ETV Bharat / business

BSNL, MTNL ಕಂಪನಿಗಳಿಗೆ ಕೈ ಎತ್ತಿದ ವಿತ್ತ ಸಚಿವಾಲಯ.. 1.87 ಲಕ್ಷ ಉದ್ಯೋಗಿಗಳು ಅತಂತ್ರ? - ನಷ್ಟದಲ್ಲಿರುವ ಬಿಎಸ್​ಎನ್​ಎಲ್​​ ಹಾಗೂ ಎಂಟಿಎನ್​ಎಲ್

ನಷ್ಟದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮತ್ತೆ ಲಾಭದ ಹಳಿಗೆ ತರುವ ಸಲುವಾಗಿ ₹74,000 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ನೀಡಲು ದೂರಸಂಪರ್ಕ ಇಲಾಖೆಯ (ಡಿಒಟಿ) ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಬಿಎಸ್​ಎನ್ಎಲ್​ ಹಾಗೂ ಎಂಟಿಎನ್​ಎಲ್
author img

By

Published : Oct 8, 2019, 5:28 PM IST

ನವದೆಹಲಿ: ಸದ್ಯ ನಷ್ಟದಲ್ಲಿರುವ ಬಿಎಸ್​ಎನ್​ಎಲ್​​ ಹಾಗೂ ಎಂಟಿಎನ್​ಎಲ್​ ಮುಚ್ಚಲು ಹಣಕಾಸು ಸಚಿವಾಲಯ ಕೇಂದ್ರಕ್ಕೆ ಸೂಚಿಸಿದೆ.

ನಷ್ಟದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮತ್ತೆ ಲಾಭದ ಹಳಿಗೆ ತರುವ ಸಲುವಾಗಿ ₹74,000 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ನೀಡಲು ದೂರಸಂಪರ್ಕ ಇಲಾಖೆಯ (ಡಿಒಟಿ) ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಬಿಎಸ್​ಎನ್​ಎಲ್​​ ಹಾಗೂ ಎಂಟಿಎನ್​ಎಲ್ ಮುಚ್ಚಲು ಸುಮಾರು ₹95,000 ಕೋಟಿ ವ್ಯಯವಾಗಲಿದೆ ಎಂದು ಭಾರತೀಯ ದೂರಸಂಪರ್ಕ ಸೇವೆ ಅಂದಾಜಿಸಿದೆ. ಆದರೆ, ಇಷ್ಟೊಂದು ಹಣ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಉದ್ಯೋಗಿಗಳ ಕಥೆ ಏನು..?

ನಷ್ಟದಲ್ಲಿರುವ ಬಿಎಸ್​ಎನ್​ಎಲ್​​ ಹಾಗೂ ಎಂಟಿಎನ್​ಎಲ್ ಮುಚ್ಚಲು ಹಣಕಾಸು ಸಚಿವಾಲಯ ಸೂಚನೆ ನೀಡಿದ ವೇಳೆಯಲ್ಲೇ ಉದ್ಯೋಗಿಗಳ ಭವಿಷ್ಯ ಬಗ್ಗೆ ಪ್ರಶ್ನೆ ಎದ್ದಿದೆ. ಒಂದು ವೇಳೆ ಬಿಎಸ್​ಎನ್​ಎಲ್​ ಹಾಗೂ ಎಂಟಿಎನ್​ಎಲ್ ಮುಚ್ಚಿದಲ್ಲಿ ಭಾರತೀಯ ದೂರಸಂಪರ್ಕ ಸೇವೆಯಲ್ಲಿರುವ ಉದ್ಯೋಗಿಗಳನ್ನು ಇತರೆ ವಿಭಾಗಗಳಿಗೆ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

