ನವದೆಹಲಿ: ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 8.38 ರೂ.ಗಳಷ್ಟು ಕುಸಿದಿದ್ದರಿಂದ ದೆಹಲಿಯ ಗ್ರಾಹಕರು ಅಂತಿಮವಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಒಂದು ತಿಂಗಳ ಬಳಿಕ ಮೊದಲಿನಂತೆ ಪೆಟ್ರೋಲ್ಗಿಂತ ಡೀಸೆಲ್ ದರ ಕಡಿಮೆಯಾಗಿದೆ.
ಪೆಟ್ರೋಲ್ಗಿಂತ ಡೀಸೆಲ್ ಬೆಲೆ ಹೆಚ್ಚಿರುವ ದೇಶದ ಏಕೈಕ ಪ್ರಮುಖ ನಗರ ದೆಹಲಿಯಾಗಿತ್ತು. ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇಕಡಾ 30 ರಿಂದ ಶೇಕಡಾ 16ಕ್ಕೆ ಇಳಿಕೆ ಮಾಡಿ ದೆಹಲಿ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಲೀಟರ್ಗೆ 81.94 ರೂ. ಇದ್ದ ಡೀಸೆಲ್ ಬೆಲೆ ಇಂದು 73.56 ರೂ. ಇಳಿಕೆಯಾಗಿದೆ. ಜೂನ್ 29 ರಿಂದಲೂ ಪೆಟ್ರೋಲ್ ದರ 80.43 ರೂ. ಇದೆ.
ದೆಹಲಿ ಹೊರತುಪಡಿಸಿ ದೇಶದ ಇತರ ಮೆಟ್ರೋ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. (ಲೀಟರ್ ಬೆಲೆ -ರೂಪಾಯಿಗಳಲ್ಲಿ)
ನಗರ | ಪೆಟ್ರೋಲ್ | ಡೀಸೆಲ್ |
ದೆಹಲಿ | 80.43 | 73.56 |
ಮುಂಬೈ | 87.19 | 80.11 |
ಕೋಲ್ಕತ್ತಾ | 82.10 | 77.04 |
ಬೆಂಗಳೂರು | 83.04 | 77.88 |
ಚೆನ್ನೈ | 83.63 | 78.87 |