆ ಕೊರೊನಾ ಸಂಕಷ್ಟದ ಸಮಯದಲ್ಲಿ ವರದಾನವಾಗಲಿದೆ.

ಏಪ್ರಿಲ್‌ 14ರ ವೇಳೆಗೆ ಸಿಬಿಡಿಟಿ ಈಗಾಗಲೇ 10.2 ಲಕ್ಷ ತೆರಿಗೆದಾರರ 4 ಸಾವಿರದ 250 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಿದೆ. ಇದೊಂದೇ ವಾರದಲ್ಲಿ 1.75 ಲಕ್ಷ ಮಂದಿ ತೆರಿಗೆಯ ಮರುಪಾವತಿ ಹಣವನ್ನು ಪಡೆಯಲಿದ್ದಾರೆ. ಮುಂದಿನ 5-7 ವ್ಯವಹಾರದ ದಿನಗಳಲ್ಲಿ ಮರುಪಾವತಿಯ ಹಣ ನೇರವಾಗಿ ತೆರಿಗೆದಾರರ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ ಎಂದು ಸಿಬಿಡಿಟಿ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದೆ.

ತೆರಿಗೆ ಪಾವತಿ ಮಾಡಿದವರೊಂದಿಗೆ ಸಮನ್ವಯತೆ ಸಾಧಿಸುವ ಸಂಬಂಧ ಸುಮಾರು 1.74 ಲಕ್ಷ ಮಂದಿಗೆ ಇ-ಮೇಲ್‌ ಸಂದೇಶ ಕಳುಹಿಸಲಾಗಿದ್ದು, ಇದಕ್ಕೆ 7 ದಿನಗಳೊಳಗಾಗಿ ಉತ್ತರಿಸುವಂತೆ ಸೂಚಿಸಲಾಗಿದೆ. ಇವರಿಗೂ ಹಂತ ಹಂತವಾಗಿ ತೆರಿಗೆ ಮರುಪಾವತಿಯ ಹಣವನ್ನು ನೀಡುವುದಾಗಿ ಸಿಬಿಡಿಬಿ ತಿಳಿಸಿದೆ. ಬ್ಯಾಂಕ್‌ ಖಾತ್ರಿ, ಹೊಂದಾಣಿಕೆಯಾಗದಂತಹ ಸಮಸ್ಯೆಗಳು ಇದ್ದರೆ ಮರುಪಾವತಿಯ ಹಣ ಪಡೆಯುವ ಮುನ್ನವೇ ಸರಿ ಪಡಿಸಿಕೊಳ್ಳುವಂತೆ ಸಂದೇಶದಲ್ಲೇ ಎಚ್ಚರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.