ನವದೆಹಲಿ : ಬ್ಯಾಂಕ್ ಆಫ್ ಬರೋಡಾ ಪ್ರತಿ ತಿಂಗಳ ಬ್ಯಾಂಕ್ ಖಾತೆ ಉಚಿತ ನಗದು ಠೇವಣಿ ವಹಿವಾಟು ಸಂಬಂಧ ಮಾಡಿದ ಬದಲಾವಣೆಗಳನ್ನು ಹಿಂಪಡೆಯಲು ನಿರ್ಧರಿಸಿತ್ತು. ಈ ಬಗ್ಗೆ ಹಣಕಾಸು ಸಚಿವಾಲಯ ತನ್ನ ಸ್ಪಷ್ಟನೆಯನ್ನು ನೀಡಿ, 'ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್ಗಳಿಂದ ಸೇವಾ ಶುಲ್ಕ ಹೆಚ್ಚಳವಾಗಿಲ್ಲ' ಎಂದಿದೆ.
2020ರ ನವೆಂಬರ್ 1ರಿಂದ ಬ್ಯಾಂಕ್ ಆಫ್ ಬರೋಡಾ ಕೆಲವು ಬದಲಾವಣೆಗಳನ್ನು ಮಾಡಿದ್ದು, ತಿಂಗಳಿಗೆ ಉಚಿತ ನಗದು ಠೇವಣಿ ಮತ್ತು ಹಿಂಪಡೆಯುವಿಕೆಯ ಸಂಖ್ಯೆ ಸಂಬಂಧ ಹಣಕಾಸು ಸಚಿವಾಲಯ, ತನ್ನ ಸ್ಪಷ್ಟನೆಯನ್ನು ಪ್ರಕಟಣೆಯಲ್ಲಿ ತಿಳಿಸಿದೆ.
ಉಚಿತ ನಗದು ಠೇವಣಿ ಮತ್ತು ಹಿಂಪಡೆಯುವಿಕೆಯ ಸಂಖ್ಯೆಯನ್ನು ತಿಂಗಳಿಗೆ ಐದರಿಂದ ಮೂರಕ್ಕೆ ಇಳಿಸಲಾಗಿದೆ. ಈ ಉಚಿತ ವಹಿವಾಟುಗಳಿಗಿಂತ ಹೆಚ್ಚಿನ ವಹಿವಾಟಿನ ಶುಲ್ಕಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಹೇಳಿದೆ.
ಪ್ರಸ್ತುತ ಕೋವಿಡ್ ಸಂಬಂಧಿತ ಪರಿಸ್ಥಿತಿ ವೇಳೆ ತಾನು ಮಾಡಿದ್ದ ಬದಲಾವಣೆಗಳನ್ನು ಹಿಂಪಡೆಯಲು ಬ್ಯಾಂಕ್ ಆಫ್ ಬರೋಡ ನಿರ್ಧರಿಸಿದೆ ಎಂಬುದನ್ನು ತಿಳಿಸಿದೆ. ಬೇರೆ ಯಾವುದೇ ಪಿಎಸ್‌ಬಿ ಇತ್ತೀಚೆಗೆ ಇಂತಹ ಶುಲ್ಕಗಳನ್ನು ಹೆಚ್ಚಿಸಿಲ್ಲ ಎಂದು ಮಾಹಿತಿ ನೀಡಿದೆ.
ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕ ವಲಯದ ಬ್ಯಾಂಕ್ಗಳು (ಪಿಎಸ್‌ಬಿ) ಸೇರಿದಂತೆ ಎಲ್ಲಾ ಬ್ಯಾಂಕ್ಗಳು ತಮ್ಮ ಸೇವೆಗಳಿಗೆ ನ್ಯಾಯಯುತ, ಪಾರದರ್ಶಕ ಮತ್ತು ತಾರತಮ್ಯರಹಿತವಾಗಿ ಶುಲ್ಕ ವಿಧಿಸಲು ಅನುಮತಿ ನೀಡಿದೆ. ವೆಚ್ಚಗಳ ಆಧಾರದ ಮೇಲೆ ಇತರ ಪಿಎಸ್‌ಬಿಗಳು ಕೋವಿಡ್ ರೋಗದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬ್ಯಾಂಕ್ ಶುಲ್ಕ ಹೆಚ್ಚಿಸಲು ಪ್ರಸ್ತಾಪಿಸಬಾರದು ಎಂದು ಹಣಕಾಸು ಸಚಿವಾಲಯ ಸೂಚಿಸಿದೆ.