BSNL
ಬಿಎಸ್​ಎನ್ಎಲ್

ಬಿಎಸ್​ಎನ್​ಎಲ್​ನಲ್ಲಿ ಪ್ರಸ್ತುತ 1.65 ಲಕ್ಷ ಉದ್ಯೋಗಿಗಳಿದ್ದಾರೆ. ಆದರೆ, ಈ ಎಲ್ಲಾ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ (ವಿಆರ್​ಎಸ್​) ನೀಡುವುದಿಲ್ಲ ಎಂದು ಬಿಎಸ್​ಎನ್​ಎಲ್​ ಸ್ಪಷ್ಟಪಡಿಸಿದೆ ಎಂದು ತಿಳಿದು ಬಂದಿದೆ. ಬಿಎಸ್​ಎನ್​ಎಲ್​ಗೆ ಹೋಲಿಕೆ ಮಾಡಿದಲ್ಲಿ ಎಂಟಿಎನ್​ಎಲ್ ಉದ್ಯೋಗಿಗಳ ಸಂಖ್ಯೆ ತುಂಬಾ ಕಡಿಮೆ. ಎಂಟಿಎನ್​ಎಲ್​ ಸುಮಾರು 22,000 ಉದ್ಯೋಗಿಗಳನ್ನು ಹೊಂದಿದೆ.

ಬಿಎಸ್​ಎನ್​ಎಲ್ ಹಾಗೂ ಎಂಟಿಎನ್​​ಎಲ್​ ಎರಡೂ ಕಂಪನಿಗಳು ಜುಲೈ ತಿಂಗಳಲ್ಲಿ ಉದ್ಯೋಗಿಗಳಿಗೆ ಸಂಬಳ ನೀಡುವಲ್ಲಿ ವಿಫಲವಾಗಿದ್ವು.

MTNL
ಎಂಟಿಎನ್​ಎಲ್

ಬಿಎಸ್​ಎನ್​ಎಲ್ ಕಂಪನಿಯ ಉದ್ಯೋಗಿಗಳ ತಿಂಗಳ ಸಂಬಳ ಹಾಗೂ ಇನ್ನಿತರ ಖರ್ಚು ₹750ರಿಂದ ₹850 ಕೋಟಿ ಇದ್ದರೆ, ಎಂಟಿಎನ್​ಎಲ್​ ಖರ್ಚು ₹160 ಕೋಟಿ. ನಷ್ಟದಲ್ಲಿ ಸಾಗುತ್ತಿರುವ ಇವೆರಡೂ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಈ ಹಣವನ್ನು ಹೊಂದಿಸುವುದು ಸವಾಲಾಗಿದೆ.

ಬಿಎಸ್​ಎನ್​ಎಲ್ ಹಾಗೂ ಎಂಟಿಎನ್​ಎಲ್​ ನಡುವಿನ ವ್ಯತ್ಯಾಸ ಏನು?

ಭಾರತೀಯ ದೂರಸಂಚಾರ ನಿಗಮ ನಿಯಮಿತ(ಬಿಎಸ್​ಎನ್​ಎಲ್​) ಹಾಗೂ ಮಹಾನಗರ ದೂರಸಂಪರ್ಕ ನಿಗಮ ನಿಯಮಿತ(ಎಂಟಿಎನ್​ಎಲ್)​ ಪದಗಳನ್ನು ಕೇಳದ ಮಂದಿ ತುಂಬಾ ವಿರಳ ಎನ್ನಬಹುದು. ಆದರೆ, ಆ ಪದವನ್ನು ಕೇಳಿದ ಬಹುತೇಕರಿಗೆ ಈ ಕಂಪನಿಗಳ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ಬಿಎಸ್​ಎನ್​ಎಲ್​ ಹಾಗೂ ಎಂಟಿಎನ್​ಎಲ್ ಸರ್ಕಾರದ ಅಡಿಯಲ್ಲಿ ಬಂದರೂ ಇವೆರಡೂ ಸೇವೆ ನೀಡುವ ವಿಚಾರದಲ್ಲಿ ಭಿನ್ನತೆ ಹೊಂದಿವೆ.

ಎಂಟಿಎನ್​ಎಲ್ ಭಾರತದ ಪ್ರಮುಖ ನಾಲ್ಕು ನಗರಗಳಾದ​ ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಚೆನ್ನೈ ನಗರಗಳಲ್ಲಿ ಸೇವೆ ಒದಗಿಸುತ್ತಿದೆ. ಆದರೆ, ಬಿಎಸ್​ಎನ್​ಎಲ್​ ಮುಂಬೈನ ಕೆಲ ಭಾಗಗಳನ್ನು ಹೊರತುಪಡಿಸಿ ಭಾರತದಾದ್ಯಂತ ಸೇವೆ ನೀಡುತ್ತಿದೆ.

Intro:Body:

ಬಿಎಸ್​ಎನ್ಎಲ್​

ನವದೆಹಲಿ: ಸದ್ಯ ನಷ್ಟದಲ್ಲಿರುವ ಬಿಎಸ್​ಎನ್​ಎಲ್​​ ಹಾಗೂ ಎಂಟಿಎನ್​ಎಲ್​ ಮುಚ್ಚಲು ಹಣಕಾಸು ಸಚಿವಾಲಯ ಕೇಂದ್ರಕ್ಕೆ ಸೂಚಿಸಿದೆ.

ನಷ್ಟದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮತ್ತೆ ಲಾಭದ ಹಳಿಗೆ ತರುವ ಸಲುವಾಗಿ ₹74,000 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ನೀಡಲು ದೂರಸಂಪರ್ಕ ಇಲಾಖೆಯ (ಡಿಒಟಿ) ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.

ಒಂದು ವೇಳೆ ಬಿಎಸ್​ಎನ್​ಎಲ್​​ ಹಾಗೂ ಎಂಟಿಎನ್​ಎಲ್ ಮುಚ್ಚಿದಲ್ಲಿ ಭಾರತೀಯ ದೂರಸಂಪರ್ಕ ಸೇವೆಯಲ್ಲಿರುವ ಉದ್ಯೋಗಿಗಳನ್ನು ಇತರೆ ವಿಭಾಗಗಳಿಗೆ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಎಸ್​ಎನ್​ಎಲ್​​ ಹಾಗೂ ಎಂಟಿಎನ್​ಎಲ್ ಮುಚ್ಚಲು ಸುಮಾರು ₹95,000 ಕೋಟಿ ವ್ಯಯವಾಗಲಿದೆ ಎಂದು ಭಾರತೀಯ ದೂರಸಂಪರ್ಕ ಸೇವೆ ಅಂದಾಜಿಸಿದೆ, ಆದರೆ ಇಷ್ಟೊಂದು ಹಣ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಉದ್ಯೋಗಿಗಳ ಕಥೆ ಏನು..?

ನಷ್ಟದಲ್ಲಿರುವ ಬಿಎಸ್​ಎನ್​ಎಲ್​​ ಹಾಗೂ ಎಂಟಿಎನ್​ಎಲ್ ಮುಚ್ಚಲು ಹಣಕಾಸು ಸಚಿವಾಲಯ ಸೂಚನೆ ನೀಡಿದ ವೇಳೆಯಲ್ಲೇ ಉದ್ಯೋಗಿಗಳ ಭವಿಷ್ಯ ಬಗ್ಗೆ ಪ್ರಶ್ನೆ ಎದ್ದಿದೆ.

ಬಿಎಸ್​ಎನ್​ಎಲ್​ನಲ್ಲಿ ಪ್ರಸ್ತುತ 1.65 ಲಕ್ಷ ಉದ್ಯೋಗಿಗಳಿದ್ದಾರೆ. ಆದರೆ ಈ ಎಲ್ಲಾ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ (ವಿಆರ್​ಎಸ್​) ನೀಡುವುದಿಲ್ಲ ಎಂದು ಬಿಎಸ್​ಎನ್​ಎಲ್​ ಸ್ಪಷ್ಟಪಡಿಸಿದೆ ಎಂದು ತಿಳಿದು ಬಂದಿದೆ.

ಬಿಎಸ್​ಎನ್​ಎಲ್​ಗೆ ಹೋಲಿಕೆ ಮಾಡಿದಲ್ಲಿ ಎಂಟಿಎನ್​ಎಲ್ ಉದ್ಯೋಗಿಗಳ ಸಂಖ್ಯೆ ತುಂಬಾ ಕಡಿಮೆ. ಎಂಟಿಎನ್​ಎಲ್​ ಸುಮಾರು 22,000 ಉದ್ಯೋಗಿಗಳನ್ನು ಹೊಂದಿದೆ.

ಬಿಎಸ್​ಎನ್​ಎಲ್ ಹಾಗೂ ಎಂಟಿಎನ್​​ಎಲ್​ ಎರಡೂ ಕಂಪೆನಿಗಳು ಜುಲೈ ತಿಂಗಳಲ್ಲಿ ಉದ್ಯೋಗಿಗಳಿಗೆ ಸಂಬಳ ನೀಡುವಲ್ಲಿ ವಿಫಲವಾಗಿತ್ತು. 

ಬಿಎಸ್​ಎನ್​ಎಲ್ ಕಂಪೆನಿಯ ಉದ್ಯೋಗಿಗಳ ತಿಂಗಳ ಸಂಬಳ ಹಾಗೂ ಇನ್ನಿತರ ಖರ್ಚು ₹750ರಿಂದ ₹850 ಕೋಟಿ ಇದ್ದರೆ, ಎಂಟಿಎನ್​ಎಲ್​ ಖರ್ಚು ₹160 ಕೋಟಿ. ನಷ್ಟದಲ್ಲಿ ಸಾಗುತ್ತಿರುವ ಇವೆರಡೂ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಈ ಹಣವನ್ನು ಹೊಂದಿಸುವುದು ಸವಾಲಾಗಿದೆ.

ಬಿಎಸ್​ಎನ್​ಎಲ್ ಹಾಗೂ ಎಂಟಿಎನ್​ಎಲ್​ ನಡುವಿನ ವ್ಯತ್ಯಾಸ ಏನು..?

ಭಾರತೀಯ ದೂರಸಂಚಾರ ನಿಗಮ ನಿಯಮಿತ(ಬಿಎಸ್​ಎನ್​ಎಲ್​) ಹಾಗೂ ಮಹಾನಗರ ದೂರಸಂಪರ್ಕ ನಿಗಮ ನಿಯಮಿತ(ಎಂಟಿಎನ್​ಎಲ್)​ ಪದಗಳನ್ನು ಕೇಳದ ಮಂದಿ ತುಂಬಾ ವಿರಳ ಎನ್ನಬಹುದು. ಆದರೆ ಆ ಪದವನ್ನು ಕೇಳಿದ ಬಹುತೇಕರಿಗೆ ಈ ಕಂಪೆನಿಗಳ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ.

ಬಿಎಸ್​ಎನ್​ಎಲ್​ ಹಾಗೂ ಎಂಟಿಎನ್​ಎಲ್ ಸರ್ಕಾರ ಅಡಿಯಲ್ಲಿ ಬಂದರೂ ಇವೆರಡೂ ಸೇವೆ ನೀಡುವ ವಿಚಾರದಲ್ಲಿ ಭಿನ್ನತೆ ಹೊಂದಿದೆ. 

ಎಂಟಿಎನ್​ಎಲ್ ಭಾರತದ ಪ್ರಮುಖ ನಾಲ್ಕು ನಗರಗಳಾದ​ ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಚೆನ್ನೈಗಳಲ್ಲಿ ಸೇವೆ ಒದಗಿಸುತ್ತಿದೆ. ಆದರೆ ಬಿಎಸ್​ಎನ್​ಎಲ್​ ಮುಂಬೈನ ಕೆಲ ಭಾಗಗಳನ್ನು ಹೊರತುಪಡಿಸಿ ಭಾರತದಾದ್ಯಂತ ಸೇವೆ ನೀಡುತ್ತಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.