ವಾಂಷಿಗ್ಟನ್: ಅಮೆರಿಕದ ನಿರ್ಬಂಧಗಳ ಬೆದರಿಕೆ ಹೊರತಾಗಿಯೂ ರಷ್ಯಾದಿಂದ ರಕ್ಷಣಾ ವ್ಯವಸ್ಥೆಯ ಭಾಗವಾಗಿ ಕ್ಷಿಪಣಿಗಳನ್ನು ಖರೀದಿಸುವ ತನ್ನ ಹಕ್ಕನ್ನು ಭಾರತ ಸಮರ್ಥಿಸಿಕೊಂಡಿದೆ.
ರಷ್ಯಾದಿಂದ ಭಾರತ ಎಸ್ - 400 ಟ್ರಯಂಫ್ ಕ್ಷಿಪಣಿಯನ್ನು ಖರೀದಿಸುವುದರ ಬಗ್ಗೆ ಅಮೆರಿಕದ ಕಳವಳ ಕುರಿತು ವಾಷಿಂಗ್ಟನ್‌ಗೆ ಭೇಟಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಚರ್ಚಿಸಿದರು. ಆದರೆ, ಎಸ್-400 ಕ್ಷಿಪಣಿ ಖರೀದಿಯ ಭವಿಷ್ಯದ ನಿರ್ಧಾರ ತಿಳಿಸಲು ನಿರಾಕರಿಸಿದರು.
ನಾವು ಯಾವಾಗಲೂ ಖರೀದಿಸುತ್ತಿರುವುದು ಮಿಲಿಟರಿ ಸಲಕರಣೆಗಳ ಮೂಲಗಳನ್ನು. ಇದು ನಮ್ಮ ಸಾರ್ವಭೌಮ ಹಕ್ಕೆಂದು ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರೊಂದಿಗಿನ ಸಭೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ ಜೈಶಂಕರ್, ಏನು ಖರೀದಿಸಬೇಕೆಂದು ಯಾವುದೇ ದೇಶಗಳು ಹೇಳುವುದು ನಮಗೆ ಇಷ್ಟವಿಲ್ಲ. ಅಮೆರಿಕದಿಂದ ಖರೀದಿಸಿಬಾರದು ಅಥವಾ ರಷ್ಯಾದಿಂದ ಖರೀಸಿದಬಾರದು ಅಥವಾ ಬೇರೆ ಇತರ ರಾಷ್ಟ್ರಗಳಿಂದಲೂ ಖರೀದಿಸಬಾರದು ಎಂದು ಹೇಳುವುದನ್ನು ನಾವು ಇಷ್ಟಪಡುವುದಿಲ್ಲ ಎಂದರು.
ಖರೀದಿಯ ಆಯ್ಕೆಯ ಸ್ವಾತಂತ್ರ್ಯ ನಮ್ಮದು ಮತ್ತು ಅದನ್ನು ಗುರುತಿಸುವುದು ಪ್ರತಿಯೊಬ್ಬರ ಹಿತಾಸಕ್ತಿಗೆ ಅನುಗುಣವಾಗಿರುತ್ತದೆ ಎಂಬುದನ್ನು ನಾವು ಭಾವಿಸುತ್ತೇವೆ ಎಂದು ಖಡಕ್ ಆಗೇ ಹೇಳುವ ಮೂಲಕ ಅಮೆರಿಕ ನೆಲದಲ್ಲಿ ನಿಂತು ಅಮೆರಿಕಕ್ಕೆ ಟಾಂಗ್ ನೀಡಿದ್ದಾರೆ.