ETV Bharat / business

ಸರ್ಕಾರಿ ವ್ಯವಹಾರ ನಡೆಸಲು ಖಾಸಗಿ ಬ್ಯಾಂಕ್​ಗಳಿಗೆ ಅವಕಾಶ: ಪ್ರೈವೇಟ್​ ತೆಕ್ಕೆಗೆ ಯಾವೆಲ್ಲಾ ವಹಿವಾಟು? - ಖಾಸಗಿ ಬ್ಯಾಂಕ್​ಗಳ ಸರ್ಕಾರಿ ವಹಿವಾಟು

ಕೇಂದ್ರ ಮತ್ತು ರಾಜ್ಯ ಸರ್ಕಾರಿ ವ್ಯವಹಾರಗಳನ್ನು ಕೈಗೊಳ್ಳಲು ಸರ್ಕಾರವು ಖಾಸಗಿ ವಲಯದ ಬ್ಯಾಂಕ್​ಗಳ ಮೇಲಿನ ನಿರ್ಬಂಧ ತೆಗೆದುಹಾಕಿದೆ. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್​ನಂತಹ ಮೂರು ದೊಡ್ಡ ಖಾಸಗಿ ಬ್ಯಾಂಕ್​ಗಳಿಗೆ ಸೀಮಿತ ರೀತಿಯಲ್ಲಿ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತಿದೆ.

ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
author img

By

Published : Feb 24, 2021, 7:39 PM IST

ನವದೆಹಲಿ: ಖಾಸಗಿ ಬ್ಯಾಂಕ್​ಗಳಿಗೆ ಸರ್ಕಾರಿ ವ್ಯವಹಾರ ನಡೆಸಲು ಸಹ ಅವಕಾಶ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿ ತಿಳಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ವ್ಯವಹಾರಗಳನ್ನು ಕೈಗೊಳ್ಳಲು ಸರ್ಕಾರವು ಖಾಸಗಿ ವಲಯದ ಬ್ಯಾಂಕ್​ಗಳ ಮೇಲಿನ ನಿರ್ಬಂಧ ತೆಗೆದುಹಾಕಿದೆ. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್​ನಂತಹ ಮೂರು ದೊಡ್ಡ ಖಾಸಗಿ ಬ್ಯಾಂಕ್​ಗಳಿಗೆ ಸೀಮಿತ ರೀತಿಯಲ್ಲಿ ವಹಿವಾಟು ನಡೆಸಲು ಅನುಮಾಡಿಕೊಡುತ್ತಿದೆ.

ಈ ಅನುಮತಿಯೊಂದಿಗೆ ಎಲ್ಲಾ ಬ್ಯಾಂಕ್​ಗಳಿಗೆ ಸರ್ಕಾರಕ್ಕೆ ಸಂಬಂಧಿಸಿದ ಬ್ಯಾಂಕಿಂಗ್ ವಹಿವಾಟುಗಳಾದ ತೆರಿಗೆ ಮತ್ತು ಇತರ ಆದಾಯ ಪಾವತಿ ಸೌಲಭ್ಯಗಳು, ಪಿಂಚಣಿ ಪಾವತಿಗಳು, ಸಣ್ಣ ಉಳಿತಾಯ ಯೋಜನೆಗಳು ಇತ್ಯಾದಿಗಳನ್ನು ನಡೆಸಲು ಅವಕಾಶವಿರುತ್ತದೆ.

ಖಾಸಗಿ ಬ್ಯಾಂಕ್​ಗಳಿಗೆ ಸರ್ಕಾರಿ ವ್ಯವಹಾರ ನೀಡುವಲ್ಲಿನ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಎಲ್ಲ ಬ್ಯಾಂಕ್​ಗಳು ಈಗ ಭಾಗವಹಿಸಬಹುದು. ಖಾಸಗಿ ಬ್ಯಾಂಕ್​ಗಳು ಈಗ ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರಾಗಬಹುದು. ಸರ್ಕಾರದ ಸಾಮಾಜಿಕ ವಲಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಗ್ರಾಹಕರ ಅನುಕೂಲವನ್ನೂ ವೃದ್ಧಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಟ್ವಿಟರ್​ನಲ್ಲಿ ತಿಳಿಸಿದೆ.

ಈ ನಿರ್ಧಾರ ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಕ್ರಿಪ್ಟೋಕರೆನ್ಸಿಗೆ RBI ಕಳವಳ: 'ಪ್ರತ್ಯೇಕ ಡಿಜಿಟಲ್ ಕರೆನ್ಸಿ​ ರೂಪಿಸುತ್ತಿರುವ ಕೇಂದ್ರ ಬ್ಯಾಂಕ್'​- ದಾಸ್​

ಹೊಸ ರೀತಿಯ ಬ್ಯಾಂಕಿಂಗ್ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿ ಇರುವ ಖಾಸಗಿ ವಲಯದ ಬ್ಯಾಂಕ್​ಗಳು ಇನ್ನು ಮುಂದೆ ಸರ್ಕಾರದ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಚಟುವಟಿಕೆಗಳ ಭಾಗವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಕೇಂದ್ರ ತನ್ನ ನಿರ್ಧಾರವನ್ನು ಆರ್‌ಬಿಐಗೆ ತಿಳಿಸಿದೆ. ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ಖಾಸಗಿ ವಲಯದ ಬ್ಯಾಂಕಿಂಗ್ ಷೇರು ಮೌಲ್ಯ ಮಾರುಕಟ್ಟೆಯಲ್ಲಿ ಏರಿಕೆಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.