ETV Bharat / business

ಸವಾರರ ಜೇಬಿಗೆ ಬರೆ:  2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ...! - ಪೆಟ್ರೋಲ್ ಮತ್ತು ಡೀಸೆಲ್

ಜೂನ್​ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 5 ರೂ. ವರೆಗೂ ಏರಿಕೆಯಾಗಬಹುದು ಎಂದು ಈ ಹಿಂದೆ ಹೇಳಲಾಗಿತ್ತು. ಇದೀಗ ಎರಡು ದಿನಗಳಲ್ಲೇ ಲೀಟರ್‌ಗೆ 1.20 ರೂ. ಏರಿಕೆಯಾಗಿದೆ.

Fuel prices rise on 2nd consecutive day
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ
author img

By

Published : Jun 8, 2020, 10:40 AM IST

ನವದೆಹಲಿ: ಜಾಗತಿಕ ಉತ್ಪನ್ನಗಳ ಬೆಲೆಗಳಲ್ಲಿ ಏರಿಕೆಯಾದ ಪರಿಣಾಮ ಸತತ ಎರಡನೇ ದಿನವೂ ತೈಲ ಕಂಪನಿಗಳು ನಿನ್ನೆಯಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 60 ಪೈಸೆಯಷ್ಟು ಹೆಚ್ಚಿಸಿವೆ.

80 ದಿನಗಳ ಲಾಕ್​​ಡೌನ್​ ಬಳಿಕ ನಿನ್ನೆ ಮೊದಲ ಬಾರಿಗೆ ಇಂಧನ ಬೆಲೆಯಲ್ಲಿ ಹೆಚ್ಚಳವಾಗಿತ್ತು. ಇಂದೂ ಕೂಡ ಲೀಟರ್‌ಗೆ 60 ಪೈಸೆ ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಇಂದು ಪೆಟ್ರೋಲ್ ಬೆಲೆ 72.46 ರೂ.ಗೆ ಹಾಗೂ ಡೀಸೆಲ್ ಬೆಲೆ 70.59 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ ನಿನ್ನೆ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ 71.86 ರೂ ಹಾಗೂ 69.99 ರೂ ಇತ್ತು. ದೆಹಲಿಯೊಂದಿಗೆ ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್​ಗೂ ಇದು ಅನ್ವಯವಾಗಲಿದೆ.

ಜೂನ್​ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 5 ರೂ. ವರೆಗೂ ಏರಿಕೆಯಾಗಬಹುದು ಎಂದು ಈ ಹಿಂದೆ ಹೇಳಲಾಗಿತ್ತು. ಇದೀಗ ಎರಡು ದಿನಗಳಲ್ಲೇ ಲೀಟರ್‌ಗೆ 1.20 ರೂ. ಏರಿಕೆಯಾದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.