ETV Bharat / business

ವಾಹನೋದ್ಯಮ ಬಳಿಕ ಜವಳಿ ಉದ್ಯಮ ಕುಸಿತ: 5 ವರ್ಷ ಕನಿಷ್ಠ ಮಟ್ಟಕ್ಕೆ ಕಾಟನ್​ ಯಾರ್ನ್​

author img

By

Published : Sep 3, 2019, 3:15 PM IST

ಜವಳಿ ವಲಯದ ಉತ್ಪನ್ನವಾರು ದತ್ತಾಶಂಗಳ ವಿಶ್ಲೇಷಣೆಯ ಅನ್ವಯ, ಗಾರ್ಮೆಂಟ್ಸ್​ ಮತ್ತು ಸಿದ್ಧ ಉಡುಪುಗಳ ರಫ್ತಿನಲ್ಲಿಯೂ ಇಳಿಕೆ ಕಂಡುಬಂದಿದೆ. ಕಾಟನ್​ ಯಾರ್ನ್​/ ಫ್ಯಾಬ್ರಿಕ್ಸ್​ ರಫ್ತು ಸಹ ಕ್ಷೀಣಿಸಿದೆ. ಕಳೆದ ನಾಲ್ಕು ತಿಂಗಳಿಂದ ಸತತ ಕುಸಿತದ ಹಾದಿಯಲ್ಲಿರುವ ಕಾಟನ್​ ಯಾರ್ನ್​,​ ಶೇ 35ರಷ್ಟು ಕ್ಷೀಣಿಸಿದೆ. ಇದು ಉದ್ಯಮವನ್ನು ಆತಂಕಕ್ಕೆ ದೂಡಿದೆ. ತಿಂಗಳವಾರು ಕಾಟನ್​ ಯಾರ್ನ್​ ರಫ್ತು ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಅದು 59- 60 ಮಿಲಿಯನ್​ ಕೆ.ಜಿ.ಗೆ ತಲುಪಿದೆ ಎಂದು ಕಾಟನ್​ ಜವಳಿ ರಫ್ತು ಪ್ರಚಾರ ಮಂಡಳಿಯ ಅಧ್ಯಕ್ಷ ಡಾ. ಕೆ.ವಿ. ಶ್ರೀನಾಸನ್​ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಮಾರಾಟ ಮತ್ತು ಉತ್ಪಾದನೆಯ ಕಡಿತದಿಂದ ಈಗಾಗಲೇ ಕುಸಿತದ ಹಾದಿ ಹಿಡಿದ ವಾಹನೋದ್ಯಮ ಕ್ಷೇತ್ರದ ಬಳಿಕ ಜವಳಿ ಉದ್ಯಮದ ಬೆಳವಣಿಗೆ ಸಹ ಕುಂಠಿತಗೊಂಡಿದೆ.

2019ರ ಏಪ್ರಿಲ್​- ಜುಲೈ ಅವಧಿಯಲ್ಲಿ ಜವಳಿಯ ರಫ್ತು ವಿಭಾಗವು ಶೇ 24.5ರಷ್ಟು ಕುಸಿತ ಕಂಡಿದ್ದು, ಆಗಸ್ಟ್​ ತಿಂಗಳ ಮೊದಲ ಮೂರು ವಾರಗಳ ಪ್ರಗತಿಯ ವೃದ್ಧಿಯು ಶೇ 25ಕ್ಕೆ ತಲುಪಿದೆ. ತಿಂಗಳಿಂದ ತಿಂಗಳಿಗೆ ಕ್ಷೀಣಿಸುವಿಕೆ ಗೆರೆ ಇಳಿಮುಖವಾಗುತ್ತಾ ಸಾಗುತ್ತಿದೆ.

ಜವಳಿ ವಲಯದ ಉತ್ಪನ್ನವಾರು ದತ್ತಾಶಂಗಳ ವಿಶ್ಲೇಷಣೆಯ ಅನ್ವಯ, ಗಾರ್ಮೆಂಟ್ಸ್​ ಮತ್ತು ಸಿದ್ಧ ಉಡುಪುಗಳ ರಫ್ತಿನಲ್ಲಿಯೂ ಇಳಿಕೆ ಕಂಡುಬಂದಿದೆ. ಕಾಟನ್​ ಯಾರ್ನ್​/ ಫ್ಯಾಬ್ರಿಕ್ಸ್​ ರಫ್ತು ಸಹ ಕ್ಷೀಣಿಸಿದೆ. ಕಳೆದ ನಾಲ್ಕು ತಿಂಗಳಿಂದ ಸತತ ಕುಸಿತದ ಹಾದಿಯಲ್ಲಿರುವ ಕಾಟನ್​ ಯಾರ್ನ್​,​ ಶೇ 35ರಷ್ಟು ಕ್ಷೀಣಿಸಿದೆ. ಇದು ಉದ್ಯಮವನ್ನು ಆತಂಕಕ್ಕೆ ದೂಡಿದೆ. ತಿಂಗಳವಾರು ಕಾಟನ್​ ಯಾರ್ನ್​ ರಫ್ತಿನಲ್ಲಿ ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಅದು 59- 60 ಮಿಲಿಯನ್​ ಕೆ.ಜಿ.ಗೆ ತಲುಪಿದೆ ಎಂದು ಕಾಟನ್​ ಜವಳಿ ರಫ್ತು ಪ್ರಚಾರ ಮಂಡಳಿಯ ಅಧ್ಯಕ್ಷ ಡಾ. ಕೆ.ವಿ. ಶ್ರೀನಾಸನ್​ ತಿಳಿಸಿದ್ದಾರೆ.

ಭಾರತೀಯ ಜವಳಿಗೆ ಚೀನಾದಲ್ಲಿ ಯಥೇಚ್ಛ ಬೇಡಿಕೆ ಇದೆ. ಆದರೆ, ಆ ರಾಷ್ಟ್ರ ಶೇ 50ರಷ್ಟು ಆಮದನ್ನು ಕಡಿತಗೊಳಿಸಿದೆ. ಇದರ ಜೊತೆಗೆ ಬಾಂಗ್ಲಾ ಶೇ 38ರಷ್ಟು ಹಾಗೂ ಕೊರಿಯಾ ಶೇ 45ರಷ್ಟು ಆಮದನ್ನು ಕಡಿಮೆ ಮಾಡಿದೆ ಎಂದು ಹೇಳಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.