ನವದೆಹಲಿ: ದೇಶದಲ್ಲಿ ಬುಧವಾರ ಬಂಗಾರ ಮತ್ತು ಬೆಳ್ಳಿ ದರ ಮತ್ತೆ ಏರಿಕೆಯಾಗಿದೆ. ಪ್ರತಿ 10 ಗ್ರಾಂ ಚಿನ್ನಕ್ಕೆ 328 ರೂ. ಮತ್ತು ಒಂದು ಕೆಜಿ ಬೆಳ್ಳಿಗೆ 965 ರೂ. ಹೆಚ್ಚಳವಾಗಿದೆ.
ಚಿನ್ನದ ಬೆಲೆಯಲ್ಲಿ 328 ರೂ. ಏರಿಕೆಯಿಂದ ಬುಧವಾರ 10 ಗ್ರಾಂ ಚಿನ್ನವು 54,552 ರೂ.ಗೆ ಬಂದು ತಲುಪಿದೆ. ಅದೇ ರೀತಿಯಾಗಿ ಬೆಳ್ಳಿ ದರದಲ್ಲಿ 965 ರೂ. ಹೆಚ್ಚಳವಾಗಿದ್ದರಿಂದ ಒಂದು ಕೆಜಿ ಬೆಳ್ಳಿಗೆ 74,350 ರೂ. ಆಗಿದೆ.
ದೇಶಿಯವಾಗಿ ಚಿನ್ನ ದರದಲ್ಲಿ ಶೇ.0.6ರಷ್ಟು ಏರಿಕೆಯಾಗಿದ್ದರೆ, ಜಾಗತಿಕವಾಗಿ ಶೇ.0.54ರಷ್ಟು ಹೆಚ್ಚಳ ಕಂಡಿದೆ. ಬೆಳ್ಳಿ ದರದಲ್ಲೂ ದೇಶಿಯವಾಗಿ ಶೇ.1.35ರಷ್ಟು ಹೆಚ್ಚಳವಾಗಿದ್ದು, ಜಾಗತಿಕವಾಗಿ ಶೇ.0.74ರಷ್ಟು ಏರಿಕೆಯಾಗಿದೆ.
ಇತ್ತ ಚಿನ್ನ, ಬೆಳ್ಳಿ ದರದಂತೆ ಕಚ್ಚಾ ತೈಲ ಬೆಲೆಯೂ ಗಗನಕ್ಕೇರಿದೆ. ಪ್ರತಿ ಬ್ಯಾರೆಲ್ಗೆ ಶೇ.1.88ರಷ್ಟು ಅಂದರೆ 177 ರೂ. ಅಧಿಕವಾಗಿದ್ದು, ಇದರ ದರ 9,615 ರೂ. ಬಂದು ತಲುಪಿದೆ. ಜಾಗತಿಕವಾಗಿ ಪ್ರತಿ ಬ್ಯಾರೆಲ್ಗೆ ಶೇ.1.18ರಷ್ಟು ಕಚ್ಚಾ ತೈಲ ದರ ಏರಿಕೆಯಾಗಿದೆ.
ಷೇರು ಮಾರುಕಟ್ಟೆ ಚೇತರಿಕೆ: ದೇಶದ ಪೇರು ಮಾರುಕಟ್ಟೆಯಲ್ಲಿ ಬುಧವಾರ ಚೇತರಿಕೆ ಕಂಡಿದೆ. ದಿನದ ಅಂತ್ಯಕ್ಕೆ 1,223.24 ಅಂದರೆ ಶೇ.2.29 ಅಂಕಗಳ ಏರಿಕೆಯಾಗುವ ಮೂಲಕ 54,647.33 ಬಂದು ತಲುಪಿದೆ. ಅದೇ ರೀತಿಯಾಗಿ ನಿಫ್ಟಿ ಸಹ 331.90 ಅಂಕಗಳ ಜಿಗಿತ ಕಂಡು 16,345.35 ಅಂಕಗಳಿಗೆ ಮುಕ್ತಾಯವಾಗಿದೆ